- Home
- Entertainment
- Sandalwood
- ಈ ಸಲ ಕಪ್ ನಮ್ದೆ ಎಂದು ಅವಳಿ ಮಕ್ಕಳಿಗೆ RCB ಜರ್ಸಿ ಧರಿಸಿ ಫೋಟೋಶೂಟ್ ಮಾಡಿಸಿದ ನಟಿ ಅಮೂಲ್ಯ
ಈ ಸಲ ಕಪ್ ನಮ್ದೆ ಎಂದು ಅವಳಿ ಮಕ್ಕಳಿಗೆ RCB ಜರ್ಸಿ ಧರಿಸಿ ಫೋಟೋಶೂಟ್ ಮಾಡಿಸಿದ ನಟಿ ಅಮೂಲ್ಯ
ವೈರಲ್ ಆಯ್ತು ಅಥರ್ವ್ ಮತ್ತು ಆಧವ್ ಆರ್‌ಸಿಬಿ ಫೋಟೋಶೂಟ್. ಮುಂದಿನ ಕ್ರಿಕೆಟರ್ಸ್ ಎಂದ ನೆಟ್ಟಿಗರು....

ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಜಗದೀಶ್ ತಮ್ಮ ಮುದ್ದಾದ ಅವಳಿ ಮಕ್ಕಳಿಗೆ ಆರ್‌ಸಿಬಿ ಜರ್ಸಿ ಧರಿಸಿ ಫೋಟೋ ಶೂಟ್ ಮಾಡಿದ್ದಾರೆ.
ಏಪ್ರಿಲ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮ್ಯಾಚ್ ನಡೆಯಿತ್ತು. ಹೀಗಾಗಿ ಅಮೂಲ್ಯ ಫೋಟೋ ಶೂಟ್ ಮಾಡಿಸಿದ್ದಾರೆ.
ಮಕ್ಕಳಿಗೆ ಆರ್‌ಸಿಬಿ ಜರ್ಸಿ ರೆಡಿ ಮಾಡಿಸಿದ್ದಾರೆ. ಮಕ್ಕಳ ಜರ್ಸಿ ಮೇಲೆ ಅವರ ಹೆಸರುಗಳಿದೆ. ಇಬ್ಬರ ಕೈಗೆ ಬ್ಯಾಟ್ ಆಂಡ್ ಬಾಲ್ ಕೊಟ್ಟಿದ್ದಾರೆ.
'ಇಂದು ಬಿಗ್ ಮ್ಯಾಚ್ ಡೇ ಆಗಿರಲಿದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ಮಿಂಚದಲಿದ್ದಾರೆ. ನನ್ನ ಮುದ್ದು ಅವಳಿ ಮಕ್ಕಳು ಅಥರ್ವ್ ಮತ್ತು ಆಧವ್ ಆರ್‌ಸಿಬಿಗೆ ಚಿಯರ್ ಮಾಡಲು ರೆಡಿಯಾಗಿದ್ದಾರೆ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಈ ಸಲ ಕಮ್ ನಮ್ದೆ ಎಂದು ಕಾಮೆಂಟ್ ಮಾಡುತ್ತಿದ್ದ ಕಾರಣ ಮತ್ತೊಮ್ಮೆ ಮಕ್ಕಳ ಫೋಟೋ ಹಾಕಿ ಅಮೂಲ್ಯ ಕೂಡ ಕಮ್ ನಮ್ದೆ ಎಂದಿದ್ದಾರೆ.
ಪ್ರತಿ ವಿಶೇಷ ದಿನದಂದು ಅಮೂಲ್ಯ ಮಕ್ಕಳಿಗೆ ಫೋಟೋ ಶೂಟ್ ಮಾಡಿಸುತ್ತಾರೆ. ಕೆಲವು ದಿನಗಳ ಹಿಂದೆ ನಡೆದ ಶ್ರೀರಾಮ ನವಮಿ ಹಬ್ಬಕ್ಕೂ ಶೂಟ್ ಮಾಡಿದ್ದಾರೆ.