- Home
- Entertainment
- Sandalwood
- FilmFare South: ಬೆಂಗಳೂರಿನಲ್ಲಿ ನಡೆಯಲಿದೆ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯ್ರಕ್ರಮ!
FilmFare South: ಬೆಂಗಳೂರಿನಲ್ಲಿ ನಡೆಯಲಿದೆ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯ್ರಕ್ರಮ!
ನಮ್ಮ ಬೆಂಗಳೂರಿನಲ್ಲಿ ನಡೆಯಲಿದೆ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಕಾರ್ಯಕ್ರಮ. ಸಂಪಾದಕರ ಜೊತೆ ಕಾಣಿಸಿಕೊಂಡ ನಟಿ ತಾರಾ....

ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಫಿಲ್‌ಮ್ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕರ್ನಾಟಕದ ಬೆಂಗಳೂರಿನಲ್ಲಿ (Karnataka Bengaluru) ನಡೆಯಲಿದೆ.
ಕಮರ್ ಫಿಲ್‌ಮ್ ಫ್ಯಾಕ್ಟರಿ (Kamal Film Factory) ಸಹಯೋಗದಲ್ಲಿ ಮಾರ್ಚ್ ತಿಂಗಳಲ್ಲಿ ಈ ಸಮಾರಂಭ ನಡೆಯಲಿದ್ದು, ಆ ದಿನ ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾ ಸ್ಟಾರ್‌ಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈ ವಿಚಾರ ತಿಳಿಸಲು ಖುದ್ದು ಫಿಲ್‌ಮ್ ಫೇರ್ (FilmFare) ನಿಯತಕಾಲಿಕೆಯ ಸಂಪಾದ ಜಿತೇಶ್ ಪಿಳ್ಳೈ (Jitesh Pillai) ಬೆಂಗಳೂರಿಗೆ ಬಂದಿದ್ದರು.
ಜಿತೇಶ್ ಪಿಳ್ಳೈ ಜೊತೆ ಖ್ಯಾತ ನಟಿ ಪೂಜಾ ಹೆಗ್ಡೆ, ತಾರಾ ಅನುರಾಧ, ಕಮರ್ ಫಿಲ್‌ಮ್ ಫ್ಯಾಕ್ಟರಿಯ ಕಮರ್, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ, ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ಉಮೇಶ್ ಬಣಕಾರ್ ಇದ್ದರು.
ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಫಿಲ್‌ಮ್ಫೇರ್ ಸೌತ್ ಬೆಂಗಳೂರಿಗೆ ಬಂದಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದರು. ಪೂಜಾ ಹೆಗ್ಡೆ ಒಳ್ಳೆಯ ಸ್ಕ್ರಿಪ್‌ಟ್ ಇದ್ದರೆ ಕನ್ನಡದಲ್ಲೂ ನಟಿಸುವುದಾಗಿ ಸಾರಿದರು.
ತಾರಾ ಅವರು ಭಾರತದ ಸಿನಿಮಾ ಇಂಡಸ್ಟ್ರಿಗೆ ದಕ್ಷಿಣ ಭಾರತದ (South Film Industry) ಕೊಡುಗೆ ಕುರಿತು ಮಾತನಾಡಿ ಹೆಮ್ಮೆ ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.