ಕೊನೆಗೂ ರಿವೀಲ್ ಆಯ್ತು 'ಲ್ಯಾಂಡ್‌ಲಾರ್ಡ್' ಸಿನಿಮಾದಲ್ಲಿ ದುನಿಯಾ ವಿಜಯ್ ಪಾತ್ರ!
ನೆಲಮಂಗಲದ ಬರದಿಬೆಟ್ಟದ ತಪ್ಪಲಲ್ಲಿ ‘ಲ್ಯಾಂಡ್ ಲಾರ್ಡ್’ ಸಿನಿಮಾಗಾಗಿ ಹಳ್ಳಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಈ ಸೆಟ್‌ನಲ್ಲೇ ದುನಿಯಾ ವಿಜಯ್ ಬರ್ತ್ ಡೇ ಆಚರಣೆ ನಡೆಯಿತು.

‘ನಾವೆಲ್ಲ ಚಿಕ್ಕೋರಿದ್ದಾಗ ಸ್ವಲ್ಪ ದುರಹಂಕಾರ ತೋರಿಸಿದ್ರೆ ನೀನೇನು ದೊಡ್ಡ ಲ್ಯಾಂಡ್ ಲಾರ್ಡಾ ಅನ್ನೋ ಮಾತನ್ನ ಹೇಳೋರು. ಆ ನುಡಿಗಟ್ಟನ್ನೇ ನಮ್ಮ ಈ ದೇಸಿಕಥೆಗೆ ಶೀರ್ಷಿಕೆಯಾಗಿ ಇಟ್ಟಿದ್ದೇವೆ. ಬಡಜನರ ಪ್ರತಿನಿಧಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ನೆಲಮಂಗಲದ ಬರದಿಬೆಟ್ಟದ ತಪ್ಪಲಲ್ಲಿ ‘ಲ್ಯಾಂಡ್ ಲಾರ್ಡ್’ ಸಿನಿಮಾಗಾಗಿ ಹಳ್ಳಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಈ ಸೆಟ್‌ನಲ್ಲೇ ದುನಿಯಾ ವಿಜಯ್ ಬರ್ತ್ ಡೇ ಆಚರಣೆ ನಡೆಯಿತು.
ಈ ವೇಳೆ ವಿಜಯ್, ‘ಬರ್ತ್ ಡೇ ದಿನವೂ ಶೂಟಿಂಗ್ ಮಾಡಿದ್ದಕ್ಕೆ ಖುಷಿ ಆಯ್ತು. ಮುಂದಿನ ವರ್ಷ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸುತ್ತೇನೆ. ಈ ಸಿನಿಮಾದಲ್ಲಿ ನಾನು 51 ವರ್ಷದ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಮಗಳು ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರ ಮಾಡುತ್ತಿದ್ದಾಳೆ’ ಎಂದರು.
ನಿರ್ದೇಶಕ ಜಡೇಶ್ ಹಂಪಿ, ಇದು ಕೋಲಾರದ ಕಥೆ. ಕೂಲಿಗಾಗಿ ಕಾಸು ಎಂಬ ವಿಚಾರ ಸಿನಿಮಾದಲ್ಲಿ ಪ್ರಮುಖವಾಗಿ ಬರುತ್ತದೆ. ಈ ಸಿನಿಮಾ ನಾಯಕನ ಹೆಸರು ರಾಚಯ್ಯ.
1980ರ ಕಾಲಘಟ್ಟದಲ್ಲಿ ನಡೆಯುವ ಕಥೆ ಎಂದರು. ನಿರ್ಮಾಪಕರಾದ ಸೂರಜ್ ಗೌಡ, ಸತ್ಯಪ್ರಕಾಶ್, ರಿತನ್ಯಾ ವಿಜಯ್ ಇದ್ದರು. ಸಿನಿಮಾ ನಾಯಕಿ ರಚಿತಾರಾಮ್ ಗೈರು ಹಾಜರಾಗಿದ್ದರು.
ಮಧ್ಯವಯಸ್ಸಿನ ಹೆಣ್ಮಗಳಾಗಿ ರಚಿತಾ ರಾಮ್: ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಯಸ್ಸು 51 ವರ್ಷ. ಅವರ ಪತ್ನಿ ಪಾತ್ರಧಾರಿ ರಚಿತಾ ರಾಮ್ ಅವರದ್ದೂ ಮಧ್ಯ ವಯಸ್ಸಿನ ಪ್ರೌಢ ಮಹಿಳೆಯ ಪಾತ್ರ.
ಆರಂಭದಿಂದ ಕೊನೆಯವರೆಗೂ ತಾನು ಹಾಗೂ ರಚಿತಾ ರಾಮ್ ಇದೇ ವಯಸ್ಸಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ದುನಿಯಾ ವಿಜಯ್ ಹೇಳಿದ್ದಾರೆ.