ನಿಜ ಜೀವನದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧನ ಪುತ್ರಿ ಈ ಸಪ್ತ ಸಾಗರದಾಚೆ ಸುಂದರಿ ರುಕ್ಮಿಣಿ
ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಸಿನಿಮಾದಲ್ಲಿ ನಟಿಸಿರುವ ಪ್ರಿಯಾ ಅಲಿಯಾಸ್ ರುಕ್ಮಣಿ ಅವರ ಬಗ್ಗೆ ನಿಮಗೆ ತಿಳಿಯದ ಕೆಲ ಕುತೂಹಲಕಾರಿ ವಿಚಾರಗಳು ಇಲ್ಲಿವೆ.
ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಸಿನಿಮಾದಲ್ಲಿ ನಟಿಸಿರುವ ಪ್ರಿಯಾ ಅಲಿಯಾಸ್ ರುಕ್ಮಣಿ ಅವರ ಬಗ್ಗೆ ನಿಮಗೆ ತಿಳಿಯದ ಕೆಲ ಕುತೂಹಲಕಾರಿ ವಿಚಾರಗಳು ಇಲ್ಲಿವೆ. ರುಕ್ಮಿಣಿ ಅವರು ಸಪ್ತ ಸಾಗರದಾಚೆ ಸಿನಿಮಾಕ್ಕೂ ಮೊದಲು 'ಬೀರ್‌ಬಲ್ ಸಿನಿಮಾದಲ್ಲಿ ನಟಿಸಿದ್ದರು. ಶ್ರೀನಿ ನಿರ್ದೇಶನದ ಬೀರ್‌ಬಲ್ ಸಿನಿಮಾಗೆ ಮೊದಲ ಬಾರಿ ಬಣ್ಣ ಹಚ್ಚಿದ್ದರು ಪ್ರಿಯಾ.
ಅಶೋಕ ಚಕ್ರ ಪುರಸ್ಕತ ಹುತಾತ್ಮ ಸೇನಾಧಿಕಾರಿ ಕಲೋನಿಯಲ್ ವಸಂತ್ ವೇಣುಗೋಪಾಲ್ ಅವರ ಪುತ್ರಿಯಾದ ರುಕ್ಮಿಣಿ ವಸಂತ್ ಮೂಲತಃ ಬೆಂಗಳೂರಿನವರು. 2007 ಜುಲೈನಲ್ಲಿ ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ರುಕ್ಮಿಣಿ ಅವರ ತಂದೆ ದೇಶಕ್ಕಾಗಿ ಪ್ರಾಣ ತೆತ್ತಿದ್ದರು. ಮರಣ ನಂತರ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಪ್ಪನೊಂದಿಗೆ ಕಳೆದ ಖುಷಿಯ ಕ್ಷಣಗಳ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ ಪುತ್ರಿ ರುಕ್ಮಿಣಿ,
ಇನ್ನು ಈ ಸಪ್ತಸಾಗರದಾಚೆ ಸಿನಿಮಾಗೆ ಇವರು ಆಯ್ಕೆಯಾಗಿದ್ದು ಆಡಿಷನ್ ಮೂಲಕವಂತೆ, ರುಕ್ಮಿಣಿ ಕುಟುಂಬದವರ ಬಗ್ಗೆ ಹೇಳುವುದಾದರೆ ಇದೊಂದು ಕಲಾವಿದರ ಕುಟುಂಬ ರುಕ್ಮಿಣಿ ತಾಯಿ ಹಾಗೂ ಅಜ್ಜಿಯೂ ಭರತನಾಟ್ಯ ಕಲಾವಿದರು.
ಪಿಯುಸಿ ಬಳಿಕ ಲಂಡನ್‌ಗೆ ತೆರಳಿದ ರುಕ್ಮಿಣಿ ಅಲ್ಲಿ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಅಪ್ಪನೊಂದಿಗೆ ಕಳೆದ ಖುಷಿಯ ಕ್ಷಣಗಳ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ ಪುತ್ರಿ ರುಕ್ಮಿಣಿ,
Rukmini vasanth
ತಂದೆ ಸೇನೆಯಲ್ಲಿ ಅಧಿಕಾರಿಯಾಗಿದ್ದುದ್ದರಿಂದ ರುಕ್ಮಿಣಿಯವರ ಗುಜರಾತ್ ಚೆನ್ನೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವರು ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ.
Rukmini vasanth
ರುಕ್ಮಿಣಿ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಗಣೇಶ್ ಜೊತೆ ಬಾನದಾರಿಯಲ್ಲಿ ಸಿನಿಮಾದಲ್ಲೂ ನಟಿಸಿದ್ದು ಈ ಸಿನಿಮಾವೂ ಕೂಡ ಇದೇ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ.
Rukmini vasanth
ಇದಲ್ಲದೇ ಬಘೀರ, ಬೈರತಿ ರಣಗಲ್ ಮುಂತಾದ ಸಿನಿಮಾಗಳು ರುಕ್ಮಿಣಿ ವಸಂತ್ ಕೈಯಲ್ಲಿವೆ ಇದರ ಜೊತೆಗೆ ಅವರಿಗೆ ತಮಿಳು ಸಿನಿಮಾರಂಗದಿಂದಲೂ ಅವಕಾಶಗಳು ಹುಡುಕಿ ಬಂದಿವೆ.
ತಮಿಳಿನಲ್ಲಿ ವಿಜಯ್ ಸೇತುಪತಿ ಅವರ ಹೊಸ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಈ ಸಿನಿಮಾಗಾಗಿ ನಿರ್ದೇಶಕ ಹೇಮಂತ್ ಇವರಿಗೆ ವರ್ಕ್‌ಶಾಪ್ ಮಾಡಿದ್ರಂತೆ ಇದರಿಂದ ನಟನೆ ಸುಲಭವಾಯ್ತು ಅಂತಾರೆ ಪ್ರಿಯಾ...
ಪ್ರಸ್ತುತ ಅವರ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದ್ದು ರುಕ್ಮಿಣಿ ಅಭಿನಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ
ಸಪ್ತಸಾಗರದಾಚೆ ಎಲ್ಲೋ' ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರೋದ್ರಿಂದ ಹಾಡುಗಳು ಮೇಜರ್ ಹೈಲೈಟ್ ಆಗಿದೆ ಎನ್ನಲಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಬರೋಬ್ಬರಿ 12 ಹಾಡುಗಳಿವೆ.
ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇನ್ನಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ ನಟಿ ರುಕ್ಮಿಣಿ