ಹೈದರಾಬಾದ್ ಟ್ರಾಫಿಕ್ ತಪ್ಪಿಸೋಕೆ ಮೆಟ್ರೋ ರೈಡ್ ಮಾಡಿದ ರಶ್ಮಿಕಾ ಬಾಯ್ ಫ್ರೆಂಡ್! ಇವ್ರು ಅವ್ರಲ್ಲ?
ಕನ್ನಡದ ಹುಡುಗ ದೀಕ್ಷಿತ್ ಶೆಟ್ಟಿ, ಸದ್ಯ ಹೈದಬಾದ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಹೈದಬಾದ್ ಟ್ರಾಫಿಕ್ ತಪ್ಪಿಸೋಕೆ, ಇವರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಹಾಗಿದ್ರೆ ರಶ್ಮಿಕಾ ಬಾಯ್ ಫ್ರೆಂಡ್ ಅಂದದ್ದು ಯಾಕೆ ಅಂತೀರಾ?
ಕನ್ನಡದಲ್ಲಿ ದೀಪಿಕಾ ದಾಸ್ ಜೊತೆ ನಾಗಿಣಿ ಸೀರಿಯಲ್ ನಲ್ಲಿ ಅರ್ಜುನ್ ಆಗಿ ನಟಿಸಿ ಜನಪ್ರಿಯತೆ ಪಡೆದಿದ್ದ ದೀಕ್ಷಿತ್ ಶೆಟ್ಟಿ (Dheekshith Shetty), ಸದ್ಯ ಕನ್ನಡ, ತಮಿಳು, ತೆಲುಗು, ಮಲಯಾಲಂ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಕನ್ನಡದಲ್ಲಿ ದಿಯಾ, ಬ್ಲಿಂಕ್, ಕೆಟಿಎಂ ನಂತರ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ದೀಕ್ಷಿತ್ ಶೆಟ್ಟಿ, ತೆಲುಗಿನಲ್ಲಿ ನಾಣಿ ಮತ್ತು ಕೀರ್ತಿ ಸುರೇಶ್ ಜೊತೆ ದಸರ (Dasara) ಸಿನಿಮಾದಲ್ಲೂ ತೆರೆ ಹಂಚಿಕೊಂಡಿದ್ದರು. ಜೊತೆಗೆ ಮುಗ್ಗುರು ಮೊನಗಲ್ಲು, ರೋಸ್ ವಿಲ್ಲಾ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದರು ದೀಕ್ಷಿತ್.
ಮಲಯಾಳಂ ಸಿನಿಮಾ ಓಪೀಸ್ ಮತ್ತು ತೆಲುಗಿನ ಒಂದೆರಡು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ದೀಕ್ಷಿತ್ ಸದ್ಯ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ಹಾಗಾಗಿ ಹೈದರಾಬಾದ್ ನ ಟ್ರಾಫಿಕ್ (hyderabad traffic) ತಪ್ಪಿಸೋದಕ್ಕೆ ಮೆಟ್ರೋ ಪ್ರಯಾಣ ಮಾಡಿದ್ದು, ಇದೇ ಬೆಸ್ಟ್ ಎಂದು ವಿಡೀಯೋ ಮಾಡಿ ಶೇರ್ ಮಾಡಿದ್ದರು.
ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ. ಮತ್ಯಾಕೆ ರಶ್ಮಿಕಾ ಬಾಯ್ ಫ್ರೆಂಡ್ ಅಂದಿದ್ದು, ಅನ್ನೋ ಪ್ರಶ್ನೆ ನಿಮ್ಮಲ್ಲೂ ಹುಟ್ಟಿಕೊಂಡಿರಬಹುದು ಅಲ್ವಾ?. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ರಶ್ಮಿಕಾ ಮಂದಣ್ಣ (Rashmika Mandanna) ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ತೆಲುಗು ಸಿನಿಮಾ ‘ದ ಗರ್ಲ್ ಫ್ರೆಂಡ್’ (The Girlfriend)ನಲ್ಲಿ ರಶ್ಮಿಕಾಗೆ ಬಾಯ್ ಫ್ರೆಂಡ್ ಆಗಿ ದೀಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿಂದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಈಗಾಗಲೇ ಈ ಬಗ್ಗೆ ದೀಕ್ಷಿತ್ ಮಾಹಿತಿ ಕೂಡ ನೀಡಿದ್ದರು. ಹಾಗಾಗಿ ದೀಕ್ಷಿತ್ ಅವರನ್ನು ರಶ್ಮಿಕಾ ಬಾಯ್ ಫ್ರೆಂಡ್ ಅಂದ್ರೆ ತಪ್ಪಲ್ಲ ಬಿಡಿ.
ಅಲ್ಲು ಅರವಿಂದ್ (Allu Aravind) ನಿರ್ಮಾಣ ಮಾಡುತ್ತಿರುವ, ರಾಹುಲ್ ರವೀಂದ್ರನ್ ನಿರ್ದೇಶಿಸುತ್ತಿರುವ ಈ ಸಿನಿಮಾ ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಈ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಮೋಷನ್ ಪಿಕ್ಚರ್, ಟೀಸರ್ ನ್ನು ಕೂಡ ಜನ ಇಷ್ಟಪಟ್ಟಿದ್ದರು.
ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್ ನಟಿಸಿರುವ ಬ್ಲಿಂಕ್ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಈಗಾಗಲೇ 50 ದಿನ ಪೂರೈಸಿದೆ. ಇನ್ನು ಕನ್ನಡದಲ್ಲಿ ದೀಕ್ಷಿತ್ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಮತ್ತು ಸ್ಟ್ರಾಬೆರ್ರಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ.