- Home
- Entertainment
- Sandalwood
- Puneeth Rajkumar 50th Birthday: ವಿಶೇಷ ಫೋಟೋ ಸಿರೀಸ್ ಲಾಂಚ್ ಮಾಡಿದ ಇಂಡಿಯಾ ಪೋಸ್ಟ್!
Puneeth Rajkumar 50th Birthday: ವಿಶೇಷ ಫೋಟೋ ಸಿರೀಸ್ ಲಾಂಚ್ ಮಾಡಿದ ಇಂಡಿಯಾ ಪೋಸ್ಟ್!
ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಇಂಡಿಯಾ ಪೋಸ್ಟ್ ವಿಶೇಷ ಫೋಟೋಗಳನ್ನು ಲಾಂಚ್ ಮಾಡಿದೆ.

ಇಂದು ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಮುಂದೆ ಜನಸಾಗರವೇ ಸೇರಿದೆ. ಸಹಸ್ರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಸೇರಿದ್ದಾರೆ.
ಅಪ್ಪು ಅವರ ಐವತ್ತನೇ ಜನ್ಮದಿನದ ಪ್ರಯುಕ್ತ ಇಂಡಿಯಾ ಪೋಸ್ಟ್ ವಿಶೇಷವಾದ ಪುನೀತ್ ರಾಜ್‌ಕುಮಾರ್ ಫೋಟೋಗಳನ್ನು ಲಾಂಚ್ ಮಾಡಿದೆ.
ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್‌ಕುಮಾರ್ ನೀಡಿದ ಕೊಡುಗೆಯನ್ನು ಆಧರಿಸಿ ಈ ವಿಶೇಷ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು, ಕುಟುಂಬದ ಜೊತೆಗಿನ ಫೋಟೋಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಪುನೀತ್ ರಾಜ್‌ಕುಮಾರ್ ಅವರ ʼಗಂಧದ ಗುಡಿʼ ಡಾಕ್ಯುಮೆಂಟಿ, ಪವರ್ ಸ್ಟಾರ್ ಲುಕ್, ಬೆಟ್ಟದ ಹೂ ಸಿನಿಮಾಗಳ ಲುಕ್ ರಿವೀಲ್ ಮಾಡಿದ್ದಾರೆ.
ಅಶ್ವಿನಿ ಅವರು ಪುನೀತ್ ರಾಜ್‌ಕುಮಾರ್ ಜನ್ಮದಿನಕ್ಕೆ ಎಲ್ಲರೂ ತೋರಿಸುತ್ತಿರುವ ಅಭಿಮಾನಕ್ಕೆ ಚಿರಋಣಿ ಹೇಳಿದ್ದಾರೆ. ಪುನೀತ್ ಪತ್ನಿಯಾಗಿ ಈಗಾಗಲೇ ಸಾಕಷ್ಟು ಜವಾವ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ನಟ ಶಿವರಾಜ್‌ಕುಮಾರ್ ಅವರ ಎರಡನೇ ತಮ್ಮ ಅಪ್ಪುಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಶಿವರಾಜ್‌ಕುಮಾರ್ ಅವರು ಅಪ್ಪು ನಗುವನ್ನು ಎಂದಿಗೂ ಮರೆಯೋದಿಲ್ಲ ಎಂದು ಹೇಳಿದ್ದಾರೆ.
"ನಿಮ್ಮನ್ನು ನೋಡಿ ನಾಚಿ ಕೆಂಪಾಗುತ್ತಿದ್ದ ಕೆನ್ನೆ ...ಇಂದು ಕಣ್ಣೇರಿಗೆ ದಾರಿಯಾಗಿದೆ! ನಿಮ್ಮನ್ನು ನೋಡಿ ತಾಳ ತಪ್ಪುತ್ತಿದ್ದ ಹೃದಯ, ಇಂದು ಮಂಕಾಗಿ ಕೂತಿದೆ ! ನಿಮ್ಮನ್ನು ಹಾಡಿ ಹೊಗಳುತ್ತಿದ್ದ ಕಂಠ, ಇಂದು ಕಂಪಿಸುತ್ತಿದೆ ! ನಿಮ್ಮನ್ನು ಅಪ್ಪಿಕೊಳ್ಳುತ್ತಿದ್ದ ಕೈಗಳು, ಇಂದು ನಿಮ್ಮನ್ನು ಅಪ್ಪಿಕೊಳ್ಳೋಕೆ ಹಾತೊರೆಯುತ್ತಿದೆ ! ನಿಮ್ಮನ್ನು ಪರಮಾತ್ಮ ಎಂದು ಕೂಗಿದ ನಾಲಿಗೆ, ಇಂದು ಆ ಭಗವಂತನಿಗೆ ಶಾಪ ಹಾಕುತ್ತಿದೆ. ನಿಮ್ಮನ್ನು ಎಂದೆಂದಿಗೂ ಸಂಭ್ರಮಿಸೋ ಕೋಟ್ಯಂತರ ಹೃದಯಗಳಿಗೆ ಇಂದು ನಿಮ್ಮನ್ನು ಮತ್ತೆ ಹುಟ್ಟಿ ಬನ್ನಿ ಎಂದು ಬೇಡಿದೆ" ಎಂದು ನಟಿ ಅನುಶ್ರೀ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಯುವರಾಜ್‌ಕುಮಾರ್ ಅವರು ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಜನ್ಮದಿಕ್ಕೆ ಹಳೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಯುವ ಅವರನ್ನು ಎತ್ತಿಕೊಂಡಿದ್ದರು.