- Home
- Entertainment
- Sandalwood
- ಹುಟ್ಟುಹಬ್ಬದಂದು ಗಂಡ, ಮಗನ ಜೊತೆ ತಿರುವನಂತನಪುರ ಅನಂತ ಪದ್ಮನಾಭನ ದರ್ಶನ ಪಡೆದ ನಟಿ ತಾರಾ
ಹುಟ್ಟುಹಬ್ಬದಂದು ಗಂಡ, ಮಗನ ಜೊತೆ ತಿರುವನಂತನಪುರ ಅನಂತ ಪದ್ಮನಾಭನ ದರ್ಶನ ಪಡೆದ ನಟಿ ತಾರಾ
ಚಂದನವನದ ಹಿರಿಯ ನಟಿ ತಾರಾ ಅನುರಾಧ ಹುಟ್ಟುಹಬ್ಬದಂದು ಕೇರಳ ಪ್ರಸಿದ್ಧ ತಿರುವನಂತಪುರ ಅನಂತ ಪದ್ಮನಾಭನ ಸನ್ನಿಧಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಂದಿದ್ದಾರೆ.

ಸ್ಯಾಂಡಲ್’ವುಡ್ ನಲ್ಲಿ ಕಳೆದ 40 ವರ್ಷಗಳಿಂದ ವಿಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿರುವ ನಟಿ ತಾರಾ ಅನುರಾಧ (Thara Anuradha) ಮಾರ್ಚ್ 4 ರಂದು ತಮ್ಮ 52ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ತಮ್ಮ ಪತಿ ಹೆಚ್ ಸಿ ವೇಣುಗೋಪಾಲ್ (HC Venugopal) ಹಾಗೂ ಪುತ್ರನೊಂದಿಗೆ ವಿಶ್ವ ಪ್ರಸಿದ್ಧ ಕೇರಳದ ಶ್ರೀ ಅನಂತಪದ್ಮನಾಭನ ಸನ್ನಿಧಿಗೆ ತೆರಳಿ ಪದ್ಮನಾಭ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ.
ದರ್ಶನ ಪಡೆದ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಪತಿ, ಪುತ್ರನ ಜೊತೆ ಫೋಟೋ ತೆಗೆಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ತಮ್ಮ ಇನ್’ಸ್ಟಾಗ್ರಾಂನಲ್ಲಿ ಫೋಟೊಗಳ (Instagram photos) ಜೊತೆಗೆ ಕ್ಯಾಪ್ಶನ್ ಹಾಕಿರುವ ತಾರಾ ‘ಶುಭ ಮುಂಜಾನೆ ಎಲ್ಲರಿಗೂ...ನನಗೆ ಶುಭ ಕೋರಿದ ಎಲ್ಲಾ ಗುರು ಹಿರಿಯರಿಗೂ , ತಂದೆ ತಾಯಂದಿರಿಗೂ, ಸದಾ ಒಳಿತನ್ನುಕೋರುವ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಹ ತಾರಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಪ್ರೀತಿಯ ತಾರಮ್ಮ ನೀವು ನೂರು ಕಾಲ ನಗುನಗುತ್ತಾ ಸುಖವಾಗಿ ಬಾಳಿ ಎಂದು ಹಾರೈಸಿದ್ದಾರೆ.
ಕಳೆದು ತಿಂಗಳು ನಟಿ ತಾರಾ ತಮ್ಮ ಎಂಗೇಜ್ ಮೆಂಟ್ ಆನಿವರ್ಸರಿಯನ್ನು (engagement anniversary) ದುಬೈನಲ್ಲಿ ಆಚರಿಸಿಕೊಂಡಿದ್ದರು. ನಿರೂಪಕಿ ಅನುಶ್ರೀ ಅವರಿಗೆ ಸಾತ್ ನೀಡಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇನ್ನು ಇತ್ತೀಚೆಗಷ್ಟೇ ನಟಿ ತಾರಾಗೆ ಡಾಕ್ಟರೇಟ್ ಗೌರವ ಕೂಡ ಪಡೆದಿದ್ದರು. ಅದರ ಸಂಭ್ರಮವನ್ನು ಸಿನಿರಂಗದ ನಟ, ನಟಿಯರಿಗೆ ಮನೆಯಲ್ಲಿ ಊಟ, ಆಟವನ್ನು ಏರ್ಪಡಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ ತಾರಮ್ಮ ಕೊನೆಯದಾಗಿ ಧನಂಜಯ್ ಅಭಿನಯದ ಕೋಟಿ ಸಿನಿಮಾದಲ್ಲಿ ತಾಯಿಯಾಗಿ ನಟಿಸಿದ್ದರು. ಸದ್ಯ ವಾಮನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಟಿ ಕೆಲವು ರಿಯಾಲಿಟಿ ಶೋಗಳಲ್ಲೂ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.