- Home
- Life
- Relationship
- ನಟ ವರುಣ್ ಆರಾಧ್ಯ ಜೊತೆ ಬ್ರೇಕಪ್ನಿಂದ ಸದ್ದು ಮಾಡಿದ್ದ ರೀಲ್ಸ್ ಸ್ಟಾರ್ ವರ್ಷಾ ಕಾವೇರಿ ಕೊಟ್ರು ಗುಡ್ನ್ಯೂಸ್
ನಟ ವರುಣ್ ಆರಾಧ್ಯ ಜೊತೆ ಬ್ರೇಕಪ್ನಿಂದ ಸದ್ದು ಮಾಡಿದ್ದ ರೀಲ್ಸ್ ಸ್ಟಾರ್ ವರ್ಷಾ ಕಾವೇರಿ ಕೊಟ್ರು ಗುಡ್ನ್ಯೂಸ್
ಯೂಟ್ಯೂಬರ್ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಅವರ ಬ್ರೇಕಪ್ ವಿವಾದದ ನಂತರ, ವರ್ಷಾ ಈಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ಹುಡುಗನೊಬ್ಬನ ಕೈ ಹಿಡಿದಿರುವ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಮದುವೆಯ ಸುಳಿವು ನೀಡಿದ್ದಾರೆ.

ಬ್ರೇಕಪ್ ಸುದ್ದಿ
ರೀಲ್ಸ್ ಸ್ಟಾರ್, ನಟ ವರುಣ್ ಆರಾಧ್ಯ ಮತ್ತು ಯುಟ್ಯೂಬರ್ ವರ್ಷಾ ಕಾವೇರಿ ಲವ್ ಬ್ರೇಕಪ್ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ, ವರ್ಷಾ ಅವರು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವರುಣ್ ಆರಾಧ್ಯ ಜೀವ ಬೆದರಿಕೆ ಹಾಕಿದ್ದಾರೆ ಅಲ್ಲದೆ ವೈಯಕ್ತಿಕ ಪೋಟೋಗಳನ್ನು ಲೀಕ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿ ಸದ್ದು ಮಾಡಿದ್ದರು.
ಗುಡ್ನ್ಯೂಸ್ ಕೊಟ್ಟ ವರ್ಷಾ ಕಾವೇರಿ
ಇದೀಗ ಅವರು ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಅವರ ಮದುವೆ ನಡೆಯುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ ವರ್ಷಾ ಕಾವೇರಿ (Varsha Kaveri). ಅತ್ತ ವರುಣ್ ಆರಾಧ್ಯ ಅವರೂ ಶೀಘ್ರದಲ್ಲಿ ಮದುವೆಯಾಗಲಿದ್ದು, ಅದರ ಬೆನ್ನಲ್ಲೇ ವರ್ಷಾ ಅವರೂ ಗುಡ್ನ್ಯೂಸ್ ಕೊಟ್ಟಿದ್ದಾರೆ.
11:11 ಕ್ಕೆ ಒಂದು ಸಣ್ಣ ವಿಷ್
11:11 ಕ್ಕೆ ಒಂದು ಸಣ್ಣ ವಿಷ್ ಎನ್ನುವ ಕ್ಯಾಪ್ಷನ್ ಕೊಟ್ಟಿರುವ ವರ್ಷಾ ಅವರು, ಹುಡುಗನ ಕೈ ಹಿಡಿದಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ಅವರ ಮುಖ ರಿವೀಲ್ ಮಾಡಲಿಲ್ಲ.
ಈಚೆಗೆ ಆಸ್ತಿ ಖರೀದಿ
ಈಚೆಗಷ್ಟೇ ಇವರು, ಪ್ರಕೃತಿಯ ಮಡಿಲಲ್ಲಿರುವ, ಹತ್ತಿರದಲ್ಲೇ ನದಿ ಹರಿಯುವ, ನವಿಲುಗಳು ಬರುವಂತಹ ಅತ್ಯಂತ ಶಾಂತಿಯುತವಾದ ಜಾಗವನ್ನು ಆಯ್ದುಕೊಂಡು ನಿವೇಶನ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದರು. "ಯಾವುದೇ ಓವರ್ನೈಟ್ ಸಕ್ಸಸ್ ಇರುವುದಿಲ್ಲ, ನಿರಂತರ ಪರಿಶ್ರಮ ಮುಖ್ಯ. ಪ್ರತಿಯೊಬ್ಬ ಹೆಣ್ಣುಮಗಳೂ ಆರ್ಥಿಕವಾಗಿ ಸ್ವತಂತ್ರಳಾಗಬೇಕು. ಚಿನ್ನ, ಮ್ಯೂಚುವಲ್ ಫಂಡ್ಸ್ ಅಥವಾ ಪ್ರಾಪರ್ಟಿಯಂತಹ ಆಸ್ತಿಗಳಲ್ಲಿ (Assets) ಹೂಡಿಕೆ ಮಾಡುವುದು ಭವಿಷ್ಯದ ಸುರಕ್ಷತೆಗೆ ಅಗತ್ಯ" ಎಂದು ಅವರು ಹೇಳಿದ್ದರು.
ಸಂಬಂಧದ ಕುರಿತು ಹೀಗೆ ಹೇಳಿದ್ದರು
ಇನ್ನು ವರುಣ್ ಆರಾಧ್ಯ ಜೊತೆಗಿನ ಸಂಬಂಧ ಕುರಿತು ಈ ಹಿಂದೆ ಸದ್ದು ಮಾಡಿದ್ದರು ನಟಿ. ದೂರು ದಾಖಲು ಮಾಡಿದ ಬಳಿಕ ಅವರು, 'ಭವಿಷ್ಯದಲ್ಲಿ ನನ್ನ ಜೀವನಕ್ಕೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ನಾನು FIR ದಾಖಲು ಮಾಡಿದೆ. ನಾವಿಬ್ಬರು ರಿಲೇಷನ್ಶಿಪ್ನಲ್ಲಿದ್ದಾಗ ಸಾಕಷ್ಟು ವಿಡಿಯೋ ಮತ್ತು ಫೋಟೋಗಳನ್ನು ಟ್ರಿಪ್ಗೆ ಹೋಗಾದ ಕ್ಲಿಕ್ ಮಾಡಿಕೊಂಡಿದ್ವಿ ಅದು ಅವರ ಬಳಿ ಇನ್ನೂ ಇತ್ತು. ಸಾಮಾನ್ಯವಾಗಿ ಬ್ರೇಕಪ್ ಆದ ಮೇಲೆ ಅವರ ಫೋನ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಫೋಟೋಗಳನ್ನು ಡಿಲೀಟ್ ಮಾಡಿರಬೇಕು.. ನನ್ನ ಅಕೌಂಟ್ನಲ್ಲಿ ಯಾವುದನ್ನು ಉಳಿಸಿಕೊಂಡಿಲ್ಲ. ಅವರ ಸ್ನೇಹಿತರ ಮೂಲಕ ಸಂಪರ್ಕ ಮಾಡಿ ಡಿಲೀಟ್ ಮಾಡಲು ಮನವಿ ಮಾಡಿಕೊಂಡಿದ್ದೆ ಆದರೆ ಆತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಕಾರಣ ಡಿಲೀಟ್ ಮಾಡಲು ಸಮಯವಿಲ್ಲ ಎನ್ನುವಂತೆ attitude ತೋರಿಸಿದ್ದರು ಎಂದು ಹೇಳಿದ್ದರು.
ಲೀಗಲ್ ನೋಟಿಸ್
ಒಂದು ಸಲ ಹಾಗೆ ಹೇಳಿದ್ದರು ಓಕೆ...ಅದಾದ ಮೇಲೆ ಮತ್ತೆ ಎರಡು ಸಲ ಕೇಳಿದರೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದ ಕಾರಣ ನಾನು ಲೀಗಲ್ ಆಗಿ ಮುಂದುವರೆದೆ. ಈ ಸಂಬಂಧವನ್ನು ಮರೆತು ನಾನು ಜೀವನ ನಡೆಸಬೇಕು ನನಗೂ ಮುಂದೆ ಮದುವೆ ಆಗಬೇಕು ಇಷ್ಟ ಪಡುವ ವ್ಯಕ್ತಿ ಜೊತೆ ಜೀವನ ಮಾಡಬೇಕು ....ನನ್ನ ಹಳೆ ಜೀವನದ ಯಾವುದೇ ಸುಳಿವು ಎಲ್ಲಿಯೂ ಸಿಗಬಾರದು ಅನ್ನೋ ಕಾರಣ ಹೀಗೆ ಮಾಡಿದೆ ಎಂದು ಸಂದರ್ಶನದಲ್ಲಿ ವರ್ಷ ಕಾವೇರಿ ಮಾತನಾಡಿದ್ದರು. ಈಗ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಹೊಸ ಬದುಕನ್ನು ಕಂಡುಕೊಳ್ಳಲು ಮುಂದಾಗಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.













