ಅಂಚೆ ಇಲಾಖೆ ಉಡುಗೊರೆ ಕಂಡು ಸಂತಸ ವ್ಯಕ್ತ ಪಡಿಸಿದ ಧನಂಜಯ-ಧನ್ಯತಾ
ಧನಂಜಯ್ ಅಂಚೆ ಉಡುಗೊರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಗೂ ಮುನ್ನವೇ ಭರ್ಜರಿ ಸರ್ಪ್ರೈಸ್‌ಗಳು........

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಫೆಬ್ರವರಿ 15 ಮತ್ತು 16ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಧನಂಜಯ್ ಮತ್ತು ಧನ್ಯತಾ ಮದುವೆ ಅಹ್ವಾನ ಪತ್ರಿಕೆ ಬಗ್ಗೆ ಎಲ್ಲೆಡೆ ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸಿತ್ತು. ಅಂಚೆ ಪತ್ರದಲ್ಲಿ ಮದುವೆ ಬಗ್ಗೆ ಮಾಹಿತಿ ಬರೆದು ಅದನ್ನು ಎಲ್ಲರಿಗೂ ಹಂಚಿ ಆಹ್ವಾನಿಸುತ್ತಿದ್ದರು.
ಹೀಗಾಗಿ ಧನಂಜಯ್ ಮತ್ತು ಧನ್ಯತಾ ಅವರಿಗೆ ಅಂಚೆ ಇಲಾಖೆ ಸ್ಪೆಷಲ್ ಉಡುಗೊರೆ ನೀಡಿದ್ದಾರೆ. ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮೈಸೂರಿನ ಅಂಚೆ ವಿಭಾಗದ ಅಧಿಕಾರಿಗಳು ಧನಂಜತ್ ಮತ್ತು ಧನ್ಯತಾರನ್ನು ಭೇಟಿ ಮಾಡಿ ಉಡುಗೊರೆ ನೀಡಿದ್ದಾರೆ. ಸ್ಟ್ಯಾಂಪ್‌ನಲ್ಲಿ ಧನು ಮತ್ತು ಧನ್ಯತಾ ಫೋಟೋವನ್ನು ಹಾಕಲಾಗಿದೆ.
ಇನ್ ಲ್ಯಾಂಡ್ ಲೆಟರ್ ಮಾದರಿಯ ಆಮಂತ್ರಣ ನಿಜಕ್ಕೂ ಹಲವರಿಗೆ ಮಾದರಿಯಾಗಿದೆ. ಧನು ಮದುವೆ ಆಮಂತ್ರಣವನ್ನು ಈಗಾಗಲೆ ಹಲವರು ಕಾಪಿ ಮಾಡಿ ತಮ್ಮ ಮದುವೆಗೆ ಮಾಡಿಸಿಕೊಳ್ಳುತ್ತಿದ್ದಾರೆ.
ಧನಂಜಯ್ ಮೂಲಕ ಇದೊಂದು ಟ್ರೆಂಡ್ ಕ್ರಿಯೇಟ್ ಆಗಿದೆ. ಈಗ ಇನ್‌ಲ್ಯಾಂಡ್ ಲೆಟರ್‌ಗೆ ಸಖತ್ ಡಿಮ್ಯಾಂಡ್ ಬಂದಿದೆ ಎಂದು ಸ್ವತಃ ಅಧಿಕಾರಿಗಳು ತಿಳಿಸಿದ್ದಾರೆ.