- Home
- Entertainment
- Sandalwood
- ಬೆಂಗಳೂರಿಗೆ ಮರಳಿದ ದುನಿಯಾ ವಿಜಯ್ ಕಿರಿಯ ಪುತ್ರಿ; ಕಲರ್ ಕಮ್ಮಿ ಆದ್ರೂ ನಮ್ಗೆ ಓಕೆ ಎಂದ ನೆಟ್ಟಿಗರು!
ಬೆಂಗಳೂರಿಗೆ ಮರಳಿದ ದುನಿಯಾ ವಿಜಯ್ ಕಿರಿಯ ಪುತ್ರಿ; ಕಲರ್ ಕಮ್ಮಿ ಆದ್ರೂ ನಮ್ಗೆ ಓಕೆ ಎಂದ ನೆಟ್ಟಿಗರು!
ಬರ್ತಿದ್ದಂಗೆ ಫೋಟೋಶೂಟ್ ಮಾಡಿಸಿದ ಮೋನಿಷಾ ವಿಜಯ್. ನ್ಯೂಯಾರ್ಕ್ ಫಿಲ್ಮಂ ಅಕಾಡಮಿಯಿಂದ ಪದವಿ....

ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ (Duniya Vijay) ನಟನೆ ಹಾಗೂ ನಿರ್ದೇಶನದ ಭೀಮಾ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.
ಕಳೆದ ವರ್ಷ ದುನಿಯಾ ವಿಜಯ್ ಕಿರಿಯ ಪುತ್ರಿ ಮೋನಿಷಾ ಸಿನಿಮಾಗಳ ಬಗ್ಗೆ ವ್ಯಾಸಂಗ ಮಾಡಲು ನ್ಯೂ ಯಾರ್ಕ್ ವಿಶ್ವವಿದ್ಯಾಲಯದ ಕಡೆ ಮುಖ ಮಾಡಿದ್ದರು.
ಕೈಗೆ ಪದವಿ ಸೇರುತ್ತಿದ್ದಂತೆ ಕರ್ನಾಟಕಕ್ಕೆ ಮರುಳಿದ್ದಾರೆ ಮೋನಿಷಾ. ಕಾಲಿಡುತ್ತಿದ್ದಂತೆ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.
ಬೆಂಗಳೂರಿಗೆ ಬರುತ್ತಿದ್ದಂತೆ ಕ್ರೀಂ ಬಣ್ಣದ ವಾಸ್ ಕೋರ್ಟ್ ಮತ್ತು ಫಾರ್ಮಲ್ ಪ್ಯಾಂಟ್ ಧರಿಸಿ ಮೋನಿಷಾ ಫೋಟೋಶೂಟ್ ಮಾಡಿಸಿದ್ದಾರೆ.
ಮೇಡಂ ನೀವು ಕಲರ್ ಕೊಂಚ ಕಮ್ಮಿ ಆದ್ರೂ ಮಹಾಲಕ್ಷ್ಮಿ ತರ ಇದ್ದೀರಿ ನಮಗೆ ನೀವು ಓಕೆ ಆದಷ್ಟು ಬೇಗ ನಾಯಕಿಯಾಗಿ ಎಂಟ್ರಿ ಕೊಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ದುನಿಯಾ ವಿಜಯ್ ಜೇಷ್ಠ ಪುತ್ರಿ ರಿತನ್ಯಾ ವಿಜಯ್ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ತಂದೆ ವಿಜಯ್ ಜೊತೆ ವಿಕೆ 1 ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಸೂರಿ ನಿರ್ದೇಶನದ ಕಾಗೆ ಬಂಗಾರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.