- Home
- Entertainment
- Sandalwood
- ಜೀವನದಲ್ಲಿ ಏನನ್ನೂ ಬದಲಾಯಿಸಲು ಆಗದೇ ಇದ್ದಾಗ ಹೊಸ ಲುಕ್‌ಗೆ ಬದಲಾಗಿ; ಚಂದನ್ ಶೆಟ್ಟಿ ಫೋಟೋ ವೈರಲ್
ಜೀವನದಲ್ಲಿ ಏನನ್ನೂ ಬದಲಾಯಿಸಲು ಆಗದೇ ಇದ್ದಾಗ ಹೊಸ ಲುಕ್‌ಗೆ ಬದಲಾಗಿ; ಚಂದನ್ ಶೆಟ್ಟಿ ಫೋಟೋ ವೈರಲ್
ಚಂದನ್ ಲುಕ್‌ಗೆ ಕಳೆದು ಹೋದ ಹುಡುಗಿಯರು, ನಿವೇದಿತಾಳಿಗೆ ಅಲ್ಲ ಡಿಮ್ಯಾಂಡ್ ನಿಮಗೆ ಎಂದ ನೆಟ್ಟಿಗರು..........

ಕನ್ನಡ ಚಿತ್ರರಂಗದ ಅದ್ಭುತ ಸಂಗೀತ ನಿರ್ದೇಶಕ, ರಾಪರ್, ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ ಇದೀಗ ಹೊಸ ಲುಕ್‌ಗೆ ಬದಲಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಚಂದನ್ ಶೆಟ್ಟಿ ತಮ್ಮ ಹೊಸ ಲುಕ್ ಫೋಟೋ ಅಪ್ಲೋಡ್ ಮಾಡಿದ್ದಾರೆ. ಮಜಾ ಏನೆಂದರೆ ಚಂದು ಕೊಟ್ಟಿರುವ ಕ್ಯಾಪ್ಶನ್.
'ಜೀವನದಲ್ಲಿ ಬೇರೆ ಏನೂ ಬದಲಾಯಿಸಲು ಆಗದೇ ಇದ್ದಾಗ ಹೊಸ ಲುಕ್‌ಗೆ ಬದಲಾಗಿ' ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ ಬೇರೆ ಬೇರೆ ಅರ್ಥ ಕೊಡುತ್ತಿದ್ದಾರೆ.
ಅಯ್ಯೋ ಬಿಡಿ ಸರ್ ನಿವೇದಿತಾ ಗೌಡ ಜೊತೆ ಸಂಸಾರ ಮಾಡ್ಕೊಂಡು ಬದಲಾಯಿಸುವುದು ಅಷ್ಟರಲ್ಲೇ ಇತ್ತು ಅದರ ಬದಲು ನೀವು ಲುಕ್ ಬದಲಾಯಿಸಿಕೊಂಡಿದ್ದೇ ವಾಸಿ... ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಷ್ಟಕ್ಕೂ ಚಂದನ್ ಶೆಟ್ಟಿ ಇದ್ದಕ್ಕಿದ್ದಂತೆ ಲುಕ್ ಬದಲಾಯಿಸಿದ್ದು ಯಾಕೆ? ಹೊಸ ಸಿನಿಮಾ ಪ್ರಾಜೆಕ್ಟ್ ಬಂದಿದ್ಯಾ ಅಥವಾ ಜೀವನದಲ್ಲಿ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾಳಾ ಗೊತ್ತಿಲ್ಲ.
ಸದ್ಯ ಹೊಸ ಹಾಡುಗಳನ್ನು ಕ್ರಿಯೇಟ್ ಮಾಡಿ ಬೇರೆ ಬೇರೆ ಊರುಗಳನ್ನು ಸುತ್ತಿ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಚಂದನ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಚಂದನ್ ಬಳಿ ಸಿಕ್ಕಾಪಟ್ಟೆ ಆಫರ್‌ಗಳಿದೆ ಎನ್ನಲಾಗಿದೆ.