- Home
- Entertainment
- Sandalwood
- ಆ ವ್ಯಕ್ತಿ ಎಲ್ಲೆಲ್ಲಿ ಹೇಗೆಲ್ಲಾ ಮುಟ್ಟಿದ....ತುಂಬಾ ಹಿಂಸೆ ಆಯ್ತು; ಕರಾಳ ಸತ್ಯ ಬಿಚ್ಚಿಟ್ಟ ಶಕೀಲಾ
ಆ ವ್ಯಕ್ತಿ ಎಲ್ಲೆಲ್ಲಿ ಹೇಗೆಲ್ಲಾ ಮುಟ್ಟಿದ....ತುಂಬಾ ಹಿಂಸೆ ಆಯ್ತು; ಕರಾಳ ಸತ್ಯ ಬಿಚ್ಚಿಟ್ಟ ಶಕೀಲಾ
ಸಿನಿಮಾ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಎದುರಿಸುವ ಕರಾಳ ಸತ್ಯವನ್ನು ಬಿಚ್ಚಿಟ್ಟ ನಟಿ ಶಕೀಲಾ. ನಿಜಕ್ಕೂ ಏನ್ ಅಯ್ತು?

90ರ ದಶಕದ ನೀಲಿ ತಾರೆ ಶಕೀಲಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಹಾಟ್ ಆಂಡ್ ಬೋಲ್ಡ್ ನಟಿಯರ ಲಿಸ್ಟ್‌ನಲ್ಲಿ ಈಗಲೂ ಮೊದಲ ಸ್ಥಾನ ಪಡೆದಿರುವುದು ಶಕೀಲಾನೇ.
ಬೋಲ್ಡ್ ಪಾತ್ರಗಳನ್ನು ಮಾಡುವ ನಟಿಯರಿಗೆ ಯಾವುದೇ ಮೀಟೂ ಅನುಭವ ಆಗಿಲ್ವಾ ಅಂತ ಪ್ರಶ್ನೆ ಮಾಡಿದ್ದರೆ ಸಾಲು ಸಾಲು ಘಟನೆಗಳನ್ನು ವಿವರಿಸುತ್ತಾರೆ.
ಶಕೀಲಾ ತಮ್ಮ ಮೊದಲ ಸಿನಿಮಾದಲ್ಲೇ ಬಿಕಿನಿ ಧರಿಸಿದ್ದರು. ಬಿಕಿನಿ ಧರಿಸಿ ಮೇಕಪ್ ಮಾಡಿಸಿಕೊಳ್ಳಲು ಖರ್ಚಿ ಮೇಲೆ ಕುಳಿತಿದ್ದರು. 'ಆಗ ಮೇಕಪ್ ಮ್ಯಾನ್ ಎಲ್ಲೆಲ್ಲಿ ಹೇಗೆಲ್ಲ ಮುಟ್ಟಿದ ಅನ್ನುವುದು ನನಗೆ ಮಾತ್ರ ಗೊತ್ತು' ಎಂದು ಈ ಹಿಂದೆ ಸಂದರ್ಶನಲ್ಲಿ ಶಕೀಲಾ ಹೇಳಿದ್ದರು.
'ಮೇಕಪ್ ಮ್ಯಾನ್ ಹಾಗೆ ಮಾಡಿದಾಗ ನನಗೆ ತುಂಬಾ ಹಿಂಸೆ ಆಯ್ತು. ಅಷ್ಟೇ ಅಲ್ಲ ಗೋಲ್‌ಮಾಲ್ ಚಿತ್ರದಲ್ಲಿ ನಟಿಸುವಾಗ ವಸ್ತ್ರವಿನ್ಯಾಸಕರೊಬ್ಬರು ನನ್ನ ಮನೆಗೆ ಬಂದು ಆಳತೆ ತೆಗೆದುಕೊಂಡಿದ್ದರು'
'ಮನೆಗೆ ಬಂದು ಬಟ್ಟೆ ಅಳತೆ ತೆಗೆದುಕೊಳ್ಳುವ ಸಮಯದಲ್ಲಿ ಅವರು ಕೂಡ ನನ್ನ ಜೊತೆ ತೀರಾ ಅಸಭ್ಯವಾಗಿ ವರ್ತಿಸಿದ್ದರು' ಎಂದು ಸ್ವತಃ ಶಕೀಲಾ ಹೇಳಿದ್ದಾರೆ.
ಅಲ್ಲದೆ ಮಲಯಾಳಂ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗದಲ್ಲಿ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ. ಎಣ್ಣೆ ಹೊಡೆದು ನಾಯಕಿಯರ ರೂಮಿಗೆ ನುಗ್ಗುವ ಸಂಪ್ರದಾಯವಿದೆ ಎಂದಿದ್ದಾರೆ ಶಕೀಲಾ.