ಮದುವೆ ಸಮಾರಂಭ ಶುರು...ಹುಟ್ಟೂರಿನಲ್ಲಿ ಕೆಂಡ ತುಳಿದ ನಟ ಧನಂಜಯ್
ಧನಂಜಯ್ ಮತ್ತು ಧನ್ಯತಾ ಮದುವೆ ಸಮಾರಂಭ ಶುರು. ಹಳ್ಳಿಯಲ್ಲಿ ಕುಟುಂಬ ದೇವರ ಪೂಜೆ ಮಾಡಿದ ಡಾಲಿ...

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯಾತ ಫೆಬ್ರವರಿ 15 ಮತ್ತು 16ರಂದು ಮೈಸೂರಿನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮೈಸೂರಿನಲ್ಲಿ ಮದುವೆಯಾಗುತ್ತಿರುವ ಧನಂಜಯ್ ತಮ್ಮ ಹುಟ್ಟೂರಾದ ಅರಸಿಕೆರೆಯಲ್ಲಿ ಕಾಳೇನ ಹಳ್ಳಿಯಲ್ಲಿ ಮದುವೆ ಸಮಾರಂಭಗಳನ್ನು ಶುರು ಮಾಡಿದ್ದಾರೆ.
ಕುಟುಂಬದ ಸಂಪ್ರದಾಯದ ಪ್ರಕಾರ ಮಧು ಮಗನನ್ನು ಮನೆಯಿಂದ ಮರೆವಣಿಗೆಯಲ್ಲಿ ಕರೆದುಕೊಂಡು ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕೊಂಡ ಕುಳಿದಿದ್ದಾರೆ.
ಧನಂಜಯ್ ಕೆಂಡ ತುಳಿಯುವುದನ್ನು ನೋಡಲು ಊರಿನ ಜನರು ಸೇರಿದ್ದಾರೆ. ಈ ಫೂಜೆಯಲ್ಲಿ ಗೋಲ್ಡನ್ ಬಣ್ಣ ಸಿಲ್ಕ್ ಪಂಚೆ ಮತ್ತು ಶಲ್ಯೆಯಲ್ಲಿ ಧನಂಜಯ್ ಮಿಂಚಿದ್ದಾರೆ.
ಸುಮಾರು ಎರಡು ಮೂರು ತಿಂಗಳಿನಿಂದ ಸೆಲೆಬ್ರಿಟಿಗಳಿಗೆ ಧನಂಜಯ್ ಮದುವೆ ಆಮಂತ್ರಣ ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರು, ರಾಜಕಾರಣಿಗಳು ಹಾಗೂ ಶ್ರೀಸಾಮಾನ್ಯರಿನ್ನೂ ಆಹ್ವಾನಿಸಿದ್ದಾರೆ.
ಆಪ್ತರು ಮತ್ತು ಸೆಲೆಬ್ರಿಟಿಗಳು ಮಾತ್ರವಲ್ಲ ಸಾಮಾನ್ಯರು ಕೂಡ ಆಗಮಿಸಿ ವಿಶ್ ಮಾಡಲು ಮೈಸೂರಿನಲ್ಲಿ ವಿಶೇಷ ದ್ವಾರ ನಿರ್ಮಿಸಿದ್ದಾರೆ. ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ಊಟ ವ್ಯವಸ್ಥೆ ಮಾಡಲಾಗುತ್ತಿದೆ.