- Home
- Entertainment
- Sandalwood
- ತಾಯಿಯನ್ನೆ ಮೀರಿಸುವ ಬುದ್ಧಿವಂತಿಕೆ; ಮೌನವಾಗಿ ಕುಳಿತುಬಿಟ್ಟ ನಟಿ ಶ್ರುತಿ ಪುತ್ರಿಯ ಕಾಲೆಳೆದ ನೆಟ್ಟಿಗರು
ತಾಯಿಯನ್ನೆ ಮೀರಿಸುವ ಬುದ್ಧಿವಂತಿಕೆ; ಮೌನವಾಗಿ ಕುಳಿತುಬಿಟ್ಟ ನಟಿ ಶ್ರುತಿ ಪುತ್ರಿಯ ಕಾಲೆಳೆದ ನೆಟ್ಟಿಗರು
ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಟ್ರೋಲ್ ಎದುರಿಸುತ್ತಿರುವ ನಟಿ ಶ್ರುತಿ ಪುತ್ರಿ. ಆದರೆ ಬರೆದಿರುವ ಸಾಲುಗಳು ಮಾತ್ರ ಫುಲ್ ಕನ್ಫ್ಯೂಸ್......

ಕನ್ನಡ ಚಿತ್ರರಂಗದ ಅದ್ಭುತ ನಟಿ ಶ್ರುತಿ ಕೃಷ್ಣ. ನೂರಾರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಚೆಲುವೆ ಈಗ ಕಿರುತೆರೆ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.
ಶೀಘ್ರದಲ್ಲಿ ನಟಿ ಶ್ರುತಿ ಪುತ್ರಿ ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ತಮ್ಮ ವಿದ್ಯಾಭ್ಯಾಸದ ಜೊತೆ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಬರುವ ಸುಳಿವು ಕೂಡ ಶ್ರುತಿ ನೀಡಿದ್ದರು.
ಕೆಲವು ದಿನಗಳಿಂದ ತಾಯಿ ಮತ್ತು ಆಪ್ತರೊಟ್ಟಿಗೆ ಗೌರಿ ಟೆಂಪಲ್ ರನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆಗ ದೇವಸ್ಥಾನ ಒಂದರ ಆವರಣದಲ್ಲಿ ಕ್ಲಿಕ್ ಮಾಡಿರುವ ಫೋಟೋಗಳಿವು.
'ತಲುಪೀತೆ ಈ ಮೌನ ನಿನ್ನೆದೆಯ ತೀರಕೆ ?' ಎಂಬ ಸಾಲುಗಳನ್ನು ಗೌರಿ ಈ ಫೋಟೋಗಳಿಗೆ ಕ್ಯಾಪ್ಶನ್ ರೀತಿ ನೀಡಿದ್ದಾರೆ. ಮಣಿಕಾಂತ್ ಈ ಫೋಟೋಗಳನ್ನು ಕ್ಲಿಕ್ ಮಾಡಿರುವುದು.
ಪೋಷಕರಿಗಿಂತ ಮಕ್ಕಳು ಈಗ ಒಂದು ಕೈ ಮುಂದಿರುತ್ತಾರೆ. ಇಂಡಸ್ಟ್ರಿಗೆ ಬರುವ ಮುನ್ನವೇ ಜನರೊಟ್ಟಿಗೆ ಕೆನಕ್ಷನ್ ಕ್ರಿಯೇಟ್ ಮಾಡಿಕೊಳ್ಳುತ್ತಿರುವುದಕ್ಕೆ ತಾಯಿಯನ್ನೆ ಮೀರಿಸುವ ಬುದ್ಧಿವಂತೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಈ ಫೋಟೋಗಳಿಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ 'ನನಗೆ ತುಂಬಾ ಇಷ್ಟ ಆಯ್ತು ಗೌರಿ' ಎಂದು ಕಾಮೆಂಟ್ ಮಾಡಿದ್ದಾರೆ. 'ಥ್ಯಾಂಕ್ಸ್ ಯು ಕ್ವೀನ್' ಎಂದು ಗೌರಿ ಪ್ರತಿಕ್ರಿಯೆ ನೀಡಿದ್ದಾರೆ.