ಮೊದಲ ತೆಗುಲು ಚಿತ್ರದಲ್ಲಿ ನಟಿಸಿ ಡಬ್ಬಿಂಗ್ ಮಾಡಿದ ಅನು ಪ್ರಭಾಕರ್!
ಡೆಬ್ಯೂ ತೆಲುಗು ಸಿನಿಮಾ ಚಿತ್ರಿಕರಣ ಮುಗಿಸಿದ ಅನು ಪ್ರಭಾಕರ್. ಮುರಳಿ ಶರ್ಮಾ ಜೊತೆಗಿನ ಸಿನಿಮಾವಿದು...
ಕನ್ನಡ ಚಿತ್ರರಂಗದ ಅದ್ಭುತ ನಟಿ ಅನು ಪ್ರಭಾಕರ್ ಮೊದಲ ಬಾರಿಗೆ ತೆಗುಲು ಸಿನಿಮಾಗೆ ಸಹಿ ಮಾಡಿ ಚಿತ್ರೀಕರಣ ಕೂಡ ಮುಗಿಸಿರುವುದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸುರೇಂದ್ರ ರೆಡ್ಡಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಅನು ಪ್ರಭಾಕರ್‌ಗೆ ಜೋಡಿಯಾಗಿ ಮುರಳಿ ಶರ್ಮಾ ಕಾಣಿಸಿಕೊಂಡಿದ್ದಾರೆ. ಅಖಿಲ್ ಅಕ್ಕಿನೇನಿ ಮತ್ತು ಸಾಕ್ಷಿ ವೈಧ್ಯ ಕೂಡ ಅಭಿನಯಿಸಿದ್ದಾರೆ.
'ನನ್ನ ತಮಿಳು ಸಿನಿಮಾವನ್ನು ಈ ಹಿಂದೆ ತೆಗುಲು ಭಾಷೆಗೆ ಡಬ್ ಮಾಡಲಾಗಿತ್ತು. ಆದರೆ ಏಜೆಂಟ್ ನನ್ನ ತೆಲುಗು ಚೊಚ್ಚಲ ಸಿನಿಮಾ ಆಗಿರಲಿದೆ. ಮುರಳಿ ಶರ್ಮಾ ಜೊತೆ ಅಭಿನಯಿಸಿರುವೆ'
'ನಾನು ತೆಲುಗು ಮಾತನಾಡುವ ಶೈಯಲ್ಲಿ ಇಷ್ಟ ಪಟ್ಟು ಸಿನಿಮಾ ಡಬ್ ಮಾಡಿ ಎಂದು ಹೇಳಿದ್ದರು. ಡಬಿಂಗ್ ಮಾಡಿರುವೆ ನಿರ್ಧಾರ ಈಗ ಚಿತ್ರತಂಡದ ಕೈಯಲ್ಲಿದೆ. ಕೆಲವರಿಗೆ ಮಾತ್ರ ನಟಿಸಿ ಡಬಿಂಗ್ ಮಾಡಲು ಅವಕಾಶ ಸಿಗುವುದು' ಎಂದು ಅನು ಪ್ರಭಾಕರ್ ಹೇಳಿದ್ದಾರೆ.
'ಎಲ್ಲವೂ ಅಂದುಕೊಂಡಿದ್ದಕ್ಕಿಂತ ಬೇಗ ಬೇಗ ನಡೆಯಿತ್ತು. ನಿರ್ದೇಶಕರು ಸುರೇಂದ್ರ ರೆಡ್ಡಿ ಒಳ್ಳೆಯ ಕಂಫರ್ಟ್ ಝೋನ್ ಕೊಡುವ ಕಾರಣ ಕೆಲಸದ ಕಡೆ ಗಮನ ಹರಿಸಲು ಸಹಾಯವಾಗುತ್ತದೆ'
'ಹಾಗಾ ಸಿನಿಮಾದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಇದೊಂದು ಸಸ್ಪೆನ್ಸ್ ಥ್ರಿಲರ್ ಸಿನಿಮಾ ಆಗಿದ್ದು ಅವಿನಾಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನನ್ನ ಪಾತ್ರದ ಬಗ್ಗೆ ಹೇಳಿದ್ದರೆ ಕಥೆ ರಿವೀಲ್ ಆಗುತ್ತದೆ'
'ಇದಾದ ನಂತರ ಮತ್ತೊಂದು ಮೆಲೋಡಿ ಡ್ರಾಮಾ ಸಿನಿಮಾ ಸಹಿ ಮಾಡಿರುವೆ ನೆಗೆಟಿವ್ ಪಾತ್ರವಿದೆ. ನನ್ನನ್ನು ಸಿನಿ ರಸಿಕರು ಎಂದೂ ಈ ರೀತಿ ನೋಡಿರುವುದಿಲ್ಲ ಹೀಗಾಗಿ ಕಂಡಿತ ಸರ್ಪ್ರೈಸ್ ಆಗಿರಲಿದೆ. ಮಂಜು ಕಾರ್ತಿಕ್ ಈ ಟೀಂನ ಲೀಡ್ ಮಾಡುತ್ತಿದ್ದಾರೆ'
ಕನ್ನಡ ಮತ್ತು ತೆಲುಗು ಸಿನಿಮಾ ಜೊತೆ ಅನು ಪ್ರಭಾಕರ್ ಕನ್ನಡ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ರಲ್ಲಿ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ.
'ಮಕ್ಕಳನ್ನು ಶೋನಲ್ಲಿ ನೋಡಲು ತುಂಬಾನೇ ಖುಷಿಯಾಗುತ್ತದೆ. ವಾರದಲ್ಲಿ ಒಂದು ದಿನ ಮಾತ್ರ ಟಿವಿ ಶೋಗೆ ಚಿತ್ರೀಕರಣ ಮಾಡುವುದು ಇನ್ನು ಉಳಿದಿರುವ ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡುವೆ' ಎಂದಿದ್ದಾರೆ ಅನು.