ಎದೆಯ ಮೇಲೆ ದರ್ಶನ್ ಟ್ಯಾಟೂ ಹಾಕಿಸಿಕೊಂಡ ಮಹಿಳಾ ಅಭಿಮಾನಿ; ಫೋಟೋ ವೈರಲ್!
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿ ವಿಡಿಯೋ ವೈರಲ್. ಮಂಗಳ ಟ್ಯಾಟೂ ನೋಡಿ ಎಲ್ಲರಿಗೂ ಶಾಕ್.
ಕನ್ನಡ ಚಿತ್ರರಂಗದ ನಟ ದರ್ಶನ್ ಅಪ್ಪಟ ಅಭಿಮಾನಿಯಾಗಿರುವ ಮಂಗಳಾ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.
ಮಂಗಳ ಮಂಗಳ 33267 ಅನ್ನೋ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಅಭಿಮಾನಿ ಅಪ್ಪಟ ಅಭಿಮಾನಿ ಆಗಿದ್ದು, ಸಂಪೂರ್ಣವಾಗಿ ದರ್ಶನ್ ರೀಲ್ಸ್ ಮಾಡಿದ್ದಾರೆ.
ದರ್ಶನ್ ಪರ ವಿರುದ್ಧ ಏನೇ ಆದರೂ ಅದರ ಬಗ್ಗೆ ತಮ್ಮ ಖಾತೆಯಲ್ಲಿ ಚರ್ಚೆ ಮಾಡುತ್ತಾರೆ. ದರ್ಶನ್ ಪರ ಧ್ವನಿ ಎತ್ತುತ್ತಾರೆ. ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಎದೆ ಮೇಲೆ ದರ್ಶನ್ ಮುಖವನ್ನು ಟ್ಯಾಟೂ ಹಾಕಿಸಿಕೊಂಡು ಅದರಲ್ಲಿ ಡಿ-ಬಾಸ್ ಎಂದು ಬರೆಸಿಕೊಂಡಿದ್ದಾರೆ. ಈ ಅಭಿಮಾನಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.
ಈ ವರ್ಷ ದರ್ಶನ್ ಹುಟ್ಟುಹಬ್ಬದ ದಿನ ಆರ್‌ಆರ್ ನಗರಕ್ಕೆ ಆಗಮಿಸಿದ ಮಂಗಳಾ ಜನರ ಪ್ರತಿಕ್ರಿಯೆ ನೋಡಿ ಶಾಕ್ ಆಗಿದ್ದಾರೆ. ನನಗೂ ಅಭಿಮಾನಿಗಳು ಇದ್ದಾರೆ ಎಂದು ಖುಷಿಯಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಬಹುಷ ಟ್ಯಾಟೂ ಹಾಕಿಸಿಕೊಂಡಿರುವ ಮೊದಲ ಮಹಿಳಾ ಅಭಿಮಾನಿ ಮಂಗಳಾ ಅನಿಸುತ್ತದೆ. ಹೀಗಾಗಿ ದರ್ಶನ್ ಅಭಿಮಾನಿಗಳು ಮಂಗಳಾಗೆ ಸಪೋರ್ಟ್ ಮಾಡುತ್ತಾರೆ.