Ashwini Puneeth Rajkumar ದೊಡ್ಡ ಗಣಪತಿ ದರ್ಶನ ಪಡೆದ ಅಪ್ಪು ಪತ್ನಿ
ಬೆಂಗಳೂರಿನ ದೊಡ್ಡ ಗಣಪತಿ ದೇಗುಲಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್....

ಕನ್ನಡ ಚಿತ್ರರಂಗದ ಮುತ್ತು, ಕರ್ನಾಟಕದ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷ ಕಳೆದಿದೆ. ಅಪ್ಪು ಹೆಸರಿನಲ್ಲಿ ನೂರಾರೂ ರೀತಿಯಲ್ಲಿ ಸಮಾಜ ಸೇವೆ ನಡೆಯುತ್ತದೆ.
ಅಪ್ಪು ಅಗಲಿದ ಮೇಲೆ ಪಿಆರ್‌ಕೆ ನಿರ್ಮಾಣ ಸಂಸ್ಥೆ ಮತ್ತು ಅಪ್ಪು ಸಮಾಜ ಸೇವೆ ಕೆಲಸಗಳ ಜವಾಬ್ದಾರಿಯನ್ನು ಅಶ್ವಿನಿ ಹೊತ್ತುಕೊಂಡಿದ್ದಾರೆ. ಸದ್ಯ ನಿರ್ಮಾಣದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ಡಿಸೆಂಬರ್ 23ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನಕ್ಕೆ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಭೇಟಿ ನೀಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಗಂಧದ ಗುಡಿ ಸಿನಿಮಾ ರಿಲೀಸ್ ಸಮಯದಲ್ಲಿ ದೇಗುಲಕ್ಕೆ ಭೇಟಿ ನೀಡಲು ಆಗಲಿಲ್ಲ ಎನ್ನುವ ಕಾರಣಕ್ಕೆ ಈಗ ದೇವರ ದರ್ಶನ ಪಡೆದಿದ್ದಾರೆ.
ತಮ್ಮ ತಂಡದ ಜೊತೆ ದೇಗುಲಕ್ಕೆ ಭೇಟಿ ಕೊಟ್ಟ ಅಶ್ವಿನಿ ಅವರಿಗೆ ಸನ್ಮಾನ ಮಾಡಲಾಗಿದೆ. ದೇಗುಲ ಅಭಿವೃದ್ಧಿ ಆಗಿರುವುದನ್ನು ಕಂಡ ಸಂತಸ ಪಟ್ಟಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸುವ ಮೂಲಕ ಆರಂಭಿಸುತ್ತಾರೆ. ಅಭಿಮಾನಿಗಳು ಆಹ್ವಾನಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಅಶ್ವಿನಿ ಭಾಗಿಯಾಗುತ್ತಾರೆ.