ಬಿಗ್ ಬಾಸ್ ಕಿಶನ್ 'ಡಿಯರ್ ಕಣ್ಮಣಿ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್!
ವಿಸ್ಮಯಾ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಡಿಯರ್ ಕಣ್ಮಣಿ ಚಿತ್ರಕ್ಕೆ ಸುದೀಪ್ ಬೆಂಬಲ ನೀಡಿದ್ದಾರೆ. ಹೀಗಿತ್ತು ಮುಹೂರ್ತದ ಕ್ಷಣಗಳು....
ಡಿಯರ್ ಕಣ್ಮಣಿ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣಗೊಳಿಸಿದ ಕಿಚ್ಚ ಸುದೀಪ್.
ಡಿಯರ್ ಕಣ್ಮಣಿ ಚಿತ್ರದ ಮೂಲಕ ಗಾಂಧೀ ನಗರಕ್ಕೆ ಮಹಿಳಾ ನಿರ್ದೇಶಕಿ ವಿಸ್ಮಯಾ ಪರಿಚಯವಾಗುತ್ತಿದ್ದಾರೆ.
ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಶನ್‌ಗೆ ಸ್ವಾತಿಕಾ ಜೋಡಿಯಾಗಲಿದ್ದಾರೆ.
ಇದೇ ಮೊದಲ ಬಾರಿ ಕ್ರಿಕೆಟರ್ ಪ್ರವೀಣ್ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವುದು.
'ಈ ಸಿನಿಮಾದಲ್ಲಿ ಪ್ರವೀಣ್ ಗೌಡ ನಟಿಸುತ್ತಿದ್ದಾರೆ. ಅವರಿಗೋಸ್ಕರ ನಾನು ಈ ಕಾರ್ಯಕ್ರಮಕ್ಕೆ ಬಂದೆ. ವಿಸ್ಮಯಾ ಹಾಗೂ ಅವರ ತಂಡ ತುಂಬಾ ಶ್ರಮವಹಿಸುತ್ತಿದೆ. ಖಂಡಿತಾ ನಾನು ಇಲ್ಲಿ ಯಾರಿಗೂ ನನ್ನ ಅನುಭವ ಹೇಳಿ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಬಂದಿಲ್ಲ. ಅವರು ತಪ್ಪುಗಳನ್ನು ಮಾಡಲಿ, ಕಲಿತುಕೊಂಡು ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ,' ಎಂದು ಸುದೀಪ್ ಹೇಳಿದರು.
ಮಡಿಕೇರಿ ಹಾಗೂ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
'ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಲವರ್ ಬಾಯ್ ಪಾತ್ರ ನನಗೆ ಹೊಂದುತ್ತದೆ, ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ತೆರೆಮೇಲೆ ಸಾಧ್ಯವಾಗಿಸಬೇಕಿದೆ,' ಎಂದು ಕಿಶನ್ ಮಾತನಾಡಿದ್ದಾರೆ.