MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕನ್ನಡಕ್ಕೆ ಹೊಸ 'ರೈಸಿಂಗ್ ಸ್ಟಾರ್'.. ಬಿಗ್ ಬಾಸ್‌ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಬಂತು ಮತ್ತೊಂದು ಹೊಸ ಕಿರೀಟ!

ಕನ್ನಡಕ್ಕೆ ಹೊಸ 'ರೈಸಿಂಗ್ ಸ್ಟಾರ್'.. ಬಿಗ್ ಬಾಸ್‌ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಬಂತು ಮತ್ತೊಂದು ಹೊಸ ಕಿರೀಟ!

ನಟ ಕಾರ್ತಿಕ್ ಮಹೇಶ್ ಅವರಿಗೆ 'ರೈಸಿಂಗ್ ಸ್ಟಾರ್' ಟೈಟಲ್ ನೀಡಲಾಯ್ತು. ಬಿರುದು ಸ್ವೀಕರಿಸಿ ಮಾತನಾಡಿದ ನಾಯಕ ಕಾರ್ತಿಕ್ ಮಹೇಶ್, 'ಪ್ರಜ್ವಲ್ ದೇವರಾಜ್ ಅವರಿಂದ ನಾನು ಈ ಬಿರುದು ಸ್ವೀಕರಿಸಿದ್ದು ಖುಷಿಯಾಗಿದೆ. ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಧನ್ಯವಾದ' ಎಂದಿದ್ದಾರೆ.

3 Min read
Author : Shriram Bhat
Published : Mar 27 2026, 08:45 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Instagram

'ಬಿಗ್ ಬಾಸ್ ಸೀಸನ್ 10'ರ ವಿನ್ನರ್, ಸ್ಯಾಂಡಲ್‌ವುಡ್ ಉದಯೋನ್ಮುಖ ನಟ ಕಾರ್ತಿಕ್ ಮಹೇಶ್ (Karthik Mahesh) ಈಗ ಕನ್ನಡದ 'ರೈಸಿಂಗ್ ಸ್ಟಾರ್'.. ಹೌದು, ಇಂದು ರಾಮ ನವಮಿ ಪ್ರಯುಕ್ತ 'ರಾಮರಸ' ಸಿನಿಮಾದ, ಪ್ರಜ್ವಲ್ ದೇವರಾಜ್ ಅವರ 'ಗುರು ಸಿದ್ದ' ಪಾತ್ರದ ಫಸ್ಟ್‌ ಲುಕ್ ಅನಾವರಣವಾಯ್ತು. ಇದೇ ಸಂದರ್ಭದಲ್ಲಿ ನಟ ಕಾರ್ತಿಕ್ ಮಹೇಶ್ ಅವರಿಗೆ 'ರೈಸಿಂಗ್ ಸ್ಟಾರ್' ಎಂಬ ಬಿರುದನ್ನು ಸ್ವತಃ ಪ್ರಜ್ಷಲ್ ದೇವರಾಜ್ ನೀಡಿದರು.

29
Image Credit : Instagram

ಹೌದು, ಇಂದು ರಾಮ ನವಮಿ ಪ್ರಯುಕ್ತ ನಡೆದ ಈ ಈವೆಂಟ್‌ನಲ್ಲಿ ಕರ್ನಾಟಕದಲ್ಲಿ ಮನೆಮಾತಾಗಿರುವ ನಟ ಕಾರ್ತಿಕ್ ಮಹೇಶ್ ಅವರಿಗೆ 'ರೈಸಿಂಗ್ ಸ್ಟಾರ್' ಟೈಟಲ್ ನೀಡಲಾಯ್ತು. ಚಿತ್ರತಂಡದಿಂದ ನೀಡಲಾದ ರೈಸಿಂಗ್ ಸ್ಟಾರ್ ಎಂಬ ಬಿರುದು ಸ್ವೀಕರಿಸಿ ಮಾತನಾಡಿದ ನಾಯಕ ಕಾರ್ತಿಕ್ ಮಹೇಶ್, 'ಪ್ರಜ್ವಲ್ ದೇವರಾಜ್ ಅವರಿಂದ ನಾನು ಈ ಬಿರುದು ಸ್ವೀಕರಿಸಿದ್ದು ಖುಷಿಯಾಗಿದೆ. ಒಂದೊಳ್ಳೆ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ' ಎಂದಿದ್ದಾರೆ.

Related Articles

Related image1
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಇನ್ನಿಂಗ್ಸ್‌; ಮತ್ತೊಂದು ಭಾಷೆಯ ಚಿತ್ರರಂಗಕ್ಕೂ ಅಚ್ಚರಿಯ ಎಂಟ್ರಿ!
Related image2
ರಾಮ ನವಮಿಯಂದು 'ರಾಮರಸ' ಟೀಸರ್ ಅನಾವರಣ, 'ಗುರು ಸಿದ್ದ' ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್!
39
Image Credit : Instagram

ಕಾರ್ತಿಕ್ ಮಹೇಶ್ ಅವರು ಈಗಾಗಲೇ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಟ್ರೋಫಿ ಗೆದ್ದು ಕರುನಾಡಿನ ಮೂಲೆಮೂಲೆಯಲ್ಲೂ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ಕನ್ನಡದ ಸಿನಿಮಾಗಳಲ್ಲಿ ನಾಯಕರಾಗಿ, ಮುಖ್ಯ ಪಾತ್ರಗಳಲ್ಲಿ ನಟಿಸುತ್ತ ಇದೀಗ 'ರೈಸಿಂಗ್ ಸ್ಟಾರ್' ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಕನ್ನಡದ ಸ್ಟಾರ್ ನಟ ಎಂಬ ಮಾತು ಎಲ್ಲೆಡೆಯಿಂದ ಕೇಳಿಬರುತ್ತಿದೆ.

49
Image Credit : Instagram

ಇನ್ನು, ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರಿಂದ 'ರಾಮರಸ' ಚಿತ್ರದ ಕ್ಯಾರೆಕ್ಟರ್ ಟೀಸರ್ ಅನಾವರಣ ಆಗಿದೆ. ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ಹಾಗೂ ಬಿ.ಎಂ.ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗುರು ಸಿದ್ಧ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

59
Image Credit : Instagram

ಕರ್ನಾಟಕದ ಅಲೆಮಾರಿ ಪರಂಪರೆಯಾದ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆಯನ್ನು ಈ ಪಾತ್ರ ಹೊಂದಿದೆ. ಇತ್ತೀಚೆಗೆ ರಾಮನವಮಿ ಸಂದರ್ಭದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ ಅವರು "ಗುರು ಸಿದ್ದ" ಪಾತ್ರದ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ "ರಾಮರಸ" ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

69
Image Credit : Instagram

"ರಾಮರಸ" ಆರಂಭವಾದ್ದುದ್ದರ ಬಗ್ಗೆ ತಿಳಿಸಿ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, ನಮ್ಮ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ. "ಜಂಟಲ್ ಮ್ಯಾನ್" ಚಿತ್ರದ ನಂತರ ಅವರ ನಮ್ಮ ಸಂಸ್ಥೆಯ ಚಿತ್ರದಲ್ಲಿ, 'ಗುರು ಸಿದ್ಧ' ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರ ಪವಾಡ ಪುರುಷರು ಎಂದೇ ಕರೆಯಲ್ಪಡುವ ಸುಡುಗಾಡು ಸಿದ್ದರ ಪಾತ್ರವಾಗಿರುತ್ತದೆ.

79
Image Credit : Instagram

ಅವರು ಪರಮಶಿವನ ಪರಮ ಭಕ್ತರು. ಒಂದೇ ಕಡೆ ಇರದ ಸಿದ್ದರು ಹಳ್ಳಿಹಳ್ಳಿಗೆ ಸಂಚಾರ ಮಾಡುವುದರ ಜೊತೆಗೆ, ಭವಿಷ್ಯ ನುಡಿಯುವುದು ಮತ್ತು ಅಪರೂಪದ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವುದು ಮುಂತಾದ ಜನಾನುರಾಗಿ ಕೆಲಸಗಳನ್ನು ಮಾಡುತ್ತಾರೆ. ಈ ಪಾತ್ರದ ಟೀಸರ್ ಅನಾವರಣ ಮಾಡಿಕೊಟ್ಟ ವಿನಯ್ ಗುರೂಜಿ ಅವರಿಗೆ ಅನಂತ ಧನ್ಯವಾದ. ಇನ್ನೂ , ಈ ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳ ಕ್ಲೈಮ್ಯಾಕ್ಸ್ ಅನ್ನು ಜನರು ಚಪ್ಪಲಿ ಬಿಟ್ಟು ನೋಡುವುದಂತು ಖಂಡಿತ. ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಹಾಡುಗಳು ಸಹ ಒಂದಕ್ಕಿಂತ ಒಂದು ಚೆನ್ನಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು.

89
Image Credit : Instagram

ಈ ಚಿತ್ರವನ್ನು ಗುರು ದೇಶಪಾಂಡೆ ಅವರು ಅದು ಹೇಗೆ ಕಡಿಮೆ ಬಜೆಟ್ ನಲ್ಲಿ ಮಾಡೋಣ ಅಂದುಕೊಂಡರೊ ಗೊತ್ತಿಲ್ಲ. ಇದೊಂದು ಬಿಗ್ ಬಿಗ್ ಬಜೆಟ್ ಸಿನಿಮಾ. ನನ್ನ ಪಾತ್ರ ಕೂಡ ಚೆನ್ನಾಗಿದೆ. ವಿ.ಎಫ್.ಎಕ್ಸ್ ವರ್ಕ್ ಅಂತೂ ಅದ್ಬುತವಾಗಿದೆ. ಇದು ಈ ವರ್ಷದ ದೊಡ್ಡ ಚಿತ್ರವಾಗಲಿದೆ ಎಂದು ಪ್ರಜ್ವಲ್ ದೇವರಾಜ್ ಹೇಳಿದರು. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡದವರಿಗೆ ಸಹ ನಿರ್ಮಾಪಕ ವಿಕ್ರಮ್ ಆರ್ಯ ಧನ್ಯವಾದ ಹೇಳಿದರು.

99
Image Credit : Instagram

ಛಾಯಾಗ್ರಾಹಕ ಕೆ.ಕೃಷ್ಣಕುಮಾರ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಗೀತರಚನೆಕಾರರಾದ ಡಾ||ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ, ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್, ನಟಿ ಯಮುನಾ ಶ್ರೀನಿಧಿ ಮುಂತಾದವರು "ರಾಮರಸ" ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ "ಜಂಟಲ್ ಮ್ಯಾನ್" ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಜ್ವಲ್ ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಆ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಟಿವಿ ಶೋ
ಮನರಂಜನಾ ಸುದ್ದಿ
Latest Videos
Recommended Stories
Recommended image1
ರಾಮ ನವಮಿಯಂದು 'ರಾಮರಸ' ಟೀಸರ್ ಅನಾವರಣ, 'ಗುರು ಸಿದ್ದ' ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್!
Recommended image2
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಇನ್ನಿಂಗ್ಸ್‌; ಮತ್ತೊಂದು ಭಾಷೆಯ ಚಿತ್ರರಂಗಕ್ಕೂ ಅಚ್ಚರಿಯ ಎಂಟ್ರಿ!
Recommended image3
ಸೋಶಿಯಲ್‌ ಮೀಡಿಯಾದಲ್ಲಿ ರಾಜ್‌ ಬಿ ಶೆಟ್ಟಿ, ರುಕ್ಷ್ಮಿಣಿ ವಸಂತ್‌ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ
Related Stories
Recommended image1
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಇನ್ನಿಂಗ್ಸ್‌; ಮತ್ತೊಂದು ಭಾಷೆಯ ಚಿತ್ರರಂಗಕ್ಕೂ ಅಚ್ಚರಿಯ ಎಂಟ್ರಿ!
Recommended image2
ರಾಮ ನವಮಿಯಂದು 'ರಾಮರಸ' ಟೀಸರ್ ಅನಾವರಣ, 'ಗುರು ಸಿದ್ದ' ಪಾತ್ರದಲ್ಲಿ ಪ್ರಜ್ವಲ್‍ ದೇವರಾಜ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved