MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Silk Smitha: ಹಣದ ದುರಾಸೆಗೆ ಕೆರಿಯರ್‌ ಬಲಿಕೊಟ್ಟ ಸೌತ್‌ನ ಮಾದಕ ನಟಿ!

Silk Smitha: ಹಣದ ದುರಾಸೆಗೆ ಕೆರಿಯರ್‌ ಬಲಿಕೊಟ್ಟ ಸೌತ್‌ನ ಮಾದಕ ನಟಿ!

ಸೌತ್ ಚಿತ್ರರಂಗದ ಖ್ಯಾತ ನಟಿಯಾಗಿದ್ದ ಸಿಲ್ಕ್ ಸ್ಮಿತಾ (Silk Smitha)  ಇಂದು ಬದುಕಿದ್ದರೆ 61 ವರ್ಷ ವಯಸ್ಸಾಗಿರುತ್ತಿತ್ತು. ಸಿಲ್ಕ್ 1996 ರಲ್ಲಿ ಕೇವಲ ತಮ್ಮ 36 ನೇ ವಯಸ್ಸಿನಲ್ಲಿ ನಿಗೂಢ ರೀತಿಯಲ್ಲಿ ನಿಧನರಾದರು. ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸಿಲ್ಕ್ ಸ್ಮಿತಾ ಅವರು 2 ಡಿಸೆಂಬರ್ 1960 ರಂದು ಆಂಧ್ರಪ್ರದೇಶದ ಎಲ್ಲೂರಿನ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ನೆಡೆದ ಬಲವಂತವಾಗಿ ಮದುವೆಯಿಂದ ಅವರು ಸಂತೋಷವಾಗಿರಲಿಲ್ಲ. ಮತ್ತೊಂದೆಡೆ, ಅತ್ತೆ  ಸಹ ದಿನ ಸಿಲ್ಕ್ ಅನ್ನು ಹೊಡೆಯುತ್ತಿದ್ದರು. ಇವುಗಳಿಂದ ಬೇಸತ್ತು  ನಟಿ  ದೊಡ್ಡ ಹೆಜ್ಜೆ ಇಟ್ಟರು. ಸಿಲ್ಕ್ ಸ್ಮಿತಾರ ಜೀವನದ ಬಗ್ಗೆ ತಿಳಿಯಲು ಮುಂದೆ ಓದಿ.

2 Min read
Suvarna News
Published : Dec 02 2021, 09:03 PM IST| Updated : Dec 02 2021, 09:05 PM IST
Share this Photo Gallery
  • FB
  • TW
  • Linkdin
  • Whatsapp
19

ಸಿಲ್ಕ್ ಸ್ಮಿತಾ  ಒಂದು ದಿನ ಎಲ್ಲವನ್ನೂ ಬಿಟ್ಟು ಚೆನ್ನೈಗೆ ಓಡಿ ಹೋದರು. ಅಲ್ಲಿ ಅವರು ತನ್ನ ಚಿಕ್ಕಮ್ಮನೊಂದಿಗೆ ವಾಸಿಸಲು ಪ್ರಾರಂಭಿಸಿದರು. ಸಿಲ್ಕ್‌ ತುಂಬಾ ಕಡು ಬಡತನ ಕುಟುಂಬದವರಿದ್ದಾಗಿ, ಅವರಿಗೆ  ಸರ್ಕಾರಿ ಶಾಲೆ ಫೀಸ್‌ನೀಡಲು ಅವರ ಬಳಿ ಹಣವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ತರಗತಿಗೆ ಓದು ಬಿಟ್ಟರು.


 

29

ಚೆನ್ನೈಗೆ ಬಂದ ನಂತರ ಸಿಲ್ಕ್ ಚಿತ್ರಗಳಲ್ಲಿ ಮೇಕಪ್ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಶೂಟಿಂಗ್ ವೇಳೆ ಸ್ಮಿತಾ ನಾಯಕಿಯ ಮುಖಕ್ಕೆ ಟಚ್ ಅಪ್ ವರ್ಕ್ ಮಾಡುತ್ತಿದ್ದರು. ಸಿನಿಮಾದ ತಳಕು ಬಳಕು ನೋಡಿ ಕ್ರಮೇಣ ನಾಯಕಿಯಾಗುವ ಆಸೆ ಮನದಲ್ಲಿ ಮೂಡತೊಡಗಿತು. ಸಿಲ್ಕ್ ಸ್ಮಿತಾ  ನಿಜವಾದ ಹೆಸರು ವಿಜಯಲಕ್ಷ್ಮಿ 


 

39

ಇದಾದ ನಂತರ ಸಿಲ್ಕ್ ನಿರ್ಮಾಪಕರ ಜೊತೆ ಸ್ನೇಹ ಬೆಳೆಸಲು ಆರಂಭಿಸಿದರು. ನಂತರ ನಿರ್ಮಾಪಕರೊಬ್ಬರು ಆಕೆಗೆ ಅವಕಾಶ ನೀಡಿದರು ಮತ್ತು 1979 ರಲ್ಲಿ ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರ 'ಇನಾಯೆ ಥೇಡಿ' ನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು ಮತ್ತು ಸ್ಮಿತಾ ತಮ್ಮ ಮ್ಯಾಜಿಕ್ ಮೂಲಕ ಸೌತ್ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದರು.


 

49

ಕ್ರಮೇಣ ಪ್ರತಿಯೊಬ್ಬ ಚಿತ್ರ ನಿರ್ಮಾಪಕರು ಸಿಲ್ಕ್ ಸ್ಮಿತಾಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಲು ಪ್ರಾರಂಭಿಸಿದರು ಮತ್ತು ಅವರ ಬೇಡಿಕೆ ಹೆಚ್ಚಾಯಿತು. ಸಿಲ್ಕ್ ಸ್ಮಿತಾ ಅವರ  ಐಟಂ ನಂಬರ್ ಇಲ್ಲದಿದ್ದರೆ ಸಿನಿಮಾ ಖರೀದಿಸುವುದಿಲ್ಲ ಎಂಬ ಬೇಡಿಕೆ ಪ್ರತಿ ಸಿನಿಮಾ ವಿತರಕರಿಂದಲೂ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ನಿರ್ಮಾಪಕ-ನಿರ್ದೇಶಕ ಸಿಲ್ಕ್ ಕನಿಷ್ಠ ಒಂದು ಹಾಡನ್ನಾದರೂ ಮಾಡಬೇಕೆಂದು ಒತ್ತಾಯಿಸುತ್ತಿದ್ದರು.

59

ಸಿಲ್ಕ್ ಅವರ 10 ವರ್ಷಗಳ ಚಲನಚಿತ್ರ ಜೀವನದಲ್ಲಿ ಸುಮಾರು 500 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಸಿಲ್ಕ್ ಬಹುತೇಕ ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಈ ನಟಿ ಜನಪ್ರಿಯತೆ ಸಾಕಷ್ಟಿತ್ತು. ಹಲವು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಸಿಲ್ಕ್ ಅವರ ಜೀವನದಲ್ಲಿ ಸೋಲನ್ನು ಸಹ ಅನುಭವಿಸಬೇಕಾಯಿತ್ತು.

69

ವಾಸ್ತವವಾಗಿ, ಸಿಲ್ಕ್ ಸಾಕಷ್ಟು ಹಣವನ್ನು ಗಳಿಸಿದಾಗ, ಅವರು ನಿರ್ಮಾಪಕರಾಗುವ ಮೂಲಕ ಚಲನಚಿತ್ರಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದರು. ಆದಾಗ್ಯೂ, ಅವರು ಈ ಕ್ಷೇತ್ರದಲ್ಲಿ ಯಶಸ್ಸು ಗಳಿಸಲಿಲ್ಲ ಮತ್ತು ಚಲನಚಿತ್ರಗಳಲ್ಲಿನ ನಷ್ಟವು ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತು. ಇದಾದ ನಂತರ ಸಿಲ್ಕ್ ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ದುರ್ಬಲಳಾದರು.

79

ಸಿಲ್ಕ್ ಸ್ಮಿತಾ ಒಂದು ಕಾಲದಲ್ಲಿ ದಕ್ಷಿಣದ ದಿಟ್ಟ ನಟಿ ಎಂದು ಪರಿಗಣಿಸಲ್ಪಟ್ಟಿದ್ದರು. 80ರ ದಶಕದಲ್ಲಿ ಸೌತ್ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಅವರ ಮ್ಯಾಜಿಕ್ ಇಂದಿಗೂ ಜನ ಅದನ್ನು ಮರೆಯಲು ಸಾಧ್ಯವಾಗಿಲ್ಲ.

89

ಸಿಲ್ಕ್ ಸ್ಮಿತಾ ಅವರ ವಿವಾದಾತ್ಮಕ ಜೀವನದ ಕುರಿತು 2011ರಲ್ಲಿ ಬಾಲಿವುಡ್‌ನಲ್ಲಿ ‘ದಿ ಡರ್ಟಿ ಪಿಕ್ಚರ್’ ಸಿನಿಮಾ ಬಂದಿತ್ತು. ಇದರಲ್ಲಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದಾರೆ.

99

1980 ರಲ್ಲಿ ಬಿಡುಗಡೆಯಾದ ಸಿಲ್ಕ್ ಸ್ಮಿತಾ ಅವರ ವೃತ್ತಿಜೀವನದಲ್ಲಿ 'ವಂದಿಚಕ್ರಂ' ದೊಡ್ಡ ಮತ್ತು ಯಶಸ್ವಿ ಚಿತ್ರ ಎಂದು ಸಾಬೀತಾಯಿತು. ಈ ಚಿತ್ರದಲ್ಲಿ, ಸಿಲ್ಕ್ ಪಾತ್ರದ ಖ್ಯಾತಿಯಿಂದ, ಅವರು ತಮ್ಮ ಹೆಸರನ್ನು ಶಾಶ್ವತವಾಗಿ 'ಸಿಲ್ಕ್ ಸ್ಮಿತಾ' ಎಂದು ಬದಲಾಯಿಸಿಕೊಂಡರು. ಸಿಲ್ಕ್ ಕಮಲ್ ಹಾಸನ್, ರಜನಿಕಾಂತ್ ಮತ್ತು ಚಿರಂಜೀವಿ ಅವರಂತಹ ದೊಡ್ಡ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ.

About the Author

SN
Suvarna News
ಹಣ (Hana)
ಆತ್ಮಹತ್ಯೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved