ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅನು ಪ್ರಭಾಕರ್ - ರಘು ಮುಖರ್ಜಿ ದಂಪತಿಗಳು
ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಗಳು ಇತ್ತೀಚೆಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಮನೆಮಂದಿ ಜೊತೆ ಆಚರಿಸಿದರು.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶೇಷ ಪಾತ್ರ ಹಾಗೂ ಅಭುನಯ ಜೊತೆಗೆ ನಗುವಿನ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಅನುಪ್ರಭಾಕರ್ (Anu Prabhakar). ಇವತ್ತಿಗೂ ಕನ್ನಡಿಗರ ಪಾಲಿನ ಟೈಟಾನಿಕ್ ಚೆಲುವೆ.
ಇದೀಗ ಅನುಪ್ರಭಾಕರ್ ಹಾಗೂ ನಟ ರಘು ಮುಖರ್ಜಿ (Raghu Mukherjee) ತಮ್ಮ 9 ನೇ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಮನೆಮಂದಿ ಜೊತೆ ಸೇರಿ ಸಿಂಪಲ್ ಆಗಿ ಆಚರಿಸಿದ್ದು, ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅನುಪ್ರಭಾಕರ್ ಹಾಗೂ ರಘು ಮುಖರ್ಜಿ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಅನು ಪ್ರಭಾಕರ್ ಈ ಮೊದಲು ಕನ್ನಡದ ಖ್ಯಾತ ನಟಿ ಜಯಂತಿ ಅವರ ಮಗ ಕೃಷ್ಣ ಜೊತೆ ಮದುವೆಯಾಗಿದ್ದರು. ನಂತರ ಇಬ್ಬರು ಒಪ್ಪಿಗೆಯಿಂದ ವಿಚ್ಚೇಧನ ಪಡೆದರು.
ಅನು ಹಾಗೂ ರಘು ತಮ್ಮ ಮುದ್ದಿನ ಮಗಳು ನಂದನಾ, ಇಬ್ಬರ ಅಮ್ಮಂದಿರು ಹಾಗೂ ಕೆಲವು ಮಿತ್ರರ ಜೊತೆ ಸೇರಿ ಮನೆಯಲ್ಲಿ ಸಿಂಪಲ್ ಆಗಿ ಕೇಕ್ ಕತ್ತರಿಸಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ್ದಾರೆ. ಅಭಿಮಾನಿಗಳು ಈ ಮುದ್ದಾದ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಮೊದಲನೇ ಮದುವೆಯಿಂದ ಡಿವೋರ್ಸ್ (Divorce)ಪಡೆದ ಅನು ಅದೇ ಗುಂಗಿನಲ್ಲಿದ್ದರು, ಆ ಸಮಯದಲ್ಲಿ ರಘು ಮುಖರ್ಜಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ತು. ರಘು ಮುಖರ್ಜಿ ಆರಂಭದಲ್ಲಿ ಅನು ಟೈಗರ್ ಪ್ರಭಾಕರ್ ಮಗಳು ಎಂದುಕೊಂಡಿದ್ದರಂತೆ, ರಘು ಮಾತನಾಡೋದು ಕಡಿಮೆ, ಅನು ಮಾತನಾಡೋದು ಜಾಸ್ತಿ. ಇಬ್ಬರು ಅಷ್ಟಾಗಿ ಮಾತನಾಡುತ್ತಿರಲಿಲ್ಲವಂತೆ.
ಕಾರ್ಯಕ್ರಮವೊಂದರಲ್ಲಿ ರಘು ಮುಖರ್ಜಿ, ಅನು ಪ್ರಭಾಕರ್ ಜಡ್ಜ್ ಆಗಿದ್ದರಂತೆ, ಬಳಿಕ ಇವರ ನಡುವೆ ಸ್ನೇಹ ಬೆಳೆಯಿತು. ಮದುವೆ ಬಗ್ಗೆ ಯೋಚನೆ ಮಾಡಿರಲಿಲ್ಲವಂತೆ. ಆದರೆ ಮನೆಯವರೇ ಮುಂದೆ ನಿಂತು ಮದುವೆ ಮಾಡಲು ನಿರ್ಧರಿಸಿದ್ದರಂತೆ.
ನಂತರ 2016 ರಲ್ಲಿ ಈ ಜೋಡಿ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ (married life)ಕಾಲಿಡುವ ಮೂಲಕ, ಸಿನಿ ರಂಗಕ್ಕೆ ದೊಡ್ಡ ಶಾಕ್ ನೀಡಿದ್ದರು. 2018 ರಲ್ಲಿ ನಂದನಾ ಜನಿಸಿದಳು. ಇದೀಗ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ಜೋಡಿ, ಸುಂದರವಾಗಿ ಸಂಸಾರ ನಡೆಸುತ್ತಿದ್ದಾರೆ.