'Excuse me'ನಟನ ದಿಲ್ ಕದ್ದ ಶ್ರೇಯಾ ಹಾಗೂ ಅಥರ್ವ!
ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸುನಿಲ್ ರಾವ್ ಈಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಮಿಂಚುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಮುದ್ದು ಕುವರನನ್ನು ಬರ ಮಾಡಿಕೊಂಡ ಸುನಿಲ್ ಫ್ಯಾಮಿಲಿ ಫೋಟೋಗಳಿವು....
ಗಾಯಕಿ ಬಿ ಕೆ ಸುಮಿತ್ರಾ ಅವರ ಪುತ್ರ ಸುನೀಲ್ ರಾವ್.
ಏಳು ಸುತ್ತಿನ ಕೋಟಿ ಹಾಗೂ ಕೆಂಡದ ಮಳೆ ಚಿತ್ರದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು.
ನಟನಾಗಿ, ಗಾಯಕನಾಗಿ ಹಾಗೂ ಗೀತರಚನೆಕಾರನಾಗಿ ಗುರುತಿಸಿಕೊಂಡಿರುವ ಸುನಿಲ್.
2018ರಲ್ಲಿ ಜೆ.ಪಿನಗರದಲ್ಲಿ ಗೆಳತಿ ಶ್ರೇಯಾ ಐಯ್ಯರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುನಿಲ್.
2019 ಮೇ ತಿಂಗಳಲ್ಲಿ ತಮ್ಮ ಕುಟುಂಬಕ್ಕೆ ಹೊಸ ಅಥಿತಿಯನ್ನು ಬರ ಮಾಡಿಕೊಂಡಿದ್ದಾರೆ.
ಪುತ್ರನಿಗೆ ಅಥರ್ವಎಂದು ನಾಮಕರಣ ಮಾಡಿದ್ದಾರೆ.
ಸೆಪ್ಟೆಂಬರ್ 5,2019ರಲ್ಲಿ ತಮ್ಮ ಮಗನನ್ನು ಅಭಿಮಾನಿಗಳಿಗೆ ಇಂಟ್ರಡ್ಯೂಸ್ ಮಾಡಿಸಿದ್ದಾರೆ.
ಇತ್ತೀಚಿಗೆ 'ತುರ್ತು ನಿರ್ಗಮನ' ಚಿತ್ರದಲ್ಲಿ ಅಭಿನಯಿಸಿರುವ ಸುನಿಲ್.
2017ರಲ್ಲಿ ಲೂಸ್ ಕನೆಕ್ಷನ್ ವೆಬ್ ಸೀರಿಸ್ನಲ್ಲಿಯೂ ಮಿಂಚಿದ್ದರು.
ಪುತ್ರನೊಟ್ಟಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.