ಎಲ್ಲಿ ಕಳೆದೋದೆ ಆಶಿಕಾ?; ಚುಟುಚುಟು ಹುಡುಗಿ ಮಿಸ್ಸಿಂಗ್ ಅಂತಿದ್ದಾರೆ ನೆಟ್ಟಿಗರು!
ಚುಟು ಚುಟು ಸದ್ದಿಲ್ಲದೆ ಬೇಸರದಲ್ಲಿರುವ ನೆಟ್ಟಿಗರು....ಎಲ್ಲೋ ಮಿಸ್ಸಿಂಗ್ ಫೀಲ್ ಅಂತೆ..

2016ರಲ್ಲಿ ಕ್ರೇಜಿ ಲೋಕ ಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್ ಕೈ ತುಂಬಾ ಆಫರ್‌ಗಳು ಹರಿದು ಬಂತು.
ಮಾಸ್ ಲೀಡರ್‌ನಲ್ಲಿ ಶ್ರೇಯಾ ಆಗಿ, ಮುಗುಳು ನಡೆಯಲ್ಲಿ ವೈಶಾಲಿಯಾಗಿ, ರಾಜು ಕನ್ನಡ ಮೀಡಿಂನಲ್ಲಿ ವಿದ್ಯಾ ಆಗಿ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಆಶಿಕಾ ಕನ್ನಡ ಸಿನಿಮಾಗಳಲ್ಲಿ ಅಥವಾ ಕನ್ನಡ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಆಶಿಕಾ ರಂಗನಾಥ್ ಎಲ್ಲೋ ಕಳೆದೋಗಿದ್ದಾರೆ ಅನಿಸುತ್ತಿದೆ...ನನ್ನ ಸಿನಿಮಾ ಮಾಡುತ್ತಿಲ್ಲ... ಯಾಕೆ ಏನಾಯ್ತು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
Pattathu Arassan ತಮಿಳು ಸಿನಿಮಾ, Amigos ತೆಲುಗು ಸಿನಿಮಾದಲ್ಲಿ ಆಶಿಕಾ ನಟಿಸಿದ್ದಾರೆ. Naa Saami Ranga ತೆಲುಗು ಸಿನಿಮಾದಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಸದ್ಯ ಓ2 ಮತ್ತು ಘತವೈಭವ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಕೈ ತುಂಬಾ ಸಿನಿಮಾಗಳಿದ್ದರೂ ಆಶಿಕಾ ಎಲ್ಲೂ ಮಿಸ್ಸಿಂಗ್ ಅಂತಾರೆ ಫ್ಯಾನ್ಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.