2.5 ಕೋಟಿ ವೆಚ್ಚದ ರರ್ಜುನ್ ರಮೇಶ್ 'ಕೌಟಿಲ್ಯ' ಸಿನಿಮಾ ಆ.26ಕ್ಕೆ ರಿಲೀಸ್!
ಬಿಗ್ ಬಾಸ್ ಓಟಿಟಿ ಸ್ಪರ್ಧಿ, ಕಿರುತೆರೆ ನಟ ರರ್ಜುನ್ ರಮೇಶ್ ಸಿನಿಮಾ ಕೌಟಿಲ್ಯ ರಿಲೀಸ್‌ಗೆ ಸಜ್ಜಾಗಿದೆ.
ಆ.26ಕ್ಕೆ ‘ಕೌಟಿಲ್ಯ’ ಸಿನಿಮಾ ತೆರೆಗೆ ಬರುತ್ತಿದೆ. ಅರ್ಜುನ್ ರಮೇಶ್, ಪ್ರಿಯಾಂಕ ಚಿಂಚೋಳಿ ನಟಿಸಿರುವ ಈ ಚಿತ್ರವನ್ನು ಪ್ರಭಾಕರ ಶೇರಖಾನೆ ನಿರ್ದೇಶನ ಮಾಡಿದ್ದಾರೆ.
ವಿಜಯೇಂದ್ರ ಬಿ ಎ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಬಂದ ಚಿತ್ರತಂಡ ಹೇಳಿದ ಮಾತುಗಳು ಇಲ್ಲಿವೆ-
ಆ.26ರಂದು 75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.ಇದೊಂದು ರೀತಿಯಲ್ಲಿ ಕಿರುತೆರೆ ಹಾಗೂ ಸಿನಿಮಾ ಕಲಾವಿದರ ಸಮ್ಮಿಲದಂತಿರುವ ಸಿನಿಮಾ.
ಚಿತ್ರಕ್ಕಿರುವ ಟ್ಯಾಗ್‌ಲೈನ್ ‘ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳು ವಿಲನ್‌ಗಳೇ’ ಎನ್ನುವ ಸಾಲಿನಲ್ಲೇ ಚಿತ್ರದ ಕತೆ ಇದೆ. ಚಿತ್ರದ ಹೆಸರು ಕೌಟಿಲ್ಯ. ಆದರೆ, ಯಾರಿಗೂ ಇದು ಪ್ರವಚನ ಮಾಡುವ ಕತೆಯಂತೂ ಅಲ್ಲ. ಪಕ್ಕಾ ಮನರಂಜನೆ ಚಿತ್ರ.
ಪ್ರೇಕ್ಷಕರು ಒಳ್ಳೆಯ ಸಿನಿಮಾ ಎಂಬುದನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಸಿನಿಮಾ ಮೂಡಿ ಬಂದಿದೆ.
ಸಾಕಷ್ಟುಒಳ್ಳೆಯ ಸಿನಿಮಾಗಳು ಪ್ರೇಕ್ಷಕರು ಬಾರದೆ ಸೋತಿವೆ. ಹೀಗಾಗಿ ಉತ್ತಮ ಚಿತ್ರಗಳು ಸೋಲಬಾರದು. ಆ ಕಾರಣಕ್ಕೆ ನಮ್ಮ ಚಿತ್ರ ನೋಡಿ.
ತುಂಬಾ ಕನಸುಗಳನ್ನು ಕಟ್ಟಿಕೊಂಡು ನಿರ್ಮಾಪಕರು 2.5 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಹೇಗಿದೆ ಅನ್ನೋ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.