KGF2 ಸೇರಿದ ಪ್ರಕಾಶ್ ರಾಜ್: ಶೂಟಿಂಗ್ ಶುರು
ಬಹುಭಾಷಾ ನಟ ಪ್ರಕಾಶ್ ರಾಜ್ ಕೆಜಿಎಫ್ 2 ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಕೆಜಿಎಫ್ 2 ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ಮೊಟಕುಗೊಂಡಿತ್ತು.
ಇದೀಗ ಕೆಜಿಎಫ್ 2 ಸಿನಿಮಾ ತಂಡ ಚಿತ್ರೀಕರಣ ಆರಂಭಿಸಿದೆ.
ಸಿನಿಮಾ ಶೂಟಿಂಗ್‌ನಲ್ಲಿ ಮಾಳವಿಕಾ ಅವಿನಾಶ್ ಮತ್ತು ಪ್ರಕಾಶ್ ರಾಜ್ ಭಾಗಿಯಾಗಿದ್ದಾರೆ.
ತಾವು ಕೆಜಿಎಫ್ 2 ತಂಡವನ್ನು ಸೇರಕೊಳ್ಳುತ್ತಿರುವುದಾಗಿ ಪ್ರಕಾಶ್ ರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಶೂಟಿಂಗ್ ಸೆಟ್‌ನ ಫೋಟೋ ಶೇರ್ ಮಾಡಿಕೊಂಡ ನಟ ಖುಷಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಲಾಕ್‌ಡೌನ್ ನಂತರ ಚಿತ್ರೀಕರಣ ನಡೆಯುತ್ತಿದ್ದು, ಸೆಟ್‌ನ ಕೆಲವು ಫೋಟೊ ಹಂಚಿಕೊಂಡಿದ್ದಾರೆ