ಡಾ.ರಾಜ್‌ಕುಮಾರ್ ಅಕಾಡೆಮಿ ಯಶೋಗಾಥೆ: ಎಲ್ಲರೂ KPSC ಪರೀಕ್ಷೆ ಪಾಸ್!
KPSC ಪರೀಕ್ಷೆಯಲ್ಲಿ ಡಾ.ರಾಜ್‌ಕುಮಾರ್ ಅಕಾಡೆಮಿಯಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸ್...
ವರನಟ ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮತ್ತು ಮಕ್ಕಳು ಕೆಪಿಎಸ್‌ಸಿ ಮತ್ತು ಐಪಿಎಸ್ ಅಕಾಡೆಮಿ ನಡೆಸುತ್ತಿದ್ದು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಡಾ.ರಾಜ್‌ಕುಮಾರ್ ಅಕಾಡೆಮಿ ಮತ್ತೊಂದು ಯಶಸ್ಸು ಕಂಡಿದೆ. 2017-2018ರ ಸಾಲಿನ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಮ್ಮ ವಿದ್ಯಾರ್ಥಿಗಳು ಪಾಸ್ ಆಗಿ ಇಂಟರ್ವ್ಯೂ ಹಂತ ತಲುಪಿದ್ದಾರೆ.
ಸೆಪ್ಟೆಂಬರ್ 5ರಂದು ಸಂಜೆ ಕೆಪಿಎಸ್‌ಸಿ 2017-2018 ಗೆಜೆಟೆಡ್ ಪ್ರೋಬೇಷನರ್ಸ್ ಪರೀಕ್ಷೆಯ ಆಯ್ಕೆ ಪಟ್ಟಿ ಪ್ರಕಟವಾಗಿದ್ದು 106 ಗ್ರೂಪ್ ಎ ಮತ್ತ ಗ್ರೂಪ್ ಬಿ preliminary ಪರೀಕ್ಷೆ ಆಗಸ್ಟ್ 24ರಂದು 2020ರಲ್ಲಿ ನಡೆಯಿತ್ತು ಮತ್ತು ಮೇನ್ಸ್ ಪರೀಕ್ಷೆ ಫೆವ್ರಬರಿ 2021ರಲ್ಲಿ ನಡೆಯಿತ್ತು.
ಈ ಪರೀಕ್ಷೆಯಲ್ಲಿ ಒಟ್ಟು 318 ಅಭ್ಯರ್ಥಿಗಳು ಪಾಸ್ ಆಗಿ ಇಂಟರ್ವ್ಯೂ ರೌಂಡ್‌ಗೆ ಸೆಲೆಕ್ಟ್ ಆಗಿದ್ದಾರೆ. ಇವರಲ್ಲಿ ಸುಮಾರು 200ಕ್ಕೂ ಅಭ್ಯರ್ಥಿಗಳು ಡಾ.ರಾಜ್‌ಕುಮಾರ್ ಅಕಾಡೆಮಿಯವರು.
ಅಂತಿಮ ಫಲಿತಾಂಶದಲ್ಲಿ ಡಾ ರಾಜ್‌ಕುಮಾರ್ ಅಕಾಡೆಮಿಯಿಂದ 75+ ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಕಾಡೆಮಿಗೆ ಇದು ನಿಜಕ್ಕೂ ಹೆಮ್ಮೆಯ ಕ್ಷಣ ಆಗಿದ್ದು, 70% ಅಭ್ಯರ್ಥಿಗಳು ಆಯ್ಕೆ ಪಟ್ಟಿಗೆ ಸೇರಿ ದಾಖಲೆ ಮಾಡಿದ್ದಾರೆ.