ಸಂತೋಷ ಹೊರಗಿನಿಂದ ಬರುವುದಲ್ಲ, ಮನಃಶಾಂತಿಯೇ ಸಂತೋಷ: ಯುಐ ನಿರ್ದೇಶಕ ಉಪೇಂದ್ರ
ನಾನು ಸಿನಿಮಾದ ಸಿದ್ಧ ಸೂತ್ರಗಳನ್ನು ಮೀರಲು ಯತ್ನಿಸುತ್ತೇನೆ. ಜನ ಅದನ್ನು ಸ್ವೀಕರಿಸಿದ್ದಾರೆ. ನಾನು ಅಂದುಕೊಂಡಿದ್ದಕ್ಕಿಂತ ಜನ ಬೇರೆ ಲೆವೆಲ್‌ನಲ್ಲಿ ಯೋಚಿಸುತ್ತಿದ್ದಾರೆ. ಈ ಥರದ ಪ್ರಯತ್ನಗಳಿಗೆ ಪ್ರೋತ್ಸಾಹ ಸಿಕ್ಕಾಗ ಮತ್ತಷ್ಟು ಪ್ರಯತ್ನ ಮಾಡುವ ಧೈರ್ಯ ಬರುತ್ತದೆ. ಹಾಗಾಗಿ ಈ ಗೆಲುವು ಪ್ರೇಕ್ಷಕರದು ಎಂದರು ಉಪೇಂದ್ರ.
ಯುಐ ಚಿತ್ರದಲ್ಲಿ ಸೆಲ್ಫ್ ರಿಯಲೈಸೇಷನ್ ಎಷ್ಟು ಮುಖ್ಯ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಜನ ಉತ್ತಮವಾಗಿ ಸ್ವೀಕರಿಸಿದ್ದಾರೆ. ಚೆನ್ನಾಗಿ ಡೀಕೋಡ್ ಮಾಡಿದ್ದಾರೆ.
ಚಿತ್ರದ ಕೊನೆಯ ಶಾಟ್ ಸ್ವಲ್ಪ ಕ್ಲಿಷ್ಟಕರವಾಗಿತ್ತು. ಅದನ್ನು ಯಾರೋ ಒಬ್ಬರು ಡೀಕೋಡ್ ಮಾಡಿದ್ದು ಗಮನಿಸಿದೆ ಎಂದು ಉಪೇಂದ್ರ ಹೇಳಿದ್ದಾರೆ. ಯುಐ ಚಿತ್ರದ ಗೆಲುವಿನ ಸಂಭ್ರಮಾಚರಣೆಯಲ್ಲಿ ಚಿತ್ರತಂಡದ ಜೊತೆ ಕೇಕ್ ಕತ್ತರಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕ್ನು ಸರಿಯಾಗಿ ನೋಡಿಕೊಂಡರೆ ಸಮಸ್ಯೆಗಳೇ ಇರುವುದಿಲ್ಲ. ನಾವು ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ವಿಶ್ಲೇಷಿಸಿಕೊಳ್ಳಬೇಕು. ಸಂತೋಷ ಹೊರಗಿನಿಂದ ಬರುವುದಲ್ಲ. ಮನಃಶಾಂತಿಯೇ ಸಂತೋಷ’ ಎಂದು ಹೇಳಿದರು.
‘ನಾನು ಸಿನಿಮಾದ ಸಿದ್ಧ ಸೂತ್ರಗಳನ್ನು ಮೀರಲು ಯತ್ನಿಸುತ್ತೇನೆ. ಜನ ಅದನ್ನು ಸ್ವೀಕರಿಸಿದ್ದಾರೆ. ನಾನು ಅಂದುಕೊಂಡಿದ್ದಕ್ಕಿಂತ ಜನ ಬೇರೆ ಲೆವೆಲ್‌ನಲ್ಲಿ ಯೋಚಿಸುತ್ತಿದ್ದಾರೆ. ಈ ಥರದ ಪ್ರಯತ್ನಗಳಿಗೆ ಪ್ರೋತ್ಸಾಹ ಸಿಕ್ಕಾಗ ಮತ್ತಷ್ಟು ಪ್ರಯತ್ನ ಮಾಡುವ ಧೈರ್ಯ ಬರುತ್ತದೆ. ಹಾಗಾಗಿ ಈ ಗೆಲುವು ಪ್ರೇಕ್ಷಕರದು’ ಎಂದರು.
‘ರಾಮಾಯಣ ಮತ್ತು ಮಹಾಭಾರತ ಯಾವಾಗಲೂ ಪ್ರಸ್ತುತ. ಅದನ್ನಿಟ್ಟುಕೊಂಡೇ ಬಹಳ ಮಂದಿ ಸಿನಿಮಾ ಮಾಡುತ್ತಿದ್ದಾರೆ. ಕಾಪಿರೈಟ್ ವಿಷಯವೇನಾದರೂ ಬಂದರೆ, ಎಲ್ಲಾ ನಿರ್ದೇಶಕರು ವಾಲ್ಮೀಕಿ ಮತ್ತು ವ್ಯಾಸರಿಗೆ ಕಾಪಿರೈಟ್‍ನಲ್ಲಿ ಹಣ ಕೊಡಬೇಕು. ಅವರು ಎಷ್ಟೋ ಸಾವಿರ ವರ್ಷಗಳ ಹಿಂದೆ ಹೇಳಿದ ವಿಷಯಗಳನ್ನೇ ಚಿತ್ರ ಮಾಡುತ್ತಿದ್ದಾರೆ’ ಎಂದರು.
ಲಹರಿ ವೇಲು ಮಾತನಾಡಿ, ‘ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಬಾಕ್ಸ್ ಆಫೀಸಿನಲ್ಲಿ ಬ್ಲಾಕ್‌ಬಸ್ಟರ್ ಆಗಿದೆ. ನಿರೀಕ್ಷೆಗೂ ಮೀರಿ ಸಿನಿಮಾ ಗೆದ್ದಿದೆ’ ಎಂದು ಹೇಳಿದರು. ನಿರ್ಮಾಪಕರಾದ ಜಿ. ಮನೋಹರನ್, ನವೀನ್ ಮನೋಹರನ್ ಮತ್ತು ಚಿತ್ರತಂಡ ಹಾಜರಿತ್ತು.