Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಮೊದಲ ಬಾರಿಗೆ ಕೀನ್ಯಾ ದೇಶಕ್ಕೆ ಭೇಟಿ ಕೊಟ್ಟನಟ Ganesh!

ಮೊದಲ ಬಾರಿಗೆ ಕೀನ್ಯಾ ದೇಶಕ್ಕೆ ಭೇಟಿ ಕೊಟ್ಟನಟ Ganesh!

ಬಾನದಾರಿಯಲ್ಲಿ ಚಿತ್ರದ ಶೂಟಿಂಗ್‌ ಆರಂಭ. ಸೋಷಿಯಲ್ ಮೀಡಿಯಾದಲ್ಲಿ ಕೀನ್ಯಾ ಫೋಟೋ ಮತ್ತು ವಿಡಿಯೋ ಹಂಚಿಕೊಂಡ ನಟ.

Vaishnavi Chandrashekar | Published : Sep 26 2022, 08:52 AM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
16
Asianet Image

ನಟ ಗಣೇಶ್‌ ಮತ್ತವರ ತಂಡ ಮೊದಲ ಬಾರಿಗೆ ಕೀನ್ಯಾ ದೇಶಕ್ಕೆ ಭೇಟಿ ಕೊಟ್ಟಿದೆ. ಸಾಕಷ್ಟುಬಾರಿ ವಿದೇಶಗಳು ಸುತ್ತಿದ್ದರೂ ನಟ ಗಣೇಶ್‌ ಅವರು ತಮ್ಮ ಅಭಿನಯದ ಚಿತ್ರದ ಶೂಟಿಂಗ್‌ಗಾಗಿ ಮೊದಲ ಬಾರಿಗೆ ಆಫ್ರಿಕಾದ ಕೀನ್ಯಾದಲ್ಲಿ ಬೀಡುಬಿಟ್ಟಿದ್ದಾರೆ. 

26
Asianet Image

 ಪ್ರೀತಮ್‌ ಗುಬ್ಬಿ ನಿರ್ದೇಶನ ‘ಬಾನದಾರಿಯಲ್ಲಿ’ ಚಿತ್ರದ ಶೂಟಿಂಗ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೀನ್ಯಾದ ಮಾರುಕಟ್ಟೆಯೊಂದರಲ್ಲಿ ನಟ ಗಣೇಶ್‌ ಅವರು ಕುಣಿತ್ತಾ ಹೆಜ್ಜೆ ಹಾಕುತ್ತಿರುವ ವಿಡಿಯೋವನ್ನು ಸ್ವತಃ ಗಣೇಶ್‌ ಅವರೇ ಹಂಚಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. 

36
Asianet Image

 ‘ಕೀನ್ಯಾದಲ್ಲಿ ಮೊದಲ ಮೊದಲ ದಿನದ ಶೂಟಿಂಗ್‌ ಆರಂಭವಾಗಿದೆ’ ಎಂದು ಗಣೇಶ್‌ ಬರೆದುಕೊಂಡಿದ್ದಾರೆ. ರಂಗಾಯಣ ರಘು ಕೂಡ ಕೀನ್ಯಾದಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ರುಕ್ಮಿಣಿ ವಸಂತ್‌, ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯರು.

46
Asianet Image

 ಕಳೆದ ಒಂದು ವಾರದ ಹಿಂದೆಯಷ್ಟೆಮಂಗಳೂರು ಬೀಚ್‌ನಲ್ಲಿ ಚಿತ್ರೀಕರಣ ಮಾಡಿಕೊಂಡ ಚಿತ್ರತಂಡ, ಚಿತ್ರದ ನಾಯಕಿ ರುಕ್ಮಿಣಿ ವಸಂತ್‌ ಅವರು ಬೀಚ್‌ನಲ್ಲಿ ಸರ್ಫಿಂಗ್‌ ಮಾಡುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿ ಕುತೂಹಲ ಮೂಡಿಸಿತ್ತು. 

56
Asianet Image

ಈಗ ಕೀನ್ಯಾದಲ್ಲಿ ಚಿತ್ರೀಕರಣ ಮಾಡುವ ಮೂಲಕ ಸದ್ದು ಮಾಡಿದೆ. ಅಡ್ವೆಂಚರ್‌ ಹಾಗೂ ಥ್ರಿಲ್ಲಿಂಗ್‌ ಪ್ರೇಮ ಕತೆಯ ಸಿನಿಮಾ ಇದಾಗಿದೆ. ಅಡ್ವೆಂಚರ್‌ ಚಿತ್ರದ ಪ್ರಧಾನ ಅಂಶ. ಹೀಗಾಗಿ ಕೀನ್ಯಾದಲ್ಲೂ ಚಿತ್ರೀಕರಣ ಮಾಡಲಾಗುತ್ತಿದೆ.

66
Asianet Image

ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಗಣೇಶ್ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ರುಕ್ಮಿಣಿ ಈ ಧಾರಾವಾಹಿಯಲ್ಲಿ ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

Vaishnavi Chandrashekar
About the Author
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ. Read More...
ಸ್ಯಾಂಡಲ್‌ವುಡ್
ರುಕ್ಮಿಣಿ ವಸಂತ್
 
Recommended Stories
Top Stories