- Home
- Entertainment
- Sandalwood
- Photos: ಅದ್ದೂರಿಯಾಗಿ ಮಗಳು ನೇಸರ ಜನ್ಮದಿನ ಆಚರಿಸಿದ ಅದಿತಿ ಪ್ರಭುದೇವ; ಸ್ಯಾಂಡಲ್‌ವುಡ್ ತಾರೆಯರು ಭಾಗಿ!
Photos: ಅದ್ದೂರಿಯಾಗಿ ಮಗಳು ನೇಸರ ಜನ್ಮದಿನ ಆಚರಿಸಿದ ಅದಿತಿ ಪ್ರಭುದೇವ; ಸ್ಯಾಂಡಲ್‌ವುಡ್ ತಾರೆಯರು ಭಾಗಿ!
ನಟಿ ಅದಿತಿ ಪ್ರಭುದೇವ ಅವರು ಅದ್ದೂರಿಯಾಗಿ ಮಗಳ ಜನ್ಮದಿನವನ್ನು ಆಚರಿಸಿದ್ದಾರೆ. ಈ ಜನ್ಮದಿನದ ಸಂಭ್ರಮದಲ್ಲಿ ಅನೇಕ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿ ಶುಭ ಹಾರೈಸಿದ್ದಾರೆ.

2022ರಂದು ಮದುವೆಯಾಗಿದ್ದ ಕನ್ನಡ ನಟಿ ಅದಿತಿ ಪ್ರಭುದೇವ ಅವರು 2024 ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಮಗಳಿಗೆ ಅವರು ನೇಸರ ಎಂದು ಹೆಸರಿಟ್ಟಿದ್ದಾರೆ. ಅದಿತಿ ಪ್ರಭುದೇವ ಅವರಿಗೆ ಪ್ರಕೃತಿ ಎಂದರೆ ತುಂಬ ಇಷ್ಟ. ಹೀಗಾಗಿ ಅವರು ಈ ಹೆಸರಿಟ್ಟಿದ್ದಾರೆ.
ಇನ್ನು ಮಗಳಿಗೆ 6 ತಿಂಗಳು ತುಂಬಿದಾಗಲೂ ಕೂಡ, ಅದಿತಿ ಪ್ರಭುದೇವ ಅವರು ಅದ್ದೂರಿಯಾಗಿ ಆರು ತಿಂಗಳ ಜನ್ಮದಿನ ಆಚರಣೆ ಮಾಡಿದ್ದರು.
ಅದಾದ ಬಳಿಕ ನಟಿ ಅದಿತಿ ಪ್ರಭುದೇವ ಅವರು ಸೋಶಿಯಲ್ ಮೀಡಿಯಾದಲ್ಲಿ ಮೊದಲ ಬಾರಿಗೆ ಮಗುವಿನ ಮುಖವನ್ನು ರಿವೀಲ್ ಮಾಡಿದ್ದರು.
ಅದಿತಿ ಪ್ರಭುದೇವ ಮಗಳ ಜನ್ಮದಲ್ಲಿ ʼಸರಿಗಮಪʼ ರಿಯಾಲಿಟಿ ಶೋ ಖ್ಯಾತಿಯ ಸ್ಪರ್ಧಿಗಳು, ಸಂಗೀತ ನಿರ್ದೇಶಕ ಗುರುಕಿರಣ್ ಅವರು ಕೂಡ ಹಾಡಿದ್ದರು.
ನಟಿ ಅದಿತಿ ಪ್ರಭುದೇವ ಅವರ ಮಗಳ ಜನ್ಮದಿನದ ಪಾರ್ಟಿಯಲ್ಲಿ ʼಹಿಟ್ಲರ್ ಕಲ್ಯಾಣʼ ಧಾರಾವಾಹಿ ಖ್ಯಾತಿಯ ನಟಿ ಮಲೈಕಾ ಟಿ ವಸುಪಾಲ್ ಕೂಡ ಭಾ
ಕನ್ನಡ ನಟಿ ಅದಿತಿ ಪ್ರಭುದೇವ ಅವರ ಮಗಳ ಜನ್ಮದಿನಕ್ಕೆ ನಟಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗಾರ್ ಅವರು ಶುಭ ಹಾರೈಸಿದ್ದಾರೆ.
ನಟಿ ಅದಿತಿ ಪ್ರಭುದೇವ ಅವರು ಬಿಳಿ ಥೀಮ್‌ನಲ್ಲಿ ಮಗಳ ಜನ್ಮದಿನ ಆಚರಿಸಿದ್ದಾರೆ. ನೇಸರ ಕೂಡ ಮುದ್ದಾದ ಬಿಳಿ ಡ್ರೆಸ್‌ನಲ್ಲಿ ಮಿಂಚಿದ್ದಾಳೆ. ಇನ್ನು ಅದಿತಿ ದಂಪತಿ ಕೂಡ ಬಿಳಿ ಡ್ರೆಸ್ ಧರಿಸಿದ್ದರು.
ಅದಿತಿ ಪ್ರಭುದೇವ ಅವರ ಮಗಳನ್ನು ನಟಿ ಮೇಘನಾ ಸರ್ಜಾ ಸಮಾಧಾನ ಮಾಡಲು ಪ್ರಯತ್ನಪಟ್ಟಿದ್ದಾರೆ. ರಾಯನ್ ರಾಜ್ ಕೂಡ ಈ ಸಮಯದಲ್ಲಿ ಹಾಜರಿ ಹಾಕಿದ್ದನು.
ನಟಿ ಅದಿತಿ ಪ್ರಭುದೇವ ಅವರು ಪತಿ ಯಶಸ್ ಪಟ್ಲ ಜೊತೆಗೆ ರೊಮ್ಯಾಂಟಿಕ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಗಳ ಜೊತೆಯೂ ಡ್ಯಾನ್ಸ್ ಮಾಡಿದ್ದಾರೆ.