ಗೆಳತಿ ನೀನು ಕೇಳಲೇ ಬೇಕು 'ಏನೀ ಅದ್ಭುತವೇ'! ಚಿತ್ರರಂಗದ ಕಲಾವಿದೆ ಮಾನಸಿ ಸುಧೀರ್!

First Published Jun 16, 2020, 4:53 PM IST

ಸಾಮಾಜಿಕ ಜಾಲತಾಣ ಅದೆಷ್ಟೋ ಪ್ರತಿಭೆಗಳಿಗೆ ತನ್ನ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇದೀಗ ಲಾಕ್ ಡೌನ್ ಸಮಯವನ್ನು  ಒಳ್ಳೆಯ ರೀತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ಈ ವೈರಲ್ ವಿಡಿಯೋ ಒಂದು ಸಾಬೀತುಮಾಡಿದೆ . ಕನ್ನಡದ ಸಾಹಿತ್ಯ ವಲಯ ಕಂಡ ಶ್ರೇಷ್ಠ ಕವಿಗಳಾದ ಅಂಬಿಕಾತನಯದತ್ತ ದ.ರಾ.ಬೇಂದ್ರೆ ಮತ್ತು ಜಾಲಿ ಬಾರಿನ ಪೋಲಿ ಗೆಳೆಯರನ್ನು ಪರಿಚಯಿಸಿದ ಬಿಆರ್ ಲಕ್ಷ್ಮಣ್ ರಾವ್ ಅವರ ಕವಿತೆಗಳಿಗೆ ತನ್ನ ಅಭಿನಯದ ಮೂಲಕ ಹೊಸದೊಂದು ರೂಪ ಕೊಟ್ಟಿರುವ ಈ ಅದ್ಭುತ ಕಲಾವಿದೆಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. 'ಏನೀ ಅದ್ಭುತವೇ' ಕವಿತೆಯನ್ನು ಭಾವಾಭಿನಯ ರೂಪದಲ್ಲಿ ಮತ್ತಷ್ಟು ಅದ್ಭುತವಾಗಿಸಿ ಅಪಾರ ಮೆಚ್ಚುಗೆಗಳಿಸಿದ್ದಾರೆ .ಇಷ್ಟೆಲ್ಲಾ ಪೀಠಿಕೆಗೆ ಕಾರಣರಾಗಿರುವ ಆ ಕಲಾವಿದೆ ಯಾರು ?ಎಲ್ಲಿಯವರು ? ಅವರ ಹಿನ್ನೆಲೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ..