Head Bush ಅ.16ರಂದು ದಾವಣಗೆರೆಯಲ್ಲಿ ಧನಂಜಯ್ ಜೊತೆ ರಮ್ಯಾ - ರಚಿತಾ ರಾಮ್!
ಹೆಡ್‌ಬುಷ್ ಪ್ರೀ- ರಿಲೀಸ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಮ್ಯಾ, ರಚಿತಾ ರಾಮ್ ಭಾಗಿ. ಶುರುವಾಯ್ತು ಅಭಿಮಾನಿಗಳ ತಯಾರಿ...

ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅ.16ರಂದು ದಾವಣಗೆರೆಯಲ್ಲಿ ನಡೆಯಲಿದೆ. ರಮ್ಯಾ ಹಾಗೂ ರಚಿತಾರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಧನಂಜಯ್ ನಟಿಸಿದ್ದಷ್ಟೇ ಅಲ್ಲದೆ ನಿಮಾರ್ಣದ ಹೊಣೆಯನ್ನೂ ಹೊತ್ತುಕೊಂಡಿರುವುದರಿಂದ ಪ್ರಚಾರದ ಜವಾಬ್ದಾರಿಯೂ ಅವರ ಮೇಲಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಈಗಾಗಲೇ ರೆಟ್ರೋ ಕಾಸ್ಟೂ್ಯಮ್‌ಗಳಲ್ಲೇ ಪ್ರಚಾರ ಶುರು ಮಾಡಿರುವ ಡಾಲಿ ಈಗ ದಾವಣಗೆರೆ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ. ‘ಹೆಡ್ ಬುಷ್’ ಅ.21ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಮಾನ್ಸೂನ್ ರಾಗ ಸಿನಿಮಾದಲ್ಲಿ ಧನು ಜೊತೆ ರಚ್ಚು ಅಭಿನಯಿಸಿದ ಸಮಯದಿಂದ ಸಖತ್ ಕ್ಲೋಸ್ ಆಗಿದ್ದಾರೆ. ಹಾಗೇ ಯಾವುದೇ ಸಿನಿಮಾ ಕಾರ್ಯಕ್ರಮವಿದ್ದರೂ ಮೋಹಕ ತಾರೆ ರಮ್ಯಾ ಸಪೋರ್ಟ್ ಮಾಡುತ್ತಿರುವ ಕಾರಣ, ಹೆಡ್‌ಬುಷ್ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ.
ಸಿನಿಮಾ ಪ್ರಚಾರದಲ್ಲಿ ಡಾಲಿ ಸಖತ್ ಬ್ಯುಸಿಯಾಗಿದ್ದಾರೆ. ದುಬೈನಲ್ಲಿ ರಾಜ್ ಕಪ್ ಕ್ರಿಕೆಟ್ ನಡೆಯುವಾಗಲ್ಲೂ ಧನು ಜಯರಾಜ್ ಲುಕ್‌ನಲ್ಲಿ ಪ್ರಯಾಣ ಮಾಡಿ ಅಲ್ಲಿಯೂ ಪ್ರಚಾರ ಮಾಡಿದ್ದಾರೆ.
ಬಡವ ರಾಸ್ಕಲ್ ಸಿನಿಮಾದಿಂದಲ್ಲೂ ವಿಭಿನ್ನ ಪ್ರಚಾರದ ಮೇಲೆ ನಂಬಿಕೆ ಇಟ್ಟಿರು ಧನು....ಕಾರುಗಳ ಮೇಲೆ ಹೆಡ್‌ಬುಷ್ ಪೋಸ್ಟರ್ ಹಾಕಿಸಿ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಪ್ರಚಾರ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.