ದರ್ಶನ್ ಪುತ್ರನಿಗೆ ಜನ್ಮದಿನ ಸಂಭ್ರಮ, ಮಗನ ಬಗ್ಗೆ ತಾಯಿ ಮನದಾಳ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ ಆರ್ ನಗರ ಉಪಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಒಂದೆಡೆಯಾದರೆ ಅವರ ಪುತ್ರನಿಗೆ ಜನ್ಮದಿನದ ಸಂಭ್ರಮ. ತಾಯಿ ವಿಜಯಲಕ್ಷ್ಮೀ ಪುತ್ರನೊಂದಿಗೆ ಇರುವ ಪೋಟೋ ಹಂಚಿಕೊಂಡು ಜನ್ಮದಿನದ ಶುಭಾಶಯ ಕೋರಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಮಗ ವಿನೀಶ್ಗೆ 12ನೇ ಜನ್ಮದಿನದ ಸಂಭ್ರಮ.
ಇಂಥ ಮಗನನ್ನು ಪಡೆದಿರುವ ನಾನೇ ಪುಣ್ಯವಂತೆ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ.
ದರ್ಶನ್ ಪುತ್ರ ತಂದೆ ಜತೆ ಯಜಮಾನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ದರ್ಶನ್ ಅವರಂತೆ ವಿನೀಶ್ ಗೂ ಸಹ ಪ್ರಾಣಿಗಳೆಂದರೆ ಅಚ್ಚುಮೆಚ್ಚು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರಮ ವಿನೀಶ್ ಗೆ 12 ನೇ ಜನ್ಮದಿನ ಸಂಭ್ರಮ