- Home
- Entertainment
- Sandalwood
- ಒಂದೆರಡು ವರ್ಷ ಚೆನ್ನಾಗಿ ಟ್ರೋಲ್ ಮಾಡಿದ್ರು ಅಷ್ಟೆ, 4ನೇ ವರ್ಷ ಸುಮ್ಮನಾದ್ರು: ರಶ್ಮಿಕಾ ಮಂದಣ್ಣ ಟಾಂಗ್
ಒಂದೆರಡು ವರ್ಷ ಚೆನ್ನಾಗಿ ಟ್ರೋಲ್ ಮಾಡಿದ್ರು ಅಷ್ಟೆ, 4ನೇ ವರ್ಷ ಸುಮ್ಮನಾದ್ರು: ರಶ್ಮಿಕಾ ಮಂದಣ್ಣ ಟಾಂಗ್
ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಸುಮ್ಮನಾಗಿರುವ ಟ್ರೋಲಿಗರ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ. ತಮಗೆ ತಾವೇ ಕೊಟ್ಟ ಕಿರೀಟ ಏನು ಗೊತ್ತಾ?

'I am queen of trolls' ಎಂದು ಹೇಳುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ಆರಂಭದಲ್ಲಿ ಟ್ರೋಲ್ ಆದಷ್ಟು ಈಗ ಟ್ರೋಲ್ ಆಗುತ್ತಿಲ್ಲ ಎಂದಿದ್ದಾರೆ.
ನನಗೆ ನಾನೇ I am queen of trolls ಎನ್ನುವ ಕಿರೀಟ ಕೊಟ್ಟು ಕೊಂಡಿರುವೆ. ಆರಂಭದಲ್ಲಿ ಟ್ರೋಲ್‌ಗಳು ಅತಿ ಹೆಚ್ಚು ಪರಿಣಾಮಗಳು ಬೀರುತ್ತಿತ್ತು. ಚಿತ್ರರಂಗಕ್ಕೆ ಕಾಲಿಟ್ಟ ವರ್ಷದಲ್ಲಿ ಅತಿ ಹೆಚ್ಚು ಟ್ರೋಲ್‌ಗಳನ್ನು ಎದುರಿಸಿದೆ.
ವಿಚಿತ್ರ ಏನೆಂದರೆ ಮನುಷ್ಯರು ಸಂದರ್ಭ ಏನೇ ಇರಲಿ ಆರಾಮ್ ಆಗಿ ಹೊಂದಿಕೊಳ್ಳುತ್ತಾರೆ. ಮೊದಲ ವರ್ಷ ಇದನ್ನು ಅರ್ಥ ಮಾಡಿಕೊಳ್ಳಲು ತುಂಬಾನೇ ಕಷ್ಟವಾಯ್ತು.
ಎರಡನೇ ವರ್ಷ ಹೊಂದಿಕೊಂಡು ಜೀವನ ಮುಂದೆ ಸಾಗಿಸಲು ಸಜ್ಜಾಗಿದ್ದೆ. ಹೀಗೆ ಮೂರನೇ ವರ್ಷ ನಾಲ್ಕನೇ ವರ್ಷ ಸಾಗಿತ್ತು 5ನೇ ವರ್ಷದಲ್ಲಿ ಒಂದು ಟ್ರೋಲ್ ಇಲ್ಲ.
ಟ್ರೋಲ್ ಆಗುತ್ತಿಲ್ಲ ಅಂದ್ರೆ ಒಂದು ನಾನು ಸರಿ ಮಾಡುತ್ತಿಲ್ಲ ಇನ್ನೊಂದು ನಾನು ಏನೂ ತಪ್ಪು ಮಾಡುತ್ತಿಲ್ಲ ಎಂದು. ಈಗಿನ ಕಾಲದಲ್ಲಿ ಎಲ್ಲರೂ ಸಣ್ಣ ಪುಟ್ಟ ವಿಚಾರಕ್ಕೆ ಟ್ರೋಲ್ ಆಗುತ್ತಾರೆ.
ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ಎರಡು ಲಕ್ಷ ಬೆಲೆಯ ಟಾಪ್ ಧರಿಸಿ ರಶ್ಮಿಕಾ ಟ್ರೋಲ್ ಆಗಿತ್ತು. ದುಬಾರಿ ಬ್ರ್ಯಾಂಡ್ ಬಟ್ಟೆ ನೀವು ಧರಿಸಿದರೆ ನೋಡಲು ನೆಲ ಒರೆಸುವ ಬಟ್ಟೆ ರೀತಿ ಇದೆ ಎಂದು.