- Home
- Entertainment
- Sandalwood
- Bigg Bossನಲ್ಲಿ ಮಾರ್ಕ್ ಚಿತ್ರದ ಹವಾ: 'ಸೈಕೋ ಸೈತಾನ್' ಹಾಡಿಗೆ ಸ್ಪರ್ಧಿಗಳ ಭರ್ಜರಿ ಸ್ಟೆಪ್- ಕಿಚ್ಚ ಫಿದಾ
Bigg Bossನಲ್ಲಿ ಮಾರ್ಕ್ ಚಿತ್ರದ ಹವಾ: 'ಸೈಕೋ ಸೈತಾನ್' ಹಾಡಿಗೆ ಸ್ಪರ್ಧಿಗಳ ಭರ್ಜರಿ ಸ್ಟೆಪ್- ಕಿಚ್ಚ ಫಿದಾ
ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಸುದೀಪ್ ಅಮಾನತುಗೊಂಡ ಪೊಲೀಸ್ ಅಧಿಕಾರಿಯ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ಮಾರ್ಕ್ ಬಿಡುಗಡೆ
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ (Mark Movie) ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ಭರ್ಜರಿ ರಿಸ್ಪಾನ್ಸ್ ವ್ಯಕ್ತವಾಗುತ್ತಿದೆ. ಗೋಪಾಲಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮುಂತಾದವರು ಇರುವ ಈ ಚಿತ್ರವನ್ನು ಕಿಚ್ಚನ ಫ್ಯಾನ್ಸ್ ನೋಡಿ ಫಿದಾ ಆಗಿದ್ದಾರೆ.
ಗೆಟಪ್ ಬದಲು
ಮಾರ್ಕ್ ಸಿನಿಮಾದಲ್ಲಿ (Sudeep's Mark Movie) ಇದಾಗಲೇ ಪೋಸ್ಟರ್ನಲ್ಲಿಯೇ ನೋಡಿರುವಂತೆ ಸುದೀಪ್ ಅವರ ಗೆಟಪ್ ಫುಲ್ ಬದಲಾಗಿದ್ದು, ಅವರು ಮಾಸ್ ಅವತಾರ ಎತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿಯೇ ಈ ಸಿನಿಮಾ ಕೂಡ ಮ್ಯಾಕ್ಸ್ ರೀತಿಯಲ್ಲಿ ಬಂದಿರಬಹುದು ಎನ್ನುವ ಫ್ಯಾನ್ಸ್ ಊಹೆ ನಿಜವಾಗಿದೆ. ಏಕೆಂದರೆ ಇದು ಸುದೀಪ್ ಜೊತೆ ಅದೇ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಮಾಡಿರುವ ಸಿನಿಮಾ. ಆದ್ದರಿಂದ ಎರಡೂ ಸಿನಿಮಾಗಳು ಸುಮಾರು ಒಂದೇ ರೀತಿ ಇವೆ ಎನ್ನುವುದಾಗಿ ಚಿತ್ರವೀಕ್ಷಕರು ಹೇಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ
ಮಾರ್ಕ್ ಚಿತ್ರದಲ್ಲಿ ಸುದೀಪ್ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಆದರೆ ಅಮಾನತುಗೊಂಡಿರುವ ಅಧಿಕಾರಿ ಅವರು. ಈಗಿನ ಪೀಳಿಗೆಗೆ ಇಷ್ಟವಾಗುವಂತೆ ಫೈಟಿಂಗ್ ದೃಶ್ಯಗಳು ಹೇರಳವಾಗಿವೆ. ಅದೇ ರೀತಿ ಕೆಲವು ಹಾಡುಗಳು ಕೂಡ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿವೆ.
ಸೈಕೋ ಸೈತಾನ್
ಅಂಥ ಹಾಡುಗಳಲ್ಲಿ ಒಂದು ಸೈಕೋ ಸೈತಾನ್ (Psycho Saithan). 'ದಾದ ಯಾರ್ ಗೊತ್ತಾ, ತಲಾ ಸ್ವಾಗ್ ಗೊತ್ತಾ, ಸುಕ್ಕ ಸ್ಟೈಲ್ ಗೊತ್ತಾ, ಝಕಾಸ್ ಸೈಕ್ ಗೊತ್ತಾ' ಎನ್ನುವ ಈ ಹಾಡಿಗೆ ಇದೀಗ ಬಿಗ್ಬಾಸ್ (Bigg Boss) ಸ್ಪರ್ಧಿಗಳು ಸಕತ್ ಸ್ಟೆಪ್ ಹಾಕಿದ್ದಾರೆ. ಇದನ್ನು ನೋಡಿ ಖುದ್ದು ಸುದೀಪ್ ಅವರೇ ಫಿದಾ ಆಗಿದ್ದಾರೆ.
ಒಳ್ಳೆಯ ಕಲೆಕ್ಷನ್
ಹೇಳಿ ಕೇಳಿ ಇಂದು ಕ್ರಿಸ್‌ಮಸ್. ರಜಾ ದಿನವಾಗಿರುವ ಹಿನ್ನೆಲೆಯಲ್ಲಿ, ಫಸ್ಟ್ ಡೇ ಒಳ್ಳೆಯ ಕಲೆಕ್ಷನ್ ಮಾಡುವಲ್ಲಿ ಡೌಟೇ ಇಲ್ಲ. ಇಂದು ಬೆಳಗ್ಗೆ ಆರು ಗಂಟೆಗೆ ವಿಶೇಷ ಶೋ ಅನ್ನು ಅರೇಂಜ್ ಮಾಡಲಾಗಿತ್ತು. ಇದಾಗಲೇ ಬಹುತೇಕ ಚಿತ್ರಂದಿರ ಹೌಸ್‌ಫುಲ್ ಆಗಿವೆ. ಈ ಸಿನಿಮಾ ಕರ್ನಾಟಕದಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಸೇರಿ 330ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

