- Home
- Entertainment
- Sandalwood
- ದಯವಿಟ್ಟು ಬಡವರಿಗೆ, ಅಸಾಯಕರಿಗೆ ಸಹಾಯ ಹಸ್ತ ನೀಡಿ; ಬರ್ತಡೇಗೆ ಬ್ರೇಕ್ ಹಾಕಿದ ಪ್ರಜ್ವಲ್ ದೇವರಾಜ್
ದಯವಿಟ್ಟು ಬಡವರಿಗೆ, ಅಸಾಯಕರಿಗೆ ಸಹಾಯ ಹಸ್ತ ನೀಡಿ; ಬರ್ತಡೇಗೆ ಬ್ರೇಕ್ ಹಾಕಿದ ಪ್ರಜ್ವಲ್ ದೇವರಾಜ್
ಈ ವರ್ಷವೂ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ ಪ್ರಜ್ವಲ್ ದೇವರಾಜ್. ಯಾವಾಗ ಸಗ್ತೀರಾ ಎಂದು ಅಭಿಮಾನಿಗಳು ಕಾಮೆಂಟ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೂನ್ 4ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಹಾಗೆ ಅಭಿಮಾನಿಗಳಲ್ಲಿ ಮನವಿ ಒಂದನ್ನು ಇಟ್ಟಿದ್ದಾರೆ.
'ನನ್ನ ಆತ್ಮೀಯ ಗೆಳೆಯರೇ, ಜುಲೈ 4ರಂದು ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಈ ವರ್ಷ ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಕ್ಷಮೆ ಇರಲಿ.
ಪ್ರತಿ ಸಲ ನನ್ನ ಜೊತೆ ಹಾಗೂ ನಿಮ್ಮ ಊರುಗಳಲ್ಲಿ, ನಗರಗಳಲ್ಲಿ ನಿಮ್ಮ ಪ್ರೀತಿ ಅಭಿಮಾನವನ್ನು ಅನಾಥಾಶ್ರಮಗಳಲ್ಲಿ ವೃದ್ಧಾಶ್ರಮಗಳಲ್ಲಿ ಅನ್ನದಾನ, ಸಿಹಿ ಹಂಚುವುದು ರಕ್ತದಾನ ಹೀಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತ ಬಂದಿದ್ದೀರಿ.
ಈ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರರುಣಿ. ಈ ವರ್ಷ ನಿಮ್ಮ ಊರಿನಲ್ಲಿ ನಿಮ್ಮ ಅಕ್ಕ ಪಕ್ಕದ ಶಾಲೆಗಳಲ್ಲಿ ಆಶ್ರಮಗಳಲ್ಲಿ ಬಡವರಿಗೆ, ಅಸಾಯಕರಿಗೆ ಸಹಾಯ ಹಸ್ತವನ್ನು ನೀಡುವ ಮುಖಾಂತರ ಆಚರಿಸಿ ಎಂದು ಈ ಮೂಲಕ ನನ್ನ ಗೆಳೆಯಲ್ಲಿ ಮನವಿ.
ಮುಂದಿನ ವರ್ಷ ಖಂಡಿ ಸೇರೋಣ. ಇಂತಿ ನಿಮ್ಮ ಪ್ರೀತಿಯ ಪ್ರಜ್ವಲ್ ದೇವರಾಜ್ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಲಾಗಿದೆ. ಕಾಮೆಂಟ್ಸ್‌ನಲ್ಲಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೇಸರದ ಸಂಗತಿಗಳಿಲೋ ಅಥವಾ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿರುವುದಕ್ಕೋ ಏನೋ ಪ್ರಜ್ವಲ್ ಆಚರಿಸುತ್ತಿಲ್ಲ ಎಂದು ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ.
ಪ್ರಜ್ವಲ್ ನಟನೆಯ ರಾಕ್ಷಸ, ಕರಾವಳಿ, ಗನಾ ಮತ್ತು ಮಾಫಿಯಾ ಸಿನಿಮಾ ರಿಲೀಸ್ ಆಗಬೇಕಿದೆ. ಕೈಯಲ್ಲಿ ನಾಲ್ಕೈದು ಸಿನಿಮಾಗಳಿದೆ. ಈ ವರ್ಷ ಹುಟ್ಟುಹಬ್ಬಕ್ಕೆ ಮತ್ತೆ ಯಾವ ಸಿನಿಮಾ ಘೋಷಣೆ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.