- Home
- Entertainment
- Sandalwood
- ರಮ್ಯಾ ಧರಿಸಿರುವ ಕಪ್ಪು ಸೀರೆ ಬೆಲೆಗೆ 3 ತಿಂಗಳು ಬಡವರ ದಿನಸಿ ಬರ್ತಿತ್ತಂತೆ; ಫೋಟೋ ವೈರಲ್
ರಮ್ಯಾ ಧರಿಸಿರುವ ಕಪ್ಪು ಸೀರೆ ಬೆಲೆಗೆ 3 ತಿಂಗಳು ಬಡವರ ದಿನಸಿ ಬರ್ತಿತ್ತಂತೆ; ಫೋಟೋ ವೈರಲ್
ಮೋಹಕ ತಾರೆಯನ್ನು ಸೀರೆಯಲ್ಲಿ ನೋಡಿ ಎಲ್ಲರೂ ಫುಲ್ ಶಾಕ್. ಫ್ಯಾನ್ಸಿ ಸೀರೆಯ ಬೇಲೆಯನ್ನು ಕೇಳಿ ಎಲ್ಲರೂ ಶಾಕ್....

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಇತ್ತೀಚಿಗೆ ಸೀರೆ ಮತ್ತು ಸೆಲ್ವಾರ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಪ್ಪು ಸೀರೆ ಲುಕ್ ವೈರಲ್ ಆಗುತ್ತಿದೆ.
ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ಮದುವೆಯಲ್ಲಿ ರಮ್ಯಾ ಭಾಗಿಯಾಗಿದ್ದರು. ಆಗ ಕಪ್ಪು ಬಣ್ಣದ ಡಿಸೈನರ್ ಫ್ಯಾನ್ಸಿ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಲುಕ್ ಸಖತ್ ವೈರಲ್ ಆಗಿತ್ತು.
ಕಪ್ಪು ಬಣ್ಣದ ಸೀರೆಗೆ ಗೋಲ್ಡ್ ಬಾರ್ಡರ್ ಮತ್ತು ಗೋಲ್ಡನ್ ಬ್ಲೌಸ್ ಧರಿಸಿದ್ದಾರೆ. ಈ ಸೀರೆಯನ್ನು ಪುನೀತ್ ಬಲನಾ ಡಿಸೈನ್ ಮಾಡಿದ್ದು 47,500 ರೂಪಾಯಿ ಎನ್ನಲಾಗಿದೆ.
ಸೀರೆ ಲುಕ್ ಮ್ಯಾಚ್ ಆಗುವಂತೆ ಕ್ರೀಮ್ ಬಣ್ಣದ ಪೋಥ್ಲಿ ಹಿಡಿದುಕೊಂಡಿದ್ದಾರೆ. ಇದನ್ನು Beau Monde Accessories ಅವರದ್ದಾಗಿದ್ದು 7,500 ರೂಪಾಯಿ ಎನ್ನಲಾಗಿದೆ.
ಸಣ್ಣ ಕಾರ್ಯಕ್ರಮಕ್ಕೆ ರಮ್ಯಾ ಹೋಗಿ ಬರಲು 55 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ತಿಳಿದು ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ರಮ್ಯಾ ಸೂಪರ್ ಆಗಿ ಕಾಣಿಸಿಕೊಂಡಿದ್ದರೂ ಬೆಲೆ ದುಬಾರಿ.
ಮೇಡಂ ಈ ಹಣದಲ್ಲಿ ಮೂರು ತಿಂಗಳು ಬಡವರ ಮನೆ ದಿನಸಿ ಖರ್ಚು...ನೀವು ಯಾಕೆ ಸಿಂಪಲ್ ಆಗಬಾರದು ಕಡಿಮೆ ವೆಚ್ಚದಲ್ಲಿ ಖರೀದಿಸಬಾರದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.