ಹಳದಿ ಸಂಭ್ರಮದಲ್ಲಿ ಮಿಂದೆದ್ದ ನಟ ಧನಂಜಯ, ಧನ್ಯತಾ; ಸುಂದರ ಫೋಟೋಗಳು ಇಲ್ಲಿವೆ!
ನಟ ಧನಂಜಯ ಅವರು ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರಿನಲ್ಲಿ ಅಭಿಮಾನಿಗಳಿಗೆ ವಿಶೇಷ ಔತಣವನ್ನು ಏರ್ಪಡಿಸಲಾಗಿದ್ದು, ಫೆಬ್ರವರಿ 15 ಮತ್ತು 16 ರಂದು ವಸ್ತುಪ್ರದರ್ಶನ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಧನ್ಯತಾ ಓರ್ವ ವೈದ್ಯೆಯಾಗಿದ್ದು, ಇವರಿಬ್ಬರ ಪರಿಚಯ ಅಭಿಮಾನಿ ಮತ್ತು ನಟನಾಗಿ ಆರಂಭವಾಗಿತ್ತು.

ಕನ್ನಡ ಚಿತ್ರರಂಗದ ʼಮೋಸ್ಟ್ ಎಲಿಜಿಬಲ್ ಬ್ಯಾಚುಲರ್ʼ ಧನಂಜಯ ಅವರು ಮದುವೆಯಾಗುತ್ತಿದ್ದಾರೆ, ಅಭಿಮಾನಿಗಳಿಗೆ ಅವರು ಹೋಳಿಗೆ ಊಟ ಹಾಕಿಸುತ್ತಿದ್ದಾರೆ. ಕನ್ನಡ, ತೆಲುಗು ಭಾಷೆಯ ಚಿತ್ರರಂಗದವರಿಗೂ ಮದುವೆಯ ಆಹ್ವಾನ ಹೋಗಿದೆ. ಇನ್ನು ಧನಂಜಯ, ಧನ್ಯತಾ ಅವರ ಅರಿಷಿಣ ಶಾಸ್ತ್ರ ನಡೆದಿದೆ. ಕೆರೆಯ ಬಳಿ ಒಂದು ಸೆಟ್ ಹಾಕಲಾಗಿತ್ತು. ಪ್ರಕೃತಿ ಮಧ್ಯದಲ್ಲಿ ಈ ಜೋಡಿ ಹಳದಿ ಶಾಸ್ತ್ರವನ್ನು ಮಾಡಿಕೊಂಡಿದೆ. ಈ ಕಾರ್ಯದಲ್ಲಿ ಧನಂಜಯ ಅವರ ಸ್ನೇಹಿತರು, ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಆಗಮಿಸಿದ್ದರು.
ಈ ಮದುವೆಗೆ ಅಭಿಮಾನಿಗಳಿಗೂ ಕೂಡ ಆಹ್ವಾನ ಇದೆ. ಮೈಸೂರಿನಲ್ಲಿ ವಿದ್ಯಾಪತಿ ದ್ವಾರದ ಮೂಲಕ ಫ್ಯಾನ್ಸ್ ಬರಬಹುದು. ಫೆಬ್ರವರಿ 15ರಂದು ಶನಿವಾರ 6 ಗಂಟೆಯಿಂದ ಆರತಕ್ಷತೆ ಶುರುವಾಗಲಿದೆ. ಫೆಬ್ರವರಿ 16 ಬೆಳಿಗ್ಗೆ 7. 20ರಿಂದ 10 ಗಂಟೆಯವರೆಗೆ ಮೈಸೂರಿನ ವಸ್ತುಪ್ರದರ್ಶನ ಮೈದಾನದ ಮುಂಭಾಗ ಇರುವ ದೊಡ್ಡಕೆರೆಯಲ್ಲಿ ಫ್ಯಾನ್ಸ್‌ಗೆ ಪಾರ್ಕ್ ಮಾಡಬಹುದು ಎನ್ನಲಾಗಿದೆ.
ಧನಂಜಯ ಅವರು ಧನ್ಯತಾ ಎನ್ನುವವರನ್ನು ಮದುವೆಯಾಗುತ್ತಿದ್ದಾರೆ. ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತುಂಬ ಸರಳವಾದ, ಅರ್ಥ ಮಾಡಿಕೊಳ್ಳುವ ಹುಡುಗಿ ಎಂದು ಧನಂಜಯ ಅವರು ಹೇಳಿಕೊಂಡಿದ್ದಾರೆ.
ಧನಂಜಯ, ಧನ್ಯತಾ ಅವರು ಹೀರೋ, ಅಭಿಮಾನಿಯಾಗಿ ಪರಿಚಯ ಆಗಿದ್ದುಂಟು. ಅಭಿಮಾನಿ ಆಗಿದ್ದಾಗ ಧನ್ಯತಾ ಅವರು ಓದುತ್ತಿದ್ದರಂತೆ, ಆಮೇಲೆ ಇನ್‌ಸ್ಟಾಗ್ರಾಮ್‌ನಲ್ಲಿ ಧನಂಜಯ, ಧನ್ಯತಾ ಮಾತುಕತೆ ಆರಂಭಿಸಿದ್ದರು. ಆಮೇಲೆ ಇದೇ ಈಗ ಮದುವೆಯ ಹಂತಕ್ಕೆ ಬಂದಿದೆ.
ಕಳೆದ ಎರಡು ತಿಂಗಳಿನಿಂದ ಧನ್ಯತಾ, ಧನಂಜಯ ಅವರು ಚಿತ್ರರಂಗದ ಗಣ್ಯರಿಗೆ, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಮುಂತಾದವರಿಗೆ ಆಹ್ವಾನ ನೀಡಿದ್ದಾರೆ.
ತಮ್ಮ ಊರಿನ ಕಾಳೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ನೆಲಕ್ಕೆ ಟೈಲ್ಸ್, ಗೋಡೆಗೆ ಬಣ್ಣ ಬಳಿದು, ಇನ್ನು ನೀರಿನ ವ್ಯವಸ್ಥೆ, ಬಿರುಕು ಬಿಟ್ಟಿದ್ದ ಗೋಡೆಗಳಿಗೆ ಹೈಟೆಕ್ ಸ್ಪೃಶ ನೀಡಲಾಗಿದೆ.
ನಟ ಧನಂಜಯ ಅವರ ತಾಯಿಗೆ ಧನ್ಯತಾ ಅವರು ಹಳದಿ ಹಚ್ಚಿದ್ದಾರೆ. ಮಗನ ಮದುವೆ ನೋಡಬೇಕು ಎಂದು ಡಾಲಿ ತಾಯಿ ತುಂಬ ಸಮಯದಿಂದ ಆಸೆಪಟ್ಟಿದ್ದರು. ಅವರ ಆಸೆ ಈಗ ಈಡೇರುತ್ತಿದೆ.
ಡಾಲಿ ಧನಂಜಯ ಅವರ ಸಿನಿಮಾಗಳಲ್ಲಿ ನಟಿಸಿರುವ ಸಪ್ತಮಿ ಗೌಡ ಅವರು ಧನಂಜಯ ಹಳದಿ ಶಾಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ ಹಾಗೂ ಧನ್ಯತಾ ಅವರ ಸಂಭ್ರಮದಲ್ಲಿ ಸಪ್ತಮಿ ಗೌಡ ಕೂಡ ಭಾಗಿಯಾಗಿದ್ದಾರೆ.