- Home
- Entertainment
- Sandalwood
- KD Movie Collection: ಅಬ್ಬಬ್ಬಾ... ಧ್ರುವ ಸರ್ಜಾ, ಜೋಗಿ ಪ್ರೇಮ್ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು?
KD Movie Collection: ಅಬ್ಬಬ್ಬಾ... ಧ್ರುವ ಸರ್ಜಾ, ಜೋಗಿ ಪ್ರೇಮ್ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು?
KD Kannada Movie Box Office Collection Report: ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ, ಕಿಚ್ಚ ಸುದೀಪ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ಸೂರಜ್, ರವಿಶಂಕರ್ ಅವರು ನಟಿಸಿದ್ದಾರೆ. ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ?

ದೊಡ್ಡ ತಾರಾಗಣವಿರುವ ಸಿನಿಮಾ
ನಟ ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ಕಾಮಿಡಿ ಕಿಲಾಡಿಗಳು ಸೂರಜ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾವಿದು. ಈ ಸಿನಿಮಾ ರಿಲೀಸ್‌ಗೂ ಮುನ್ನ ವಿವಾದಕ್ಕೆ ಗುರಿಯಾಗಿತ್ತು. ಈಗ ವಿವಾದದ ಹಾಡು ಬಿಟ್ಟು ಸಿನಿಮಾವನ್ನು ರಿಲೀಸ್ ಮಾಡಲಾಗಿದೆ.
ಈ ಸಿನಿಮಾ ಕಥೆ ಏನು?
ಹೌದು, 1975ರ ದಶಕದ ಅಂಡರ್‌ವರ್ಲ್ಡ್ ಕಥೆಯನ್ನು ಹೇಳಲಾಗಿದೆ. ಇಲ್ಲಿ ಕಂಪ್ಲೀಟ್ ರೆಟ್ರೋ ಸ್ಟೈಲ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಮೊದಲ ಬಾರಿಗೆ ಧ್ರುವ ಸರ್ಜಾ ಅವರು ಮಚ್ಚು ಹಿಡಿದಿದ್ದಾರೆ, ಇಲ್ಲಿ ಮಚ್ಚಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ.
ಪಾತ್ರಧಾರಿಗಳು
ಧ್ರುವ ಸರ್ಜಾ ಅವರು ಕಾಳಿದಾಸ ಪಾತ್ರದಲ್ಲಿ, ರಮೇಶ್ ಅರವಿಂದ್ ಅವರು ದೇವ ಪಾತ್ರದಲ್ಲಿ ನಟಿಸಿದ್ದಾರೆ, ರವಿಚಂದ್ರನ್ ಅವರು ಅಣ್ಣಯ್ಯಪ್ಪ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ರವಿಶಂಕರ್ ಅವರು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಲೆಕ್ಷನ್ ಎಷ್ಟು?
ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಈ ಚಿತ್ರವು 3.30 ಯಿಂದ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದಹಾಗೆ ಇಂದು ಮೇ 1 ಕಾರ್ಮಿಕರ ದಿನ, ಮೇ 2 ಶನಿವಾರ, ಮೇ 3 ರವಿವಾರ ಇದ್ದು, ವೀಕ್ಷಕರು ಸಿನಿಮಾ ನೋಡುವ ಸಾಧ್ಯತೆ ಹೀಗಿದೆ. ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಇದ್ದು, ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗುವಂತೆ ಕಾಣ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

