Shivarajkumar ಮನೆಗೆ ನಟ ಪ್ರಕಾಶ್‌ರಾಜ್ ಭೇಟಿ!
ಭೇಟಿ ಆದ್ರೂ ಇಬ್ಬರು ಸ್ಟಾರ್ ನಟರು. ಮಧು ಬಂಗಾರಪ್ಪ ಜೊತೆ ನೋಡಿ ಸಿನಿಮಾ ಪ್ಲ್ಯಾನ್ ಎಂದ ನೆಟ್ಟಿಗರು.
ಶಿವಣ್ಣ ಜೊತೆ ಪ್ರಕಾಶ್
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ನಟ ಪ್ರಕಾಶ್‌ರಾಜ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರಣ ಹೇಳಿ ಎಂದು ಡಿಮ್ಯಾಂಡ್ ಮಾಡಿದ ನೆಟ್ಟಿಗರು.
ಕುಶಲೋಪರಿ ವಿಚಾರಿಸಿದ ನಟ
ಬಹುಭಾಷಾ ನಟ ಪ್ರಕಾಶ್‌ರಾಜ್ ಶಿವರಾಜ್ ಕುಮಾರ್ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದೊಂದು ಸೌಹಾರ್ದ ಭೇಟಿಯಾಗಿದ್ದು ನಿರ್ಮಾಪಕ ಮಧು ಬಂಗಾರಪ್ಪ ಈ ವೇಳೆ ಹಾಜರಿದ್ದರು.
ಫೋಟೋ ವೈರಲ್
ಈ ಫೋಟೋಗಳನ್ನು ಮಧು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ಖ್ಯಾತ ನಟ, ಆತ್ಮೀಯ ಸ್ನೇಹಿತರಾಗಿರುವ ಪ್ರಕಾಶ್ ರಾಜ್ ನನ್ನ ಬಾವ ಶಿವಣ್ಣ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದೆವು’ ಎಂದಿದ್ದಾರೆ.
ಶಿವಣ್ಣ ನಿವಾಸಕ್ಕೆ ಸ್ಟಾರ್‌ಗಳ ಭೇಟಿ
ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಭಾರತೀಯ ಸಿನಿ ರಂಗವೇ ಡಾ.ರಾಜ್‌ಕುಮಾರ್ ಕುಟುಂಬವನ್ನು ಭೇಟಿ ಮಾಡುತ್ತಿದೆ. ಪ್ರಕಾಶ್ ಎರಡನೇ ಸಲ ಶಿವಣ್ಣರನ್ನು ಭೇಟಿ ಮಾಡುತ್ತಿರುವುದು.
ಜೇಮ್ಸ್‌ಗೆ ಅಡ್ಡಿ
ಆರ್‌ಆರ್‌ಆರ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಸಿನಿಮಾ ಅಡ್ಡಿಯಾಗುತ್ತಿದೆ, ಈ ರೀತಿ ಮಾಡಬೇಡಿ ಎಂದು ಶಿವಣ್ಣ ಮತ್ತು ನಿರ್ದೇಶಕ ಚೇತನ್ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಕಾಶ್ ಟ್ರೋಲ್
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್ ರಾಜ್ ಟ್ವೀಟ್ ಈಗ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.