ಅಕ್ಕನ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್
ಚಂದನವನದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ತನ್ನ ಸಹೋದರಿ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ.

ನಟಿ ಆಶಿಕಾ ರಂಗನಾಥ (Ashika Ranganath) ತಮ್ಮ ಸಹೋದರಿ ಅನುಷಾ ರಂಗನಾಥ್ ಜೊತೆ ಆಂಧ್ರಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ.
ಆಶಿಕಾ ರಂಗನಾಥ್ ಬಿಳಿ, ಹಳದಿ, ಕೆಂಪು ಬಣ್ಣವನ್ನು ಹೊಂದಿರುವ ಕಾಟನ್ ಸೀರೆಯುಟ್ಟಿದ್ದು, ಹಣೆ ಮೇಲೆ ಕುಂಕುಮದ ತಿಲಕ ಹಚ್ಚಿದ್ದಾರೆ. ದೇಗುಲಕ್ಕೆ (Tirupati Tirumala) ಭೇಟಿ ನೀಡಿ ಬಂದ ಬಳಿಕ ಫೋಟೊ ತೆಗೆಸಿಕೊಂಡಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವಾರ ಆಶಿಕಾ ತಮ್ಮ ಆತ್ಮೀಯ ಸ್ನೇಹಿತೆ ಅರ್ಚನಾ ಕೊಟ್ಟಿಗೆ ವಿವಾಹ ಸಂಭ್ರಮದಲ್ಲಿ ಬ್ಯುಸಿಯಾಗಿದ್ದರು. ತಮ್ಮ ಗೆಳತಿಯ ವಿಶೇಷ ಕ್ಷಣದ ಪ್ರತಿಯೊಂದು ಆಚರಣೆಯಲ್ಲೂ ಜೊತೆಯಾಗಿ ನಿಂತು ಸಂಭ್ರಮಿಸಿದ್ದರು.
ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ (Anusha Ranganath) ಕೂಡ ನಟಿಯಾಗಿದ್ದು, ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಆಶಿಕಾಗೆ ಸಿಕ್ಕಷ್ಟು ಯಶಸ್ಸು ಸಿಕ್ಕಿಲ್ಲ. ಮದುವೆಯಾದ ಬಳಿಕ ಸಿನಿಮಾದಿಂದ ದೂರ ಉಳಿದಿದ್ದಾರೆ.
ಆಶಿಕಾ ರಂಗನಾಥ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಇವರು ನಟಿಸುತ್ತಿದ್ದಾರೆ. ಇವರು ಸದ್ಯದ ದಕ್ಷಿಣದ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಸದ್ಯ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ‘ವಿಶ್ವಂಭರ’, ಕಾರ್ತಿ ನಟನೆಯ ‘ಸರ್ದಾರ್ 2’ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ. ಇನ್ನು ಕನ್ನಡದಲ್ಲಿ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.