ರಿಯಲ್ ಸಿಂಹಿಣಿ ಜೊತೆ ಪೋಸ್ ಕೊಟ್ಟು, ವಾಕಿಂಗ್ ಮಾಡಿದ ಮಿ & ಮಿಸಸ್ ಸಿಂಹ
ಚಂದನವನದ ಮುದ್ದಾದ ಸೆಲೆಬ್ರಿಟಿ ಜೋಡಿಗಳಾದ ವಷಿಷ್ಠ ಸಿಂಹ ಮತ್ತು ಹರಿಪ್ರಿಯ ಸಿಂಹಗಳ ಜೊತೆ ಪೋಸ್ ಕೊಟ್ಟಿದ್ದು ಫೋಟೋ ವೈರಲ್ ಆಗ್ತಿದೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲೊಬ್ಬರು ವಷಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯ. ಇವರಿಬ್ಬರ ಜೋಡಿ ಎಂದರೆ ಅಭಿಮಾನಿಗಳಿಗೆ ಪ್ರೀತಿ. ಸದ್ಯ ಇಬ್ಬರೂ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಸಾಹಸ ಮಾಡೋದಕ್ಕೆ ಹೊರಟಿದ್ದಾರೆ.
ವಷಿಷ್ಠ ಮತ್ತು ಹರಿಪ್ರಿಯ (Haripriya) ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದು ಮುದ್ದಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಭಾರಿ ಕೊಂಚ ವಿಭಿನ್ನವಾಗಿ ಡೇರಿಂಗ್ ಫೊಟೋಗಳನ್ನ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಹಂಚಿಕೊಂಡ ಫೋಟೋದಲ್ಲೇನಿದೆ ಗೊತ್ತಾ?
ವಷಿಷ್ಠ ಸಿಂಹ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಜವಾದ ದೈತ್ಯ ಸಿಂಹಗಳ ಜೊತೆಗೆ ವಷಿಷ್ಠ ಮತ್ತು ಹರಿಪ್ರಿಯ ಪೋಸ್ ಕೊಟ್ಟಿರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದು, ಸಿಂಹಿಣಿಗಳ ಜೊತೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಒಂದು ಫೋಟೊದಲ್ಲಿ ದೈತ ಗಾತ್ರದ ಎರಡು ಸಿಂಹಿಣಿಗಳು ಕುಳಿತಿದ್ದರೆ, ಅದರ ಹಿಂದೆ ಒಂದು ಕೋಲು ಹಿಡಿದು ವಷಿಷ್ಠ ಪೋಸ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಸತಿ -ಪತಿ ಇಬ್ಬರೂ ಸಿಂಹದ ಜೊತೆಗೆ ಪೋಸ್, ವಾಕಿಂಗ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ವಷಿಷ್ಠ ಮತ್ತು ಹರಿಪ್ರಿಯ ಜೊತೆ ಮತ್ತಷ್ಟು ಜನ ಕೂಡ ಇದ್ದಾರೆ. ಇದು ಯಾವುದೋ ಕಾಡಿನಲ್ಲಿ ತೆಗೆದಿರುವಂತಹ ಫೋಟೋ. ಆದರೆ ಅವರು ಯಾವ ಪ್ರದೇಶದಲ್ಲಿ ಸಫಾರಿ ಮಾಡಿ, ಸಿಂಹಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಮಾತ್ರ ತಿಳಿದು ಬಂದಿಲ್ಲ.
ಇನ್ನು ತಮ್ಮ ನೆಚ್ಚಿನ ಜೋಡಿಗಳನ್ನ ಸಿಂಹಗಳ ಜೊತೆ ನೋಡಿ ಥ್ರಿಲ್ ಆಗಿರುವ ಜನ ಸಿಂಹ ಜೊತೆ ಸಿಂಹಗಳು, ಕಾಡು ಸಿಂಹದ ಜೊತೆ ನಾಡಿನ ಸಿಂಹಗಳು, ಸಿಂಹಕ್ಕೆ ನಿಮ್ಮ ಹೆಸರು ಗೊತ್ತಿರಬೇಕು ಅದಕ್ಕೆ ಅಷ್ಟೊಂದು ಸೈಲೆಂಟ್ ಆಗಿದೆ, ಸರ್ ನಿಮಗೆ ಭಯ ಆಗಿಲ್ವಾ? ಮೀಟರ್ ಆಫ್ ಆಗಿಲ್ವಾ ಅಂತೆಲ್ಲಾ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಅಭಿಮಾನಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.