ಹೀರೋಗೆ 5 ಕೋಟಿ ಕೊಟ್ರೆ ನನಗೆ 1 ಕೋಟಿ ಕೊಡುತ್ತಾರೆ: ಮೋಹಕ ತಾರೆ ರಮ್ಯಾ ಹೇಳಿದ್ದೇನು?
ಅಸಮಾನತೆಯ ಕಾರಣಕ್ಕೇ ನಾನು ಸಿನಿಮಾರಂಗದಿಂದ ಹೊರಬಂದಿದ್ದು. ಈ ಅಸಮಾನತೆ ಯಾಕೆ ಎಂದು ನಟಿ ರಮ್ಯಾ ಚಿತ್ರರಂಗದ ಸಂಭಾವನೆ ಅಸಮಾನತೆ ವಿರುದ್ಧ ದನಿ ಎತ್ತಿದ್ದಾರೆ.

ಒಬ್ಬ ಸಾಮಾನ್ಯ ಹೀರೋ ಒಂದು ಸಿನಿಮಾ ಹಿಟ್ ಕೊಟ್ಟರೆ ಅವನ ಸಂಭಾವನೆ 50 ಪಟ್ಟು ಹೆಚ್ಚಾಗುತ್ತದೆ. ಅದೇ ಸಿನಿಮಾದಲ್ಲಿ ನಾಯಕಿಯಾಗಿದ್ದವಳ ಸಂಭಾವನೆ ಮುಂದಿನ ಸಿನಿಮಾಕ್ಕೆ ಬಹಳ ಕಷ್ಟದಲ್ಲಿ 5 ಪಟ್ಟು ಹೆಚ್ಚಾಗುತ್ತದೆ.
ನನ್ನ ಜೊತೆ ನಟಿಸಿದ ನನಗಿಂತ ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಿದ್ದ ಸಿನಿಮಾ ನಾಯಕ ನಟ ಆ ಸಿನಿಮಾ ಹಿಟ್ ಆದಮೇಲೆ ಮುಂದಿನ ಚಿತ್ರಕ್ಕೆ 5 ಕೋಟಿ ತೆಗೆದುಕೊಂಡರೆ ನನಗೆ ಮಾತ್ರ ಮುಂದಿನ ಚಿತ್ರಕ್ಕೆ 1 ಕೋಟಿ ಕೊಡುತ್ತಾರೆ.
ಈ ಅಸಮಾನತೆಯ ಕಾರಣಕ್ಕೇ ನಾನು ಸಿನಿಮಾರಂಗದಿಂದ ಹೊರಬಂದಿದ್ದು. ಈ ಅಸಮಾನತೆ ಯಾಕೆ ಎಂದು ನಟಿ ರಮ್ಯಾ ಚಿತ್ರರಂಗದ ಸಂಭಾವನೆ ಅಸಮಾನತೆ ವಿರುದ್ಧ ದನಿ ಎತ್ತಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಗೋಷ್ಠಿಯಲ್ಲಿ ಮಾತನಾಡಿದ ರಮ್ಯಾ, ‘ರಶ್ಮಿಕಾರಂಥಾ ನಟಿಯರನ್ನು ಟ್ರೋಲ್ ಮೂಲಕ ಹೀಯಾಳಿಸುವುದನ್ನು ದಯವಿಟ್ಟು ನಿಲ್ಲಿಸಿ, ಅದು ಅಮಾನವೀಯ. ಹೆಣ್ಣುಮಕ್ಕಳು ಮೃದುವಾಗಿರುತ್ತಾರೆ, ಏನೆಂದರೂ ತಿರುಗಿ ಮಾತಾಡಲ್ಲ ಎಂಬ ಕಾರಣಕ್ಕೆ ಅವರಿಗೆ ಈ ರೀತಿ ಹಿಂಸೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ.
‘ಇವತ್ತು ಸಿನಿಮಾ ಅಂತಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅನ್ಯಾಯ ಆಗುತ್ತಿದೆ. ಇದರ ವಿರುದ್ಧ ನಾವು ಮಹಿಳೆಯರೆಲ್ಲ ಒಗ್ಗಟ್ಟಾಗಿ ನಿಲ್ಲಬೇಕಿದೆ’ ಎಂದೂ ಅವರು ಹೇಳಿದ್ದಾರೆ.
ಯೋಗರಾಜ್ ಭಟ್ ಮುಂದಿನ ಸಿನಿಮಾದಲ್ಲಿ ರಮ್ಯಾ ನಟನೆ: ಯೋಗರಾಜ್ ಭಟ್ ಮುಂದಿನ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ‘ಮನದ ಕಡಲು’ ನಿರ್ಮಾಪಕರಾದ ಇ.ಕೃಷ್ಣಪ್ಪ ಮತ್ತು ಜಿ.ಗಂಗಾಧರ್ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ.