ಅಪ್ಪಟ ಬಂಗಾರ ಡಾ.ರಾಜ್ ಕುಮಾರ್‌ಗೆ 22 ಕ್ಯಾರೆಟ್ ಚಿನ್ನದ ನಾಣ್ಯದ ಗೌರವ!
ವರನಟ ಡಾ.ರಾಜ್ ಕುಮಾರ್ ಸಿನಿಮಾ ನಟ ನಟಿಯರಿಗೆ ಮಾತ್ರವಲ್ಲ, ರಾಜಕಾರಣಿಗಳು, ಉದ್ಯಮಿಗಳು, ಜನ ಸಾಮಾನ್ಯರಿಗೂ ಮಾದರಿಯಾಗಿದ್ದಾರೆ. ಸಿನಿ ಕ್ಷೇತ್ರದಲ್ಲಿನ ಕೊಡುಗೆ ಅಣ್ಣಾವ್ರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ರಾಜ್ಯದ ಉದ್ದಗಲಕ್ಕೂ ರಾಜ್ ಪುತ್ಥಳಿ, ರಾಜ್‌ಕುಮಾರ್ ರಸ್ತೆ, ಡಾ.ರಾಜ್ ಸರ್ಕಲ್‌ಗಳಿವೆ. ಇದೀಗ ಡಾ.ರಾಜ್ ಕುಮಾರ್‌ಗೆ ಚಿನ್ನದ ನಾಣ್ಯದ ಗೌರವ ನೀಡಲಾಗಿದೆ.
ಭಾರತೀಯ ಚಿತ್ರರಂಗ ಅತ್ಯಂತ ಶ್ರೇಷ್ಠ ನಟ, ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್‌ಗೆ ಚಿನ್ನದ ನಾಣ್ಯದ ಗೌರವ ನೀಡಲಾಗಿದೆ.
ಸೋಶಿಯಲ್ ಮಿಡಿಯಾದಲ್ಲಿ ಇದೀಗ ಡಾ.ರಾಜ್ ಕುಮಾರ್ ಅವರ ಗೋಲ್ಟ್ ಕಾಯಿನ್ ಭಾರಿ ಸದ್ದು ಮಾಡುತ್ತಿದೆ.
ಡಾ. ರಾಜ್ ಕುಮಾರ್ ಅಪರಿಮಿತ ಸೇವೆಗೆ ಕಲೆಕ್ಟಿಬಲ್ ಮಿಂಟ್ ಸಂಸ್ಥೆಯಿಂದ ಚಿನ್ನದ ನಾಣ್ಯದ ಗೌರವ ನೀಡಲಾಗಿದೆ
ಕಲೆಕ್ಟಿಬಲ್ ಮಿಂಟ್ ಸಂಸ್ಥೆ ಸಾಕಷ್ಟು ಮುತುವರ್ಜಿವಹಿಸಿ, ಹಲವು ದಿನಗಳಿಂದ ಡಿಸೈನ್ ಮಾಡಿರೋ ನಾಣ್ಯಕ್ಕ ಭಾರಿ ಮೆಚ್ಚುಗೆ
ಅಣ್ಣಾವ್ರ ಚಿತ್ರವಿರುವ ಚಿನ್ನದ ನಾಣ್ಯದ ಮೇಲೆ ಕನ್ನಡದಲ್ಲಿ ಹಾಗೂ ಇಂಗ್ಲೀಷ್‌ನಲ್ಲಿ ಡಾ. ರಾಜ್ ಕುಮಾರ್ ಎಂದು ಬರೆಯಲಾಗಿದೆ.
24 ಕ್ಯಾರೆಟ್ ಅಪ್ಪಟ ಬಂಗಾರ ಡಾ. ರಾಜ್‌ಕುಮಾರ್‌ಗೆ ಇದೀಗ 22ಕ್ಯಾರೆಕ್ಟರ್ ಚಿನ್ನದಲ್ಲಿ ನಾಣ್ಯ ಗೌರವ ನೀಡಲಾಗಿದೆ
15 ಹಾಗೂ 25ಗ್ರಾಂ ಗಳಲ್ಲಿ ರಾಜ್ ಕುಮಾರ್ ನಾಣ್ಯ ಸಿದ್ದವಾಗಿದೆ. ಅತ್ಯಾಕರ್ಷವಾಗಿರುವ ಈ ಚಿನ್ನದ ನಾಣ್ಯ ಇದೀಗ ಎಲ್ಲರ ಗಮನಸೆಳೆಯುತ್ತಿದೆ.
1983ರಲ್ಲಿ ಪದ್ಮಭೂಷಣ, 1992ರಲ್ಲಿ ಕರ್ನಾಟಕ ರತ್ನ, 1995ರಲ್ಲಿ ದಾದಾ ಸಾಹೇಬ್ ಪಾಲ್ಕೆ, 2002ರಲ್ಲಿ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.