ಬಿಳಿ ಪಂಚೆ, ಬಿಳಿ ಶರ್ಟ್‌ನಲ್ಲಿ ಬಂದು ಮತದಾನ ಮಾಡಿದ ಧನಂಜಯ್; ಕುಟುಂಬದ ಜೊತೆ ಡಾಲಿ
ಬಿಳಿ ಪಂಚೆ, ಶರ್ಟ್ ಧರಿಸಿ ಸಹೋದರಿ ಮತ್ತು ಕುಟುಂಬದ ಜೊತೆ ಬಂದು ಡಾಲಿ ಧನಂಜಯ್ ಮತದಾನ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಕೂಡ ಮತದಾನ ಮಾಡಿದ್ದಾರೆ. ಬೆಳಗ್ಗೆಯೇ ಮತಗಟ್ಟೆಗೆ ಬಂದ ಡಾಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಧನಂಜಯ್ ತಮ್ಮ ಹುಟ್ಟೂರಾದ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ಬಿಳಿ ಪಂಚೆ ಮತ್ತು ಬಿಳಿ ಶರ್ಟ್‌ನಲ್ಲಿ ಮತಗಟ್ಟೆಗೆ ಬಂದ ಧನಂಜಯ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಶೇಷ ಎಂದರೆ ಧನಂಜಯ್ ಇಡೀ ಕುಟುಂಬದ ಜೊತೆ ಬಂದು ಮತದಾನ ಮಾಡಿದ್ದಾರೆ. ತಂದೆ, ತಾಯಿ ಅಜ್ಜಿ, ಸಹೋದರ ಸೇರಿದಂತೆ ಇಡೀ ಕುಟುಂಬದ ಜೊತೆ ಬಂದು ಮತದಾನ ಮಾಡಿದ್ದಾರೆ.
ಧನಂಜಯ್ ಸಹೋದರಿ ರಾಣಿ ಕೂಡ ಮತದಾನ ಮಾಡಿದ್ದಾರೆ. ವೋಟ್ ಮಾಡಿದ ಬಳಿಕ ಧನಂಜಯ್ ಸಹೋದರಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ತಮ್ಮ ಊರಿನ ಬೋರ್ಡ್ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.