ಯಾವ ದೇಶಗಳಲ್ಲಿ ಅತ್ಯಂತ ಕಡಿಮೆ ಡಿವೋರ್ಸ್ ಆಗುತ್ತೆ? ಕಾರಣ ಏನು?
Divorce: ಮದುವೆಯನ್ನು ಏಳು ಜನ್ಮಗಳ ಬಂಧವೆಂದು ಪರಿಗಣಿಸಲಾಗುವ ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಕಡಿಮೆ. ಧಾರ್ಮಿಕ ನಂಬಿಕೆಗಳು, ಕೌಟುಂಬಿಕ ಮೌಲ್ಯಗಳು ಮತ್ತು ಕಠಿಣ ಕಾನೂನುಗಳಿಂದಾಗಿ ವಿಚ್ಛೇದನವನ್ನು ನಿರುತ್ಸಾಹಗೊಳಿಸಲಾಗುತ್ತದೆ.

ದೇವರು ಗಂಡಿಗೊಂದು ಹೆಣ್ಣು ಅಥವಾ ಹೆಣ್ಣಿಗೊಂದು ಗಂಡು ಅಂತ ಸೃಷ್ಟಿ ಮಾಡಿರುತ್ತಾನೆ ಎಂಬ ಮಾತಿದೆ. ಜೀವನಕ್ಕೆ ಒಂದು ಸಂಗಾತಿ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಇತ್ತೀಚೆಗೆ ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ನವಜೋಡಿ ಕೋರ್ಟ್ ಮೆಟ್ಟಿಲೇರಿರುತ್ತಾರೆ. ಹೊಂದಾಣಿಕೆ ಅನ್ನೋ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ.
ವಿಶೇಷವಾಗಿ ಸೆಲಿಬ್ರಿಟಿಗಳು ಅಂತ ಗುರುತಿಸಿಕೊಂಡವರೇ ವಿಚ್ಛೇದನ ಪಡೆಯುವ ಸರತಿ ಸಾಲಿನಲ್ಲಿ ನಿಂತಂತೆ ಕಾಣಿಸುತ್ತಿದೆ. ಇನ್ನು ಕೆಲವರು ಸುದೀರ್ಘ ತಮ್ಮದೇ ಆದ ಕಾರಣಗಳನ್ನು ನೀಡಿ ದೂರವಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಎಂಬ ಟ್ಯಾಗ್ ಸದಾ ಟ್ರೆಂಡಿಂಗ್‌ನಲ್ಲಿರುತ್ತವೆ. ಇಂದು ಎಲ್ಲಾ ಕಡೆಯಲ್ಲಿಯೂ ಡಿವೋರ್ಸ್ ಪ್ರಕರಣಗಳು ದಾಖಲಾಗುತ್ತಿರುತ್ತಿವೆ. ಹಾಗಾದ್ರೆ ಯಾವ ದೇಶದಲ್ಲಿ ಅತ್ಯಂತ ಕಡಿಮೆ ಡಿವೋರ್ಸ್ ಪ್ರಕರಣಗಳು ದಾಖಲಾಗುತ್ತವೆ ಎಂದು ನೋಡೋಣ ಬನ್ನಿ.
ವಿಚ್ಛೇದನ ದರವನ್ನು ಆ ದೇಶದ ಸಂಸ್ಕೃತಿಕ, ಕಾನೂನು ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ನಿರ್ಧರಿಸಲಾಗುತ್ತದೆ. ಕಡಿಮೆ ಡಿವೋರ್ಸ್ ಪಡೆಯುವ ದೇಶಗಳಲ್ಲಿ ವಿಚ್ಚೇದನ ಕಾನೂನುಗಳು ಕಠಿಣವಾಗಿವೆ. ಈ ಕಾರಣದಿಂದಲೂ ಇಲ್ಲಿಯ ಜನರು ವಿಚ್ಚೇದನದಿಂದ ಹಿಂದೆ ಸರಿಯುತ್ತಾರೆ. ಕೆಲವು ಸ್ಥಳಗಳಲ್ಲಿ ವಿಚ್ಛೇದನ ಸಾಮಾನ್ಯವಾಗಿದ್ದರೆ, ಇನ್ನು ಕೆಲವು ಸ್ಥಳಗಳಲ್ಲಿ ಅದನ್ನು ಕೊನೆಯ ಆಯ್ಕೆಯಾಗಿ ತೆಗೆದುಕೊಳ್ಳಲಾಗುತ್ತದೆ.
ಭಾರತದಲ್ಲಿ ಮದುವೆಯನ್ನು ಏಳು ಜನ್ಮಗಳ ಬಂಧವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಮದುವೆಗಳು ಅಷ್ಟು ಬೇಗ ಮುರಿದು ಬೀಳಲ್ಲ. ಭಾರತದಲ್ಲಿ ಮದುವೆ ಅನ್ನೋದು ಪವಿತ್ರ ಬಂಧವಾಗಿದ್ದು, ಎರಡು ಕುಟುಂಬಗಳ ಸಮ್ಮಿಲನವಾಗಿರುತ್ತದೆ. ಈ ಕಾರಣದಿಂದ ಭಾರತವು ಸಹ ಅತಿ ಕಡಿಮೆ ಡಿವೋರ್ಸ್ ಪ್ರಕರಣ ದಾಖಲಾಗುವ ದೇಶಗಳಲ್ಲಿ ಒಂದಾಗಿದೆ.
ವರದಿಗಳ ಪ್ರಕಾರ ಯಾವ ದೇಶದಲ್ಲಿ ಅತಿ ಕಡಿಮೆ ವಿಚ್ಛೇದನ ಪ್ರಕರಣಗಳು ದಾಖಲಾಗುತ್ತವೆ?
ಕತಾರ್, ಐರ್ಲೆಂಡ್ ಮತ್ತು ಯುಎಇಗಳಂತಹ ದೇಶಗಳಲ್ಲಿ ಅಧಿಕವಾಗಿ ಡಿವೋರ್ಸ್ ಪ್ರಕರಣಗಳು ದಾಖಲಾಗುವುದಿಲ್ಲ. ಇಲ್ಲಿಯ ಜನರು ಸಮಾಜದ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಡಿವೋರ್ಸ್ ಅನ್ನೋದು ಇವರ ಅಂತಿಮ ಆಯ್ಕೆಯಾಗಿರುತ್ತದೆ.
ಈ ದೇಶಗಳಲ್ಲಿ ಸಂಸ್ಕೃತಿ ಮಾತ್ರವಲ್ಲ, , ಕಾನೂನುಗಳು ಸಹ ವಿಚ್ಛೇದನವನ್ನು ಕಷ್ಟಕರವಾಗಿಸುತ್ತದೆ. ಈಗ ಕೆಲವು ದೇಶಗಳಲ್ಲಿನ ವಿಚ್ಛೇದನ ಅಂಕಿಅಂಶಗಳು ಹೀಗಿವೆ. ಶ್ರೀಲಂಕಾದಲ್ಲಿ 1000ರಲ್ಲಿ ಶೇ.015ರಷ್ಟು ಜನರು ವಿಚ್ಛೇದನ ಪಡೆಯುತ್ತಾರೆ. ಗ್ವಾಟೆಮಾಲಾ ಮತ್ತ ವಿಯೆಟ್ನಾಂನಲ್ಲಿ ಶೇ.0.2ರಷ್ಟು ಜನರು ಮಾತ್ರ ವಿಚ್ಛೇದನ ಪಡೆದುಕೊಳ್ಳುತ್ತಾರೆ.
ಪೆರು- ಶೇ.0.5, ಚಿಲಿ-ಶೇ. 0.7, ಗ್ರೆನಡೈನ್ಸ್ ಮತ್ತು ಸೇಂಟ್ ವಿನ್ಸೆಂಟ್ ಶೇ.0.4, ಮತ್ತು ದಕ್ಷಿಣ ಆಫ್ರಿಕಾ ಶೇ.0.6. ರಷ್ಟು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತವೆ. ಧಾರ್ಮಿಕ ನಂಬಿಕೆಗಳು, ಕೌಟುಂಬಿಕ ಮೌಲ್ಯಗಳು ಮತ್ತು ಕಠಿಣ ಕಾನೂನುಗಳಿಂದಾಗಿ ವಿಚ್ಛೇದನವನ್ನು ನಿರುತ್ಸಾಹಗೊಳಿಸಲಾಗುತ್ತದೆ. ಅದಕ್ಕಾಗಿಯೇ ಈ ದೇಶಗಳಲ್ಲಿ ಕಡಿಮೆ ವಿಚ್ಛೇದನ ಪ್ರಕರಣ ದಾಖಲಾಗುತ್ತವೆ.