Valentine's Day: ಕೆಂಪಲ್ಲ, ಈ ಬಣ್ಣಗಳ ಗುಲಾಬಿಗಳು ಸಹ ವಿಶೇಷವಾಗಿದೆ!
ವ್ಯಾಲೆಂಟೈನ್ಸ್ ವೀಕ್ (valentines week) ರೋಸ್ ಡೇಯೊಂದಿಗೆ ಪ್ರಾರಂಭವಾಗುತ್ತದೆ. ಈ ದಿನ, ಜನರು ತಮ್ಮ ಸಂಗಾತಿಗೆ ಕೆಂಪು ಗುಲಾಬಿಗಳನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ, ಯಾರಾದರೂ ಯಾರನ್ನಾದರೂ ಇಷ್ಟಪಟ್ಟರೆ ಅಥವಾ ಸ್ನೇಹಿತರಾಗಲು ಬಯಸಿದರೆ, ಯಾವ ಗುಲಾಬಿಯನ್ನು ನೀಡಬೇಕು? ಇಲ್ಲಿದೆ ನೋಡಿ ಆ ಬಗ್ಗೆ ಮಾಹಿತಿ.
ಹಳದಿ ಗುಲಾಬಿ (Yellow Rose)
ಹಳದಿ ಗುಲಾಬಿ ಹೊಸ ಸ್ನೇಹದ ಸಂಕೇತ. ನೀವು ಯಾರೊಂದಿಗಾದರೂ ಸ್ನೇಹಿತರಾಗಲು ಬಯಸಿದರೆ, ಖಂಡಿತವಾಗಿಯೂ ಅವರಿಗೆ ಈ ಬಣ್ಣದ ಗುಲಾಬಿಯನ್ನು ನೀಡಿ. ಇದು ಪ್ರೀತಿಯ ವಾರ ಆಗಿರೋದರಿಂದ ನಿಮ್ಮ ಇಷ್ಟದ ಸ್ನೇಹಿತರಿಗೆ ಇದನ್ನು ನೀಡಬಹುದು.
ಗುಲಾಬಿ (Pink Rose)
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಆದರೆ ಅದನ್ನು ವ್ಯಕ್ತಪಡಿಸದಿದ್ದರೆ, ರೋಸ್ ಡೇಯಂದು ಗುಲಾಬಿ ಬಣ್ಣದ ಗುಲಾಬಿಯನ್ನು ನೀಡುವ ಮೂಲಕ ನೀವು ಪ್ರಪೋಸ್ ಮಾಡಬಹುದು. ಅಥವಾ ಕೇವಲ ಗುಲಾಬಿ ರೋಸ್ ನೀಡಿದ್ರೆ ಅದರರ್ಥ ನೀವು ಅವರನ್ನು ಇಷ್ಟಪಡ್ತೀರಿ ಅನ್ನೋದನ್ನು ತಿಳಿಸುತ್ತೆ.
ಕಿತ್ತಳೆ (Orange Rose)
ಕಿತ್ತಳೆ ಬಣ್ಣದ ಗುಲಾಬಿ ಆಕರ್ಷಣೆಯ ಸಂಕೇತ. ನೀವು ಯಾರನ್ನಾದರೂ ಇಷ್ಟಪಟ್ಟರೆ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವನ್ನು ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆ ಕೊಂಡೊಯ್ಯಲು ಬಯಸಿದರೆ, ಕಿತ್ತಳೆ ಗುಲಾಬಿಗಳನ್ನು ನೀಡಿ. ಇದರ ಜೊತೆ ಒಂದು ಸಣ್ಣ ನೋಟ್ ಸಹ ಬರೆಯಬಹುದು.
ನೀಲಿ (Blue Rose)
ಶಾಂತಿಯ ಸಂದೇಶವನ್ನು ತಿಳಿಸಲು ನೀಲಿ ಗುಲಾಬಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ರಹಸ್ಯವನ್ನು ಸಂಕೇತಿಸಲು ಅಥವಾ ಅಸಾಧ್ಯವಾದುದನ್ನು ಸಾಧಿಸಲು ನೀಲಿ ಗುಲಾಬಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇಂತಹ ಹೂವುಗಳು ಹೆಚ್ಚಾಗಿ ಲಭ್ಯವಿಲ್ಲ.
ಕಪ್ಪು (Black Rose)
ಕಪ್ಪು ರೋಸ್ ಸಿಗೋದು ಅಪರೂಪ. ಆದರೆ ಇದನ್ನು ನೀಡೋದು ಎಂದರೆ ದ್ವೇಷದ ಭಾವನೆ ಎಂದು ಅರ್ಥ. ಪ್ರೀತಿಯ ಈ ತಿಂಗಳಲ್ಲಿ ಅಸಮಾಧಾನ, ದ್ವೇಷ, ಕೋಪ ಯಾವುದೂ ಇರಬಾರದು. ಆದರೆ ಯಾರಾದರೂ ಕಪ್ಪು ಗುಲಾಬಿಗಳನ್ನು ನೀಡಿದರೆ ಅದು ದ್ವೇಷದ ಸಂಕೇತವೆಂದು (Symbol of enmity) ಪರಿಗಣಿಸಲಾಗುತ್ತದೆ.
ಬಿಳಿ (White Rose)
ಬಿಳಿ ಬಣ್ಣ ಶಾಂತಿಯ ಸಂಕೇತ. ಇದು ಇಬ್ಬರ ನಡುವಿನ ಕಲಹ, ಮನಸ್ಥಾಪವನ್ನು ದೂರ ಮಾಡುತ್ತದೆ. ಬಿಳಿ ಗುಲಾಬಿಗಳನ್ನು ನೀಡುವ ಮೂಲಕ ಸಂಬಂಧದಲ್ಲಿನ ದೂರುಗಳು, ಅಸಮಾಧಾನಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ..
ಪೀಚ್ (Peach color Rose)
ಪೀಚ್ ಬಣ್ಣದ ಗುಲಾಬಿಗಳನ್ನು ಪ್ರೀತಿ ಮತ್ತು ಸಹಾನುಭೂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಅದನ್ನು ನಿಮ್ಮ ಹತ್ತಿರದ ಯಾರಿಗಾದರೂ ನೀಡಬಹುದು. ಇದು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.