ಕಾಡಿನಲ್ಲಿ ಪತ್ನಿ ಜೊತೆ ಅಭಿಷೇಕ್ ಸುತ್ತಾಟ; ಜೀಪ್ ಮೇಲೆ ಕುಳಿತಿರುವ ರೊಮ್ಯಾಂಟಿಕ್ ಫೋಟೋ ವೈರಲ್!
ಕಾಡಿನಲ್ಲಿ ಸುತ್ತಾಡುತ್ತಿರುವ ಅವಿವಾ- ಅಭಿ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....
ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಮುದ್ದಿನ ಪುತ್ರ ಅಭಿಷೇಕ್ (Abhishek Ambareesh).
ಜೂನ್ 5ರಂದು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿನಿಮಾ ತಾರೆಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು.
ಹಲವು ವರ್ಷಗಳ ಕಾಲ ಅಭಿ ಮತ್ತು ಅವಿವಾ ಪ್ರೀತಿಸಿದ್ದಾರೆ. ಅವಿವಾ ಮೂಲತಃ ಕೊಡಗಿನ ಕುವರಿ ಅಗಿದ್ದು ಫ್ಯಾಷನ್ ಡಿಸೈರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅಭಿ ಮತ್ತು ಅವಿವಾ ಜಾಲಿ ಮೂಡ್‌ನಲ್ಲಿದ್ದಾರೆ. ಜೀಪ್ ಏರಿ ಕಾಡಿನಲ್ಲಿ ಸುತ್ತಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವಿವಾ ಫೋಡೋ ಅಪ್ಲೋಡ್ ಮಾಡಿದ್ದಾರೆ.
ಅವಿವಾ ಮತ್ತು ಅಭಿ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜೀಪ್ ಮೇಲೆ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ.
ಇಡೀ ಊರು ಕಾವೇರಿ ನೀರಿನ ಚಿಂತೆ ಮಾಡುತ್ತಿದೆ ಆದರೆ ನೀವಿಬ್ಬರು ಜಾಲಿ ಮೂಡ್‌ನಲ್ಲಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.