- Home
- Entertainment
- Sandalwood
- 'ನಾವು ಎಂದಿಗೂ ಲವರ್ಸ್ ಆಗಿರ್ಲಿಲ್ಲ..' ಉಪ್ರೇಂದ್ರ ಜತೆಗಿನ 'ಪ್ರೀತಿ' ಬಗ್ಗೆ ಪ್ರೇಮಾ ಬಿಚ್ಚುಮಾತು!
'ನಾವು ಎಂದಿಗೂ ಲವರ್ಸ್ ಆಗಿರ್ಲಿಲ್ಲ..' ಉಪ್ರೇಂದ್ರ ಜತೆಗಿನ 'ಪ್ರೀತಿ' ಬಗ್ಗೆ ಪ್ರೇಮಾ ಬಿಚ್ಚುಮಾತು!
ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಪ್ರೀತಿ ಇದೆ ಎಂಬ ವದಂತಿ ʻAʼ ಸಿನಿಮಾ ತೆರೆಗೆ ಬರುವ ಸಂದರ್ಭದಲ್ಲಿ ಹಬ್ಬಿತ್ತು. ಈ ಬಗ್ಗೆ ನಟಿ ಪ್ರೇಮಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

90ರ ದಶಕದ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ..ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಬಳಿಕ ತಮ್ಮ ವೈಯಕ್ತಿಕ ಜೀವನದ ಕಾರಣ ಸಿನಿರಂಗದಿಂದ ದೂರ ಉಳಿದಿದ್ದರು.
ಇತ್ತೀಚಿಗೆ ಕಿರುತೆರೆ ಕಾರ್ಯಕ್ರಮಗಳು, ಸಿನಿಮಾ ಇವೆಂಟ್‌ಗಳಲ್ಲಿ ಭಾಗಿಯಾಗುತ್ತಿರುವ ನಟಿ ಪ್ರೇಮ ಸಂದರ್ಶನಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಅದೇ ರೀತಿ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರೇಮಾ ತಮ್ಮ ಜೀವನದಲ್ಲಾದ ಏರಿಳಿತಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಮೊದಲಿಗೆ ಈ ಕರಿಮಣಿ ಮಾಲೀಕ ಯಾರು? ಎನ್ನುವ ಪ್ರಶ್ನೆಯನ್ನು ರಾಜೇಶ್ ನಟಿ ಪ್ರೇಮಾ ಅವರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಪ್ರೇಮಾ, 'ಆ ಸಿನಿಮಾ ಮಾಡಿದ ಉಪೇಂದ್ರ ಅವರೇ ಕರಿಮಣಿ ಮಾಲೀಕ. ಆ ಸಿನಿಮಾ ಬಂದಾಗ ಹಾಡು ಬಂದಾಗ ಅದು ಸ್ಲೋ ಆಗಿ ಇತ್ತು. ಈಗ ಅದನ್ನು ರೀಮಿಕ್ಸ್ ಮಾಡಿ ಬೇರೆ ತರ ಚೇಂಜ್ ಮಾಡಿದ್ದಾರೆ' ಎಂದರು.
ಇನ್ನು ಆ ಸಮಯದಲ್ಲಿ ಉಪೇಂದ್ರ ಹಾಗೂ ಪ್ರೇಮಾ ಲವ್ ಇತ್ತು. ಅದಕ್ಕಾಗಿಯೇ ಹಾಡು ಬರೆಯಲಾಗಿತ್ತು ಎನ್ನುವ ಮಾತಿಗೆ ಉತ್ತರಿಸಿದ ನಟಿ ಪ್ರೇಮಾ, 'ನನಗೆ ಗೊತ್ತಿಲ್ಲ. ಉಪೇಂದ್ರ ಅವರ ತಲೆಯಲ್ಲಿ ಏನಿತ್ತು ಅಂತ ನನಗೆ ಗೊತ್ತಿಲ್ಲ. ಆ ಹಾಡು ಚೆನ್ನಾಗಿ ಬಂತು. ಆ ಪದಗಳಿಗೂ ಚಿತ್ರಕ್ಕೂ ಹೊಂದಿಕೆ ಆಯ್ತು' ಎಂದು ಹೇಳಿದ್ದಾರೆ.
'ನೋಡಿ ನಾವಿಬ್ಬರು ವಿರೋಧಿಗಳಲ್ಲ. ನಾನಾಗಲಿ ಉಪೇಂದ್ರ ಆಗಲಿ ಹಾಗೇ ಇರಲಿಲ್ಲ ನಾವು. ನಮಗೆ ಬರೀ ಕೆಲಸ ಮಾಡುವ ಹಸಿವು ಇತ್ತು. ಲವ್ ಮಾಡುವ ಬಗ್ಗೆ ತಲೆಯಲ್ಲೇ ಇರುತ್ತಿರಲಿಲ್ಲ. ನನಗೆ ಅವರ ಹಾರ್ಡ್‌ವರ್ಕ್ ಇಷ್ಟ ಆಗುತ್ತಿತ್ತು.
ಉಪೇಂದ್ರ ತುಂಬಾ ಹಾರ್ಡ್‌ವರ್ಕ್ ಮಾಡುತ್ತಿದ್ದರು. ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲ. ಜೊತೆಯಲ್ಲಿ ಎರಡು ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದೆವು. ಆದರೆ ನಮ್ಮ ನಡುವೆ ಅಂತಹದು ಏನು ಇರಲಿಲ್ಲ' ಎಂದು ನಟಿ ಪ್ರೇಮ ಸ್ಪಷ್ಟವಾಗಿ ಹೇಳಿದ್ದಾರೆ.
ಇನ್ನು ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿರುವ ನಟಿ ಪ್ರೇಮ ಕೆಲವೊಂದಿಷ್ಟು ವರ್ಷಗಳಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರು. ಇದೀಗ ಮತ್ತೆ ಮಹಾನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ಆಗಿ ತೆರೆ ಮುಂದೆ ಬಂದಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.