'Love Haze' ಎನ್ನುವ ಭಯಾನಕ ಖಾಯಿಲೆ… ಪ್ರೀತಿಯಲ್ಲಿ ಬೀಳೋ ಮುನ್ನ ಇರಲಿ ಎಚ್ಚರ
ಪ್ರೀತಿಯಲ್ಲಿ ಕುರುಡಾಗುವುದು ಮತ್ತು ಹುಚ್ಚರಾಗುವುದು ಮುಂತಾದ ಪದಗಳು ಪ್ರತಿದಿನ ಕೇಳಿಬರುತ್ತವೆ, ಆದರೆ ನೀವು ಎಂದಾದರೂ Love Haze ಬಗ್ಗೆ ಕೇಳಿದ್ದೀರಾ? ಇಲ್ಲದಿದ್ದರೆ, ಈ ಲೇಖನ ನಿಮಗಾಗಿ. ನೀವು ಪ್ರೀತಿಯ ಈ ರೋಗಕ್ಕೆ ಬಲಿಯಾಗುವ ಮೊದಲು, ನೀವು ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು.

ಪ್ರೀತಿ ಮತ್ತು ವಾತ್ಸಲ್ಯದಂತಹ ಪದಗಳು ಎಷ್ಟು ಮುದ್ದಾದವು ಅಲ್ವಾ?, ಪ್ರೀತಿ ಮಾಡುವವರ ಭಾವನೆಯೂ ಅಷ್ಟೇ ಸುಂದರವಾಗಿರುತ್ತೆ. ಪ್ರೀತಿಯನ್ನು ಅನುಭವಿಸುವ, ವ್ಯಕ್ತಪಡಿಸುವ ಮತ್ತು ಕರೆಯುವ ವಿಧಾನವೂ ವಿಭಿನ್ನವಾಗಿದೆ. ಈ ಬದಲಾಗುತ್ತಿರುವ ಪ್ರಪಂಚದಲ್ಲಿ ಡೇಟಿಂಗ್ ಟ್ರೆಂಡ್ (dating trend) ಕೂಡ ಬದಲಾಗುತ್ತಲೇ ಇರುತ್ತೆ. ಇದೀಗ ಹೊಸದೊಂದು ಪದ ಈ ಟ್ರೆಂಡಿಂಗ್ ಜಗತ್ತಿನಲ್ಲಿ ಟ್ರೆಂಡ್ ಆಗುತ್ತಿದೆ. ಅದರ ಬಗ್ಗೆ ತಿಳಿಯೋಣ.
ಇವತ್ತು ನಾವು 'Love Haze’ ಎಂಬ ರಿಲೇಶನ್’ಶಿಪ್ ಗೆ ಸಂಬಂಧಿಸಿದ ಪದದ ಬಗ್ಗೆ ಮಾತನಾಡುತ್ತಿದ್ದೇವೆ, ಇದು ರೋಗದಷ್ಟೇ ಅಪಾಯಕಾರಿಯಾದ ವಿಷಯ. ಅನಾರೋಗ್ಯವು ದೇಹವನ್ನು ಟೊಳ್ಳಾಗಿಸುವಂತೆ, ಆದರೆ ಈ 'Love Haze; ಸಂಬಂಧವನ್ನು ಹಾಳುಮಾಡುವ ಭಯಾನಕ ಖಾಯಿಲೆಯಾಗಿದೆ. ಪ್ರೀತಿಯಲ್ಲಿ ಬೀಳುವ ಮೊದಲು ಅಥವಾ ನಂತರ ನೀವು ಅದರ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನ ತಿಳಿದುಕೊಂಡರೆ, ನೀವು ಪ್ರೀತಿಯಲ್ಲಿ ಮೋಸ ಹೋಗೋದು, ಕೊರಗೋದು ತಪ್ಪುತ್ತೆ.
'Love Haze’ ಎಂದರೇನು?
'Love Haze’ ಅನ್ನೋದು ಸಂಬಂಧದಲ್ಲಿ ಪ್ರೀತಿಯ ಆಳವನ್ನು ತಿಳಿಸುತ್ತದೆ, ಆದರೆ ಇದು ನಕಾರಾತ್ಮಕವಾಗಿ ಒಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತೆ. ಒಬ್ಬ ವ್ಯಕ್ತಿಯು ತನ್ನ ಸಂಗಾತಿಯೊಂದಿಗೆ ಪ್ರೀತಿಯಲ್ಲಿ ಎಷ್ಟು ಮುಳುಗುತ್ತಾರೆ ಎಂದರೆ ಅವರಿಗೆ ಸಂಗಾತಿಯ ತಪ್ಪುಗಳು ಸಹ ಕಾಣೋದೆ ಇಲ್ಲ. ಈ ಪರಿಸ್ಥಿತಿಯಲ್ಲಿ, ಸಂಗಾತಿಯನ್ನು ಹೊರತುಪಡಿಸಿ ಅವರಿಗೆ ಬೇರೆ ಏನೂ ಕಾಣುವುದಿಲ್ಲ, ಸಂಗಾತಿಯ ತಪ್ಪು ಸಹ ಅವರಿಗೆ ಸರಿ ಎಂದು ತೋರುತ್ತದೆ. ಈ ಸ್ಥಿತಿಯನ್ನು 'Love Haze’ ಎಂದು ಕರೆಯಲಾಗುತ್ತದೆ.
'Love Haze’ ನ ಅನಾನುಕೂಲತೆಗಳೇನು?
ನೀವು ಯಾರನ್ನಾದರೂ ಕುರುಡಾಗಿ ನಂಬಿದರೆ, ಅದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ, ನಷ್ಟವನ್ನು ಸಹ ಅನುಭವಿಸುತ್ತೀರಿ. ಸಂಗಾತಿಯು ನಿಮ್ಮ ಸುತ್ತಲೂ ಪ್ರೀತಿ ಹೆಸರಿನಲ್ಲಿ ಬೇಲಿ ಕಟ್ಟುವ ಪರಿಸ್ಥಿತಿಯ ನಿರ್ಮಾಣವಾಗುತ್ತೆ. ಇದರಿಂದ ಒಬ್ಬ ಸಂಗಾತಿ ಇನ್ನೊಬ್ಬರನ್ನು ನಿಯಂತ್ರಿಸಲು ಪ್ರಾರಂಭಿಸುತ್ತಾರೆ.
ಆರಂಭದಲ್ಲಿ, ಪ್ರೀತಿ ಹೆಚ್ಚಾಗಿದ್ದಾಗ, ಇದೆಲ್ಲಾ ಸಮಸ್ಯೆ ಅಂತಾನೆ ಅನಿಸೋದಿಲ್ಲ, ಆದರೆ ಸಮಯದೊಂದಿಗೆ, ಸಂಬಂಧಗಳು ವಿಷಕಾರಿಯಾಗೋದಕ್ಕೆ ಶುರುವಾಗುತ್ತೆ. ಸರಿ ಮತ್ತು ತಪ್ಪುಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಸಹ ನೀವು ಕಳೆದುಕೊಳ್ಳುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಯಾವಾಗ ನಿಮ್ಮ ಜೊತೆ ಕೆಟ್ಟದಾಗುತ್ತದೆ ಅನ್ನೋದು ಸಹ ತಿಳಿಯೋದಿಲ್ಲ.
ಪ್ರೀತಿಯಲ್ಲಿ ಹುಚ್ಚರಾಗಿರುವ ಸ್ಥಿತಿಯೇ 'Love Haze’
'Love Haze’ ಎಂದರೆ ಹುಚ್ಚು ಪ್ರೀತಿಯಲ್ಲಿ ಇರುವ ಸ್ಥಿತಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಒಬ್ಬರು ತಮ್ಮ ಸಂಗಾತಿಯ ತಪ್ಪುಗಳನ್ನು ಸಹ ಕಡೆಗಣಿಸುವಷ್ಟು ಹುಚ್ಚಾಗಿ, ಕುರುಡಾಗಿ ಪ್ರೀತಿಸುತ್ತಾರೆ ಸಂಗಾತಿಯ ತಪ್ಪು ಅವರಿಗೆ ತಪ್ಪಾಗಿ ಕಾಣಿಸೋದೆ ಇಲ್ಲ. ಇದು ಸಾಮಾನ್ಯ ಅನುಭವವಾಗಿದ್ದರೂ, ಸಂಬಂಧವು ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸುವುದು ಮುಖ್ಯ. ನಿಮ್ಮವರನ್ನು ನೀವು ನಂಬಿ, ಆದರೆ ಕುರುಡು ನಂಬಿಕೆ ಇದ್ದರೆ ನಾಶವಾಗೋದು ಖಂಡಿತಾ.
'Love Haze’ ತಪ್ಪಿಸುವುದು ಹೇಗೆ?
'Love Haze’ ನಂತಹ ಅಪಾಯಕಾರಿ ಸ್ಥಿತಿಯನ್ನು ತಪ್ಪಿಸಲು, ನೀವು ಕುರುಡಾಗಿ ಪ್ರೀತಿಸುವ ಬದಲು, ನಿಮ್ಮ ಹೃದಯ, ಮನಸ್ಸಿನ ಕಣ್ಣುಗಳನ್ನು ತೆರೆದು ಪ್ರೀತಿಸಿ. ನಿಮ್ಮ ಸಂಗಾತಿಯನ್ನು ನಂಬಿ, ಆದರೆ ಅವರು ಹೇಳುವ ಮಾತುಗಳು, ಅವರ ನಡೆ, ನುಡಿ ಕಡೆಗೂ ಗಮನ ಇರಲಿ. ಸಂಗಾತಿಯ ಕೆಟ್ಟ ಗುಣಗಳನ್ನು ಯಾವತ್ತಿಗೂ ನಿರ್ಲಕ್ಷಿಸಬೇಡಿ. ನಿಮಗೆ ಯಾವುದು ತಪ್ಪು ಎಂದು ಅನಿಸುತ್ತೋ, ಅದರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ, ಕಮ್ಯೂನಿಕೇಶನ್ ಗ್ಯಾಪ್ ಗೆ ಜಾಗ ಕೊಡಬೇಡಿ. ಸಣ್ಣ ತಪ್ಪು ತಾನೇ, ಪರವಾಗಿಲ್ಲ ಎಂದು ಸುಮ್ಮನಿದ್ದರೆ, ಅದುವೇ ಮುಂದೆ ದೊಡ್ಡ ಹೆಮ್ಮರವಾಗಿ ಬೆಳೆಯಬಹುದು. ನೀವು ಕೂಡ 'Love Haze’ ಎನ್ನುವ ಪ್ರೀತಿಯ ಭಯಾನಕ ಕಾಯಿಲೆಯಲ್ಲಿ ನರಳುವ ಮುನ್ನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಕಲಿಯಿರಿ.