- Home
- Entertainment
- Sandalwood
- Silk Smitha: ಈಕೆ ಮುಟ್ಟಿದ್ದೆಲ್ಲಾ ಚಿನ್ನ, ಸ್ಟಾರ್ ಆಗಿ ಮೆರೆಯುವ ಹೊತ್ತಿಗೆ ನಿಗೂಢ ಸಾವನ್ನಪ್ಪಿದ ಮಾದಕ ಚೆಲುವೆ!
Silk Smitha: ಈಕೆ ಮುಟ್ಟಿದ್ದೆಲ್ಲಾ ಚಿನ್ನ, ಸ್ಟಾರ್ ಆಗಿ ಮೆರೆಯುವ ಹೊತ್ತಿಗೆ ನಿಗೂಢ ಸಾವನ್ನಪ್ಪಿದ ಮಾದಕ ಚೆಲುವೆ!
Silk Smitha: ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಜನಪ್ರಿಯ ಗ್ಲಾಮರ್ ಕ್ವೀನ್ ಸಿಲ್ಕ್ ಸ್ಮಿತಾ ಜೀವನ ಸಿನಿಮಾದಲ್ಲಿ ಕಂಡಂತೆ ರೋಮಾಂಚಕಾರಿಯಾಗಿರಲಿಲ್ಲ. ಪ್ರೀತಿ, ಪ್ರೇಮ, ಮದುವೆ, ಮಾದಕ ದ್ರವ್ಯಕ್ಕೆ ಬಲಿಯಾಗಿ ಕೇವಲ 35ನೇ ವಯಸ್ಸಿಗೆ ತನ್ನ ಬದುಕನ್ನು ಕೈಯಾರೆ ಮುಗಿಸಿದ್ದಳು ಆ ಚೆಲುವೆ.

ದಕ್ಷಿಣ ಭಾರತದ ಪ್ರಸಿದ್ಧ ನಟಿ
ಅವರ ನಿಜವಾದ ಹೆಸರು ವಿಜಯಲಕ್ಷ್ಮಿ ವಡ್ಲಪತಿ. ಅವರನ್ನು ಪ್ರೀತಿಯಿಂದ ಸಿಲ್ಕ್ ಸ್ಮಿತಾ ಎಂದು ಕರೆಯಲಾಗುತ್ತಿತ್ತು. ಈ ದಕ್ಷಿಣ ಭಾರತದ ನಟಿಯನ್ನು 1980 ರ ದಶಕದ ಅತ್ಯಂತ ಪ್ರಸಿದ್ಧ ವಯಸ್ಕ ತಾರೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ, ಅವರು ಪರದೆಯ ಮೇಲೆ ಕಾಣಿಸಿಕೊಂಡಾಗಲೆಲ್ಲಾ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆದರು. ಸಿಲ್ಕ್ ತನ್ನ ಬೋಲ್ಡ್ ಅವತಾರದಿಂದಾಗಿ ಸುದ್ದಿಯಲ್ಲಿದ್ದರು.
ಹೋರಾಟದ ಜೀವನ
ಸಿಲ್ಕ್ ಸ್ಮಿತಾ ಬಾಲ್ಯದಲ್ಲಿ ತೀವ್ರ ಬಡತನ ಅನುಭವಿಸಿದ್ದರು. ಆಕೆಯ ತಂದೆ ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಆಕೆ ತನ್ನ ಪ್ರಾಥಮಿಕ ಶಿಕ್ಷಣವನ್ನು ಸಹ ಪೂರ್ಣಗೊಳಿಸಿರಲಿಲ್ಲ, ಜೀವನ ನಿರ್ವಹಣೆಗಾಗಿ ಆಕೆಯನ್ನು ಕೆಲಸಕ್ಕೆ ಸೇರಿಸಲಯಿತು. ನಂತರ ಆಕೆ ಎತ್ತಿನ ಬಂಡಿ ಓಡಿಸುವ ವ್ಯಕ್ತಿಯನ್ನು ಮದುವೆಯಾದಳು. ಆತ ಎಷ್ಟೊಂದು ಕುಡುಕನಾಗಿದ್ದ ಅಂದ್ರೆ ನಟಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡುತ್ತಿದ್ದನು. ಆಕೆಯ ಮುಖಕ್ಕೆ ಗುದ್ದುವುದು ಮತ್ತು ಕೂದಲನ್ನು ಎಳೆಯುವುದು ಅವನಿಗೆ ದಿನನಿತ್ಯದ ಸಂಗತಿಯಾಗಿತ್ತು.
ಗಂಡನಿಂದ ಪ್ರತಿದಿನ ಹೊಡೆತ
ಸ್ಮಿತಾ ತನ್ನ ಗಂಡನ ದಿನನಿತ್ಯದ ಹೊಡೆತಗಳಿಂದ ಬೇಸತ್ತಿದ್ದಳು. ಒಂದು ದಿನ, ಅವಳು ಮನೆಯಿಂದ ಓಡಿಹೋಗಿ ಚೆನ್ನೈಗೆ ಬಂದಳು, ಅಲ್ಲಿ ಅವಳು ನಟಿಯೊಬ್ಬಳ ಮನೆಯಲ್ಲಿ ಸೇವಕಿಯಾಗಿ ಕೆಲಸಕ್ಕೆ ಸೇರಿಕೊಂಡಳು. .
ಸಿನಿಮಾ ನಟಿಯಾಗಲು ಬಯಸಿದ್ದ ಸಿಲ್ಕ್ ಸ್ಮಿತಾ
ನಂತರ ಒಂದು ದಿನ, ಸಿಲ್ಕ್ ಕೆಲಸ ಮಾಡುತ್ತಿದ್ದ ನಟಿಯ ಮನೆಯಲ್ಲಿ ಒಬ್ಬ ನಿರ್ದೇಶಕರು ಭೇಟಿ ನೀಡಲು ಬಂದರು. ಅವರು ದೊಡ್ಡ ಕಾರಿನಲ್ಲಿ ಬಂದಿದ್ದರು. ಸಿಲ್ಕ್ ಅವರನ್ನು ನೋಡಿ ಶಾಕ್ ಆಗಿದ್ದಳು.. ಆವಾಗ ಮನೆಯ ಮಾಲಕಿ ಸಿಲ್ಕ್ ಸ್ಮಿತಾಳನ್ನು ನೋಡಿ, ಯಾಕೆ ಕಾರಿನಲ್ಲಿ ಹೋಗುವ ಕನಸು ಕಾಣುತ್ತಿದ್ದೀಯೇ ಎಂದು ಕೇಳಿದ್ದರಂತೆ.
ನಟಿಯಾಗುವ ಕನಸು ಕಂಡಿದ್ದ ಸಿಲ್ಕ್
ಅದಕ್ಕೆ ಉತ್ತರಿಸಿದ ಸಿಲ್ಕ್ "ಹೌದು, ನಾನು ಖಂಡಿತವಾಗಿಯೂ ಒಂದು ದಿನ ಕಾರನ್ನು ಹತ್ತುತ್ತೇನೆ. ಮತ್ತು ಆ ಕಾರು ನನ್ನದಾಗುತ್ತದೆ ಎನ್ನುವ ದಿಟ್ಟ ಉತ್ತರವನ್ನು ನೀಡಿ, ತನ್ನ ಮಾಲಕಿಗೆ ಶಾಕ್ ನೀಡಿದ್ದರು. ನಂತರ ಆಕೆ ತನ್ನ ಗುರಿಯತ್ತ ಗಮನಹರಿಸಿದಳು ಮತ್ತು ಉದ್ಯಮದ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಾರಂಭಿಸಿದಳು.
ಹೀಗೆ, ಕನಸು ನನಸಾಯಿತು.
ನಂತರ, ಹಲವು ಕಷ್ಟಗಳ ಬಳಿಕ 19ನೇ ವಯಸ್ಸಲ್ಲಿ ಅಂದರೆ 1979 ರಲ್ಲಿ, ಸಿಲ್ಕ್ "ಇನಾಯೆ ತೇಡಿ" ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದರು.. ಅವರು ಪರದೆಯ ಮೇಲೆ ಕಾಣಿಸಿಕೊಂಡ ಕ್ಷಣದಿಂದಲೇ, ಚಿತ್ರರಂಗದಲ್ಲಿ ಹೊಸ ಕಿಡಿ ಹಚ್ಚಿದ್ದರು.. ಜನರು ವಿಶೇಷವಾಗಿ ಸಿಲ್ಕ್ ಸ್ಮಿತಾರನ್ನು ನೋಡಲೆಂದೇ ಸಿನಿಮಾಗೆ ಬರುತ್ತಿದ್ದರು. ನಟಿ ಸ್ಕ್ರೀನ್ ಮೇಲೆ ಕಾಣಿಸಿದ ತಕ್ಷಣ, ಜನರು ಶಿಳ್ಳೆ ಹೊಡೆಯುತ್ತಿದ್ದರು.
ದಕ್ಷಿಣ ಭಾರತದ ಸ್ಟಾರ್ ನಟಿ
ಸಿಲ್ಕ್ ಸ್ಮಿತಾ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ಆ ಕಾಲದ ಅದೃಷ್ಟ ದೇವತೆಯಾಗಿದ್ದರು.. ದಕ್ಷಿಣ ಭಾರತದಲ್ಲಿ ರಜನಿಕಾಂತ್, ಕಮಲ್ ಹಾಸನ್, ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ನಟಿಸಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ಸಿಲ್ಕ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ನಿಗೂಢ ಸಾವು
ಆದರೆ ಈ ಪ್ರಯಾಣ ಅಲ್ಪಕಾಲಿಕವಾಗಿತ್ತು. ಸೆಪ್ಟೆಂಬರ್ 23, 1996 ರಂದು, ಸಿಲ್ಕ್ ಸ್ಮಿತಾ ಅವರ ಚೆನ್ನೈ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಸುತ್ತಲಿನ ನಿಗೂಢತೆಯು ಇನ್ನೂ ಬಗೆಹರಿಯಲಿಲ್ಲ. ಪ್ರೇಮ ದ್ರೋಹ, ಮದ್ಯ ವ್ಯಸನ ಮತ್ತು ಖಿನ್ನತೆಯಿಂದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ..